ಹೋಶಿಯಾರ್‌ಪುರ(ಪಂಜಾಬ್) :ಇಲ್ಲಿನ ಹೋಶಿಯಾರ್‌ಪುರ-ಉನಾ ರಸ್ತೆಯ ಮೂಲಕ ವಾಹನಗಳು ಹಾದುಹೋಗಲು ಹಣ ತೆಗೆದುಕೊಂಡ ಆರೋಪದ ಮೇಲೆ ಸಹಾಯಕ ಪೊಲೀಸ್ ಸಬ್ ಇನ್ಸ್‌ಪೆಕ್ಟರ್ ಮತ್ತು ಇಬ್ಬರು ಹೋಂ ಗಾರ್ಡ್‌ಗಳನ್ನು ಬುಧವಾರ ಅಮಾನತುಗೊಳಿಸಲಾಗಿದೆ.
ಸದರ್ ಪೊಲೀಸ್ ಠಾಣೆಯಲ್ಲಿ ನೇಮಕಗೊಂಡಿರುವ ಎಎಸ್‌ಐ ಅಶ್ವನಿಕುಮಾರ್ ಮತ್ತು ಹೋಂ ಗಾರ್ಡ್‌ಗಳಾದ ಬಲ್ವಂತ್ ಸಿಂಗ್ ಮತ್ತು ಬಲದೇವ್ ಸಿಂಗ್ ಅವರನ್ನು ಆರೋಪ ಕೇಳಿ ಬಂದ ಬಳಿಕ ತಕ್ಷಣದಿಂದಲೇ ಅಮಾನತುಗೊಳಿಸಲಾಗಿದೆ. ಜೊತೆಗೆ ಪ್ರಕರಣ ಕುರಿತು ತನಿಖೆ ನಡೆಸಲಾಗುತ್ತಿದೆ ಎಂದು ಹೋಶಿಯಾರ್‌ಪುರದ ಹಿರಿಯ ಪೊಲೀಸ್ ವರಿಷ್ಠಾಧಿಕಾರಿ ಗೌರವ್ ಗರ್ಗ್ ತಿಳಿಸಿದ್ದಾರೆ.