ಕರ್ನಾಟಕ

karnataka

ETV Bharat / bharat

ಉತ್ತರ ಪ್ರದೇಶ, ಬಿಹಾರದಲ್ಲಿ ವರ್ಷಧಾರೆ ಅನಾಹುತ; ಸಾವಿನ ಸಂಖ್ಯೆ 73ಕ್ಕೆ ಏರಿಕೆ! - ಮಧ್ಯಪ್ರದೇಶ ಮಳೆ

ಮಹಾಮಳೆಗೆ ಉತ್ತರ ಪ್ರದೇಶ ಹಾಗೂ ಬಿಹಾರ ತತ್ತರಿಸಿವೆ. ಬಿಹಾರದಲ್ಲಿ ಇದುವರೆಗೂ ಸುಮಾರು 73 ಜನರು ನೆರೆಗೆ ಸಿಲುಕಿ ಮೃತಪಟ್ಟಿದ್ದಾರೆ ಎಂದು ವರದಿಯಾಗಿದೆ.

ಉತ್ತರ ಪ್ರದೇಶ

By

Published : Sep 29, 2019, 1:22 PM IST

ಲಕ್ನೋ (ಉತ್ತರ ಪ್ರದೇಶ): ಮಹಾಮಳೆಗೆ ಉತ್ತರ ಪ್ರದೇಶ, ಬಿಹಾರ ರಾಜ್ಯಗಳು ತತ್ತರಿಸಿವೆ. ಉಭಯ ರಾಜ್ಯಗಳಲ್ಲಿ ಮಳೆ ಸಂಬಂಧಿ ಪ್ರಕರಣಗಳಲ್ಲಿ ಸುಮಾರು 73 ಜನರು ಮೃತಪಟ್ಟಿದ್ದಾರೆ ಎಂದು ವರದಿಯಾಗಿದೆ.

ಬಿಹಾರದ ಪ್ರಯಾಗರಾಜ್​, ಉತ್ತರ ಪ್ರದೇಶದ ವಾರಣಾಸಿಯಲ್ಲಿ ಭಾರೀ ಪ್ರಮಾಣದಲ್ಲಿ ಮಳೆಯಾಗಿದ್ದು, ಅಪಾರ ಪ್ರಮಾಣದ ಹಾನಿಯಾಗಿದೆ. ಮಳೆಯಿಂದ ಪ್ರಾಣ ಕಳೆದುಕೊಂಡವರ ಕುಟುಂಬಕ್ಕೆ ತಲಾ 4 ಲಕ್ಷ ರೂ. ಪರಿಹಾರ ಹಣ ನೀಡುವುದಾಗಿ ಉತ್ತರಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್​ ಘೋಷಿಸಿದ್ದಾರೆ. ಹಾಗೆಯೇ ರಾಜ್ಯದ ಹಲವೆಡೆ ಇನ್ನೂ ಎರಡೂ ದಿನಗಳ ಕಾಲ ಹೆಚ್ಚು ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ಎಚ್ಚರಿಸಿದೆ.

ಬಿಹಾರದಲ್ಲಿ ವರ್ಷಧಾರೆ ಅಬ್ಬರ:

ಬಿಹಾರದಲ್ಲೂ ವರುಣನ ಆರ್ಭಟಕ್ಕೆ ರೈಲು ಸಂಚಾರ ಸಂಪೂರ್ಣ ಸ್ಥಗಿತವಾಗಿದ್ದು, ಶಾಲಾ ಕಾಲೇಜುಗಳಿಗೆ ರಜೆ ನೀಡಲಾಗಿದೆ. ಎನ್​ಡಿಆರ್​ಎಫ್​ ಹಾಗೂ ಎಸ್​ಡಿಆರ್​ಎಫ್​ ತಂಡಗಳಿಂದ ರಕ್ಷಣಾ ಕಾರ್ಯ ನಡೆಯುತ್ತಿದೆ.

ಭಾಗಲ್ಪುರದಲ್ಲಿ ಗೋಡೆ ಕುಸಿದು ಮೂವರು ಮೃತಪಟ್ಟ ಘಟನೆ ನಡೆದಿದೆ. ಅಲ್ಲದೆ ಹಲವರು ಗೋಡೆಯ ಅವಶೇಷದಡಿ ಸಿಲುಕಿದ್ದು, ರಕ್ಷಣಾ ಕಾರ್ಯ ನಡೆದಿದೆ.

ರಾಜಸ್ತಾನ ಹಾಗೂ ಮಧ್ಯಪ್ರದೇಶದಲ್ಲೂ ಕೂಡ ಮಳೆಯಿಂದ ಸಾವುನೋವು ಸಂಭವಿಸಿದೆ. 6 ಮಂದಿ ಮೃತಪಟ್ಟಿದ್ದಾರೆ. ಹಾಗೆಯೇ ಜಮ್ಮು ಕಾಶ್ಮೀರದಲ್ಲಿ ಮಳೆಯಿಂದ ಇಬ್ಬರು ಅಸುನೀಗಿದ್ದು, ರಾಜಸ್ತಾನದ ಉದಯಪುರದಲ್ಲಿ ಶಾಲಾ ಕಟ್ಟಡ ಕುಸಿದು ಮೂವರು ವಿದ್ಯಾರ್ಥಿಗಳು ಮೃತಪಟ್ಟ ವರದಿಯಾಗಿದೆ.

ABOUT THE AUTHOR

...view details