ಹೈದರಾಬಾದ್ (ತೆಲಂಗಾಣ):ಎಐಎಂಐಎಂ ಮುಖ್ಯಸ್ಥ ಅಸಾದುದ್ದೀನ್ ಓವೈಸಿ ಮಹಮ್ಮದ್ ಅಲಿ ಜಿನ್ನಾರ ಮತ್ತೊಂದು ಅವತಾರ ಎಂದು ಬಿಜೆಪಿ ಯುವಮೋರ್ಚಾ ಅಧ್ಯಕ್ಷ ತೇಜಸ್ವಿ ಸೂರ್ಯ ಆರೋಪಿಸಿ ವಾಗ್ದಾಳಿ ನಡೆಸಿದ್ದಾರೆ.
ತೆಲಂಗಾಣ ಜನತೆ ಅಭಿವೃದ್ಧಿಗೆ ಮತ ನೀಡಲಿದ್ದಾರೆ. ನಾವು ದೇಶದಲ್ಲಿ ಕುಟುಂಬ ರಾಜಕಾರಣವನ್ನು ತೊಡೆದುಹಾಕಿಲಿದ್ದೇವೆ. ಕಾಶ್ಮೀರದಲ್ಲಿ ಮೆಹಬೂಬಾ ಮಫ್ತಿ, ಉಮರ್ ಅಬ್ದುಲ್ಲಾರನ್ನು ಜನತೆಯೆ ಖಾಯಂ ಆಗಿ ಕ್ವಾರಂಟೈನ್ ಮಾಡಿದ್ದಾರೆ ಎಂದಿದ್ದಾರೆ.
ಪ್ರಧಾನಿ ನರೇಂದ್ರ ಮೋದಿ 100 ಸ್ಮಾರ್ಟ್ ಸಿಟಿ ಘೋಷಿಸಿ ಅದರಲ್ಲಿ ಹೈದರಾಬಾದ್ಗೂ ಅನುದಾನ ನೀಡಿದ್ದಾರೆ. ಆದರೆ, ಆ ಅನುದಾನ ಏನಾಯಿತು.? ಎಐಎಂಐಎಂ ಮುಖ್ಯಸ್ಥ ಓವೈಸಿ ಜಿನ್ನಾರ ಇನ್ನೊಂದು ಅವತಾರ. ಇಷ್ಟೇ ಅಲ್ಲ ಕೆಸಿಆರ್ ಮತ್ತು ಓವೈಸಿ ಒಂದೇ ನಾಣ್ಯದ ಎರಡು ಮುಖಗಳು ಎಂದಿದ್ದಾರೆ.