ರಾಂಚಿ (ಜಾರ್ಖಂಡ್):ತುಪುಡಾನಾದ ಕಲ್ಲಿನ ಕೋರೆಯಲ್ಲಿಪೊಲೀಸ್ ಸಬ್ ಇನ್ಸ್ಪೆಕ್ಟರ್ ಒಬ್ಬರ ಮೃತದೇಹ ಕಲ್ಲಿನ ಕೋರೆಯಲ್ಲಿ ಪತ್ತೆಯಾಗಿದೆ.
ಕಲ್ಲಿನ ಕೋರೆಯಲ್ಲಿ ಎಎಸ್ಐ ಮೃತದೇಹ ಪತ್ತೆ... ಕೊಲೆ ಶಂಕೆ! - ರಾಂಚಿಯಲ್ಲಿ ಎಎಸ್ಐ ಕೊಲೆ
ರಾಂಚಿಯ ತುಪುಡಾನಾ ಬಳಿ ಕಲ್ಲಿನ ಕೋರೆಯಲ್ಲಿ ಎಎಸ್ಐ ಒಬ್ಬರ ಮೃತದೇಹ ಪತ್ತೆಯಾಗಿದೆ. ಕೊಲೆ ಮಾಡಿ ಬಿಸಾಕಿರುವ ಶಂಕೆ ವ್ಯಕ್ತವಾಗಿದೆ.

ಕಲ್ಲಿನ ಕೋರೆಯಲ್ಲಿ ಎಎಸ್ಐ ಮೃತದೇಹ ಪತ್ತೆ
ಮೃತ ಎಎಸ್ಐಯನ್ನು ಕಾಮೇಶ್ವರ ರವಿದಾಸ್ ಎಂದು ಗುರುತಿಸಲಾಗಿದೆ. ಎಎಸ್ಐಯ ಮೂಲ ಪೋಸ್ಟಿಂಗ್ ರಾಂಚಿಯ ರಿಮ್ಸ್ ಆಸ್ಪತ್ರೆಯಲ್ಲಿದ್ದರೂ, ಅವರನ್ನು ತುಪುಡಾನಾ ಒಪಿಯಲ್ಲಿ ಕರ್ತವ್ಯಕ್ಕೆ ನಿಯೋಜಿಸಲಾಗಿತ್ತು. ವರದಿಗಳ ಪ್ರಕಾರ, ರವಿದಾಸ್ರನ್ನು ಕಲ್ಲು ಎತ್ತಿ ಹಾಕಿ ಕೊಲೆ ಮಾಡಿ, 200 ಅಡಿ ಆಳದ ಕೋರೆಗೆ ಎಸೆಯಲಾಗಿದೆ.
ಮದ್ಯ ಸೇವನೆಯ ವೇಳೆ ಕೊಲೆ ನಡೆದಿದೆ ಎಂದು ಶಂಕಿಸಲಾಗಿದೆ. ಘಟನಾ ಸ್ಥಳಕ್ಕೆ ಪೊಲೀಸರು ಆಗಮಿಸಿ ಪರಿಶೀಲನೆ ನಡೆಸಿದ್ದಾರೆ.