ದುಬೈ: ಕಿಂಗ್ಸ್ ಇಲೆವೆನ್ ಪಂಜಾಬ್ ವಿರುದ್ಧದ ಪಂದ್ಯದ ವೇಳೆ ಗಾಯಗೊಂಡಿದ್ದ ಡೆಲ್ಲಿ ಕ್ಯಾಪಿಟಲ್ಸ್ ಸ್ಪಿನ್ನರ್ ರವಿಚಂದ್ರನ್ ಅಶ್ವಿನ್ ಮುಂದಿನ ಪಂದ್ಯಕ್ಕೆ ಲಭ್ಯವಾಗುವ ಸಾಧ್ಯತೆಗಳಿವೆ.
"ನಾನು ಕಳೆದ ಪಂದ್ಯದಲ್ಲಿ ಫೀಲ್ಡ್ನಿಂದ ಹೊರ ಹೋಗುವಾಗ ಸಾಕಷ್ಟು ನೋವಿನಿಂದ ಬಳಲುತ್ತಿದ್ದೆ. ಆದರೆ ನೋವು ನಿವಾರಣೆಯಾಗಿದೆ ಮತ್ತು ಸ್ಕ್ಯಾನ್ ವರದಿಗಳು ಸಾಕಷ್ಟು ಸಹಕಾರಿಯಾಗಿವೆ. ನಿಮ್ಮ ಎಲ್ಲರ ಪ್ರೀತಿ ಮತ್ತು ಬೆಂಬಲಕ್ಕೆ ಧನ್ಯವಾದಗಳು" ಎಂದು ಅಶ್ವಿನ್ ಟ್ವೀಟ್ ಮಾಡಿದ್ದಾರೆ.
ಭಾನುವಾರ ನಡೆದ ಪಂದ್ಯದಲ್ಲಿ ಅಶ್ವಿನ್ ತಮ್ಮ ಮೊದಲ ಓವರ್ ಎಸೆದ ನಂತರ ಫೀಲ್ಡ್ನಿಂದ ಹೊರ ಬರಬೇಕಾಯಿತು. ಇದರಲ್ಲಿ ಅವರು ಎರಡು ವಿಕೆಟ್ ಪಡೆದಿದ್ದರು. ಅಶ್ವಿನ್ ಎಡ ಭುಜಕ್ಕೆ ಪೆಟ್ಟಾಗಿದ್ದರಿಂದ ಗ್ಲೆನ್ ಮ್ಯಾಕ್ಸ್ ವೆಲ್ ಮೊದಲ ಓವರ್ನ ಅಂತಿಮ ಎಸೆತವನ್ನು ಮುಗಿಸಿದರು.
ಸೂಪರ್ ಓವರ್‌ನಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ಪಂದ್ಯ ಗೆದ್ದ ನಂತರ ಮಾತನಾಡಿದ ನಾಯಕ ಶ್ರೇಯಸ್ ಅಯ್ಯರ್, ಅಶ್ವಿನ್ ಮುಂದಿನ ಪಂದ್ಯಕ್ಕೆ ಸಿದ್ಧರಾಗುವುದಾಗಿ ಹೇಳಿದ್ದರು. ಶುಕ್ರವಾರ ನಡೆಯುವ ಚೆನ್ನೈ ಸೂಪರ್ ಕಿಂಗ್ಸ್ ವಿರುದ್ಧದ ಪಂದ್ಯದಲ್ಲಿ ಆಡಲು ಅಶ್ವಿನ್ ಫಿಟ್ ಆಗಿರಲಿದ್ದಾರೆ ಎಂದು ಡಿಸಿ ಮುಖ್ಯ ಕೋಚ್ ರಿಕಿ ಪಾಂಟಿಂಗ್ ಹೇಳಿದ್ದಾರೆ.