ಕರ್ನಾಟಕ

karnataka

ETV Bharat / bharat

ಏಷ್ಯಾದ ಅತೀ ಎತ್ತರದ ವ್ಯಕ್ತಿಗೆ ಮದುವೆಯಾಗಲು ಸಂಗಾತಿಯೇ ಸಿಕ್ತಿಲ್ವಂತೆ! - ಏಷ್ಯಾದ ಅತಿ ಎತ್ತರದ ವ್ಯಕ್ತಿ ಧರ್ಮೇಂದ್ರ ಪ್ರತಾಪ್​ ಸಿಂಗ್

ಘಟನೆಯೊಂದರಲ್ಲಿ ಮೊಣಕಾಲುಗಳು ಎರಡೂ ಹಾನಿಗೊಳಗಾದಾಗ ಧರ್ಮೇಂದ್ರ ಅವರು ತೀವ್ರ ಸಂಕಷ್ಟಕ್ಕೆ ಒಳಗಾಗಿದ್ದಾರೆ. ಆರ್ಥಿಕ ಸಹಾಯ ಮಾಡುವಂತೆ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರನ್ನು ಕೋರಿದ್ದಾರೆ. ಆದರೆ, ಈವರೆಗೂ ಇನ್ನು ಏನೂ ಸಿಕ್ಕಿಲ್ಲ..

Asia's tallest person
ಏಷ್ಯಾದ ಅತೀ ಎತ್ತರದ ವ್ಯಕ್ತಿ

By

Published : Nov 3, 2020, 3:33 PM IST

ಪ್ರತಾಪ್​ಗಡ (ಉತ್ತರ ಪ್ರದೇಶ):ಏಷ್ಯಾದ ಅತಿ ಎತ್ತರದ ವ್ಯಕ್ತಿ ಎಂದೇ ಖ್ಯಾತಿ ಪಡೆದಿರುವ ಇಲ್ಲಿನ ನರ್ಹಾಪುರ್​​ ಕಾಸಿಯಾಹಿ ನಿವಾಸಿ ಧರ್ಮೇಂದ್ರ ಪ್ರತಾಪ್​ ಸಿಂಗ್​ ಅವರಿಗೆ ಮದುವೆಯಾಗಲು ಜೀವನ ಸಂಗಾತಿಯೇ ಸಿಗುತ್ತಿಲ್ಲವಂತೆ! ಅವರ ಎತ್ತರವೇ ಅದಕ್ಕೆ ಕಾರಣ.

ಲಾಕ್​​ಡೌನ್​​ ನಂತರ ಧರ್ಮೇಂದ್ರ ಅವರು ತೀರ ಬಡತನಕ್ಕೆ ಸಿಲುಕಿದರು. ಅವರ ಹೆಚ್ಚು ಎತ್ತರ ಇರುವುದರಿಂದ ಮದುವೆ ಪ್ರಸ್ತಾಪಗಳು ಬರುತ್ತಿಲ್ಲ. ಇದು ಅವರನ್ನು ಮತ್ತಷ್ಟು ತಲ್ಲಣಗೊಳಿಸಿದೆ.

ಈ ಕುರಿತು ಮಾತನಾಡಿದ ಅವರು, ಈಗಾಗಲೇ ನನಗೆ ಮದುವೆ ವಯಸ್ಸು ದಾಟಿದೆ. ಮದುವೆಯಾಗಲು ಉತ್ಸುಕನಾಗಿದ್ದಾಗ ಮತ್ತು ಕೆಲ ಪ್ರಸ್ತಾಪಗಳೂ ಬಂದಾಗ ಹೆಣ್ಣಿನ ಕಡೆಯವರು ಎತ್ತರವನ್ನೇ ಹೆಚ್ಚು ಪ್ರಶ್ನಿಸಿದ್ದಾರೆ. ಈವರೆಗೂ ನೋಡಿದ ಹುಡುಗಿಯಲ್ಲಿ ಯಾರೊಬ್ಬರೂ ಸಾಕಷ್ಟು ಎತ್ತರ ಇರಲಿಲ್ಲ. ನನಗಿಂತ ಕಡಿಮೆ ಎತ್ತರ ಇರುವವರು ನನ್ನನ್ನು ಮದುವೆಯಾಗಲು ಸಿದ್ಧರಿಲ್ಲ ಎಂದರು.

ಘಟನೆಯೊಂದರಲ್ಲಿ ಮೊಣಕಾಲುಗಳು ಎರಡೂ ಹಾನಿಗೊಳಗಾದಾಗ ಧರ್ಮೇಂದ್ರ ಅವರು ತೀವ್ರ ಸಂಕಷ್ಟಕ್ಕೆ ಒಳಗಾಗಿದ್ದಾರೆ. ಆರ್ಥಿಕ ಸಹಾಯ ಮಾಡುವಂತೆ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರನ್ನು ಕೋರಿದ್ದಾರೆ. ಆದರೆ ಈವರೆಗೂ ಇನ್ನು ಏನೂ ಸಿಕ್ಕಿಲ್ಲ. ಗುಜರಾತ್‌ನ ಅಹಮದಾಬಾದ್‌ನ ಆಸ್ಪತ್ರೆಯೊಂದು ಯಾವುದೇ ವೆಚ್ಚವನ್ನು ವಿಧಿಸದೆ ಚಿಕಿತ್ಸೆ ನೀಡಿದ ನಂತರ ಅವರ ಅವಸ್ಥೆಯ ಕುರಿತು ವರದಿ ಮಾಡಿದ್ದಕ್ಕಾಗಿ ಮಾಧ್ಯಮಗಳಿಗೆ ಕೃತಜ್ಞತೆ ಅರ್ಪಿಸಿದರು.

ಧರ್ಮೇಂದ್ರ ಅವರ ಎತ್ತರ ಅನೇಕ ತೊಂದರೆಗಳಿಗೆ ಎಡೆಮಾಡಿಕೊಟ್ಟಿದೆ. ಅವರ ಕಾಲಿಗೆ ಸರಿ ಹೊಂದುವ ಯಾವುದೇ ಚಪ್ಪಲಿ ಸಿಗುತ್ತಿಲ್ಲ. ಇಂತಹ ಪರಿಸ್ಥಿತಿ ತಲೆದೋರಿರುವ ಕಾರಣ ಕೈಯಿಂದ ತಯಾರಿಸಿರುವ ಚಪ್ಪಲಿ ಧರಿಸುತ್ತಾರೆ. ಅವರಿಗೆ ತಿಳಿದಿರುವ ಚಮ್ಮಾರನು ತನ್ನ ಚಪ್ಪಲಿಗಳನ್ನು ಮಾಡಿಕೊಡುತ್ತಾರೆ. ಅವರು ಲಖನೌದಲ್ಲಿ ನೆಲೆಸಿದ್ದಾರೆ. ಮತ್ತೆ ಅವರ ಕುರ್ತಾ ಮತ್ತು ಪೈಜಾಮವನ್ನು ಹೊಲಿಯಲು ಒಂಬತ್ತು ಮೀಟರ್ ಬಟ್ಟೆ ಅಗತ್ಯವಿದೆ.

ಸರ್ಕಾರದ ವಿವಿಧ ಕಲ್ಯಾಣ ಯೋಜನೆಗಳ ಕುರಿತು ಜಾಗೃತಿ ಮೂಡಿಸಲು ಮತ್ತು ಇತರ ಸರ್ಕಾರಿ ಯೋಜನೆಗಳ ಪ್ರಚಾರಕ್ಕಾಗಿ ಬಳಸಿಕೊಳ್ಳಬಹುದು. ಈ ಮೂಲಕ ಆತನ ಆರ್ಥಿಕ ಸಮಸ್ಯೆಗಳಿಗೆ ಪರಿಹಾರ ಸಿಕ್ಕಂತಾಗುತ್ತದೆ.

ABOUT THE AUTHOR

...view details