ನವದೆಹಲಿ: ಪೂರ್ವ ಲಡಾಖ್ನ ವಾಸ್ತವಿಕ ನಿಯಂತ್ರಣ ರೇಖೆಯ (ಎಲ್ಎಸಿ) ಬಳಿ ಚೀನಾದೊಂದಿಗೆ ಭಾರತದ ಉದ್ವಿಗ್ನತೆಯ ಲಾಭ ಪಡೆಯಲು ಪಾಕಿಸ್ತಾನದ ಗುಪ್ತರಚರ ಸಂಸ್ಥೆ ಐಎಸ್ಐ, ಜಮ್ಮು ಮತ್ತು ಕಾಶ್ಮೀರದ ಗಡಿ ನಿಯಂತ್ರಣ ರೇಖೆಯ (ಎಲ್ಐಸಿ) ಉದ್ದಕ್ಕೂ ಉಗ್ರರರನ್ನು ಭಾರತದ ಒಳನುಸುಳಿಸುತ್ತಿದ್ದೆ ಎಂಬ ಆತಂಕಕಾರಿ ವರದಿ ಬೆಳಕಿಗೆ ಬಂದಿದೆ.
ಪಾಕ್ ತನ್ನ ನೆಲದಲ್ಲಿ ನೂರಾರು ಭಯೋತ್ಪಾದಕರಿಗೆ ತರಬೇತಿ ನೀಡಿ ಉಗ್ರ ಕೃತ್ಯ ಎಸಗಲು ಭಾರತದ ಗಡಿಒಳಗೆ ತಳುತ್ತಿದೆ. ವಾರದ ಹಿಂದೆಯಷ್ಟೇ ಐಎಸ್ಐ ಮುಖ್ಯಸ್ಥ/ ಲೆಫ್ಟಿನೆಂಟ್ ಜನರಲ್ ಫೈಜ್ ಹಮೀದ್ ಮತ್ತು ಪಾಕ್ ಸೇನೆ ಹಿರಿಯ ಅಧಿಕಾರಿಗಳು ಮುಜಫರಾಬಾದ್ನ (ಪಾಕಿಸ್ತಾನ ಆಕ್ರಮಿತ ಕಾಶ್ಮೀರ) ಗೋಜ್ರಾ ಪ್ರದೇಶದ ಅತಿಥಿಗೃಹವೊಂದರಲ್ಲಿ ಜೈಶ್-ಎ-ಮೊಹಮ್ಮದ್ ನಾಯಕ ಮೌಲಾನಾ ಮಸೂದ್ ಅಜರ್ ಸಹೋದರ ಮೊಹಮ್ಮದ್ ತಾಹಿರ್ ಅನ್ವರ್ ಸೇರಿದಂತೆ ಭಯೋತ್ಪಾದನಾ ಸಂಘಟನೆಗಳ ಮುಖಂಡರ ಜತೆ ಸಭೆ ನಡೆಸಿದ್ದರು. ಭಾರತೀಯ ಗುಪ್ತಚರ ಸಂಸ್ಥೆಗಳು ಈ ವರದಿಯನ್ನು ಬಹಿರಂಗಪಡಿಸಿವೆ.