ಕರ್ನಾಟಕ

karnataka

ETV Bharat / bharat

ಅಸ್ಸೋಂ ಉಪಚುನಾವಣೆ: 4 ವಿಧಾನಸಭಾ ಕ್ಷೇತ್ರಗಳಲ್ಲಿ ಬಿರುಸಿನ ಮತದಾನ - ಅಸ್ಸಾಂ ಉಪಚುನಾವಣೆ 2019 ಸುದ್ದಿ

ಅಸ್ಸೋಂನ 4 ವಿಧಾನಸಭಾ ಕ್ಷೇತ್ರಗಳಿಗೆ ಇಂದು ಉಪಚುನಾವಣೆ ನಡೆಯುತ್ತಿದ್ದು, ಮತದಾರರು ಬಿರುಸಿನ ಮತದಾನದಲ್ಲಿ ತೊಡಗಿದ್ದಾರೆ. ಬೆಳಗ್ಗೆ 11ರವರೆಗೆ ಒಟ್ಟು ನಾಲ್ಕು ವಿಧಾನಸಭಾ ಕ್ಷೇತ್ರಗಳಲ್ಲಿ 24.94 ಶೇ. ಮತದಾನವಾಗಿದೆ.

ಅಸ್ಸಾಂ ಉಪಚುನಾವಣೆ

By

Published : Oct 21, 2019, 1:10 PM IST

ರತಾಬರಿ(ಅಸ್ಸಾಂ): ಅಸ್ಸೋಂನ 4 ವಿಧಾನಸಭಾ ಕ್ಷೇತ್ರಗಳಿಗೆ ನಡೆಯುತ್ತಿರುವ ಉಪಚುನಾವಣೆಯಲ್ಲಿ ಮತದಾರರು ಬಿರುಸಿನ ಮತದಾನದಲ್ಲಿ ತೊಡಗಿದ್ದಾರೆ.

ರತಾಬರಿ, ಸೋನಾರಿ, ರಂಗಪರ ಮತ್ತು ಜಾನಿಯಾ ವಿಧಾನಸಭಾ ಕ್ಷೇತ್ರಗಳಿಗೆ ಉಪಚುನಾವಣೆ ನಡೆಯುತ್ತಿದ್ದು, ನಾಲ್ಕು ಕ್ಷೇತ್ರಗಳಲ್ಲಿ ಒಟ್ಟು 6,77,367 ಮತದಾರರಿದ್ದಾರೆ. 830 ಮತ ಮತಕೇಂದ್ರಗಳಲ್ಲಿ ಇಂದು ಮುಂಜಾನೆಯಿಂದಲೇ ಬಿಗಿ ಭದ್ರತೆಯ ನಡುವೆ ಮತದಾನ ನಡೆಯುತ್ತಿದೆ.

ಅಸ್ಸೋಂ ಉಪಚುನಾವಣೆ: ಬಿರುಸಿನ ಮತದಾನ

ಬಿಜೆಪಿ ಶಾಸಕರಾಗಿದ್ದ ಕೃಪನಾಥ್ ಮಲ್ಲಾ (ರತಾಬರಿ), ತಪನ್ ಗೊಗೊಯ್ (ಸೋನಾರಿ) ಮತ್ತು ಪಲ್ಲಾಬ್ ಲೋಚನ್ ದಾಸ್ (ರಂಗಪರ) ಮತ್ತು ಕಾಂಗ್ರೆಸ್ ಶಾಸಕ ಅಬ್ದುಲ್ ಕಲಾಕ್ (ಜಾನಿಯಾ), 2019ರ ಲೋಕಸಭಾ ಚುನಾವಣೆಯಲ್ಲಿ ಸ್ಪರ್ಧಿಸಿ ಜಯಗಳಿಸಿದ ನಂತರ ಈ ಉಪಚುನಾವಣೆ ಮಹತ್ವ ಪಡೆದಿದೆ.

ಶೇಕಡಾವಾರು ಮತದಾನ (ಬೆಳಗ್ಗೆ 11ರವರೆಗೆ):

  • ರತಾಬರಿ :36.18
  • ಸೋನಾರಿ :19.02
  • ರಂಗಪರ :15
  • ಜಾನಿಯಾ :29.56

ABOUT THE AUTHOR

...view details