ವಾರಣಾಸಿ:ನಿರಂತರ ಮತ್ತು ಬಾರಿ ಮಳೆಯಿಂದಾಗಿ ಗಂಗಾ ನದಿ ಅಪಾಯದ ಮಟ್ಟ ಮೀರಿ ಉಕ್ಕಿ ಹರಿಯುತ್ತಿದ್ದು, ನದಿ ತೀರ ಮತ್ತು ಅದಕ್ಕೆ ಹತ್ತಿರದಲ್ಲಿ ವಾಸಿಸುವ ಕುಟುಂಬಗಳು, ಕೂಡಲೇ ನಮ್ಮನ್ನು ಸುರಕ್ಷಿತ ಸ್ಥಳಗಳಿಗೆ ಸ್ಥಳಾಂತರಿಸುವಂತೆ ಒತ್ತಾಯಿಸಿದ್ದಾರೆ.
ಉಕ್ಕಿ ಹರಿಯುತ್ತಿರುವ ಗಂಗೆ... ಅಪಾಯದ ಅಂಚಿನಲ್ಲಿ ಸ್ಥಳೀಯರು - undefined
ನಿರಂತರ ಮತ್ತು ಬಾರಿ ಮಳೆಯಿಂದಾಗಿ ಗಂಗಾ ನದಿ ಅಪಾಯ ಮಟ್ಟ ಮೀರಿ ಉಕ್ಕಿ ಹರಿಯುತ್ತಿದ್ದು, ನದಿ ತೀರ ಮತ್ತು ಅದಕ್ಕೆ ಹತ್ತಿರದಲ್ಲಿ ವಾಸಿಸುವ ಕುಟುಂಬಗಳು, ಕೂಡಲೇ ತಮ್ಮನ್ನು ಸುರಕ್ಷಿತ ಸ್ಥಳಗಳಿಗೆ ಸ್ಥಳಾಂತರಿಸುವಂತೆ ಒತ್ತಾಯಿಸಿದ್ದಾರೆ.
ಅಪಾಯದ ಮಟ್ಟ
ಈ ವರ್ಷ ಗಂಗಾನದಿ ಹರಿವಿನಲ್ಲಿ ಏರಿಕೆ ಕಂಡಿದೆ. ಕಳೆದ ಮೂರ್ನಾಲ್ಕು ದಿನಗಳಿಂದ ನೀರಿನ ಮಟ್ಟ 5.5 ಅಡಿ ಹೆಚ್ಚಾಗಿದ್ದು, ತಾವಿ ಸಾಕಷ್ಟು ಸಮಸ್ಯೆಗಳನ್ನು ಎದುರಿಸುವಂತಾಗಿದೆ. ಆದ್ದರಿಂದ ಇಲ್ಲಿನ ಕುಟುಂಬಗಳನ್ನು ಸುರಕ್ಷಿತ ಪ್ರದೇಶಗಳಿಗೆ ಸ್ಥಳಾಂತರಿಸಬೇಕು ಎಂದು ಆಗ್ರಹಿಸಿದ್ದಾರೆ.
ಗಂಗಾ ನದಿಯ ಸುತ್ತಮುತ್ತಲಿನ ಜನಜೀವನ ಅಸ್ತವ್ಯಸ್ತಗೊಂಡಿದೆ. ನದಿಯ ದಡದಲ್ಲಿದ್ದ ದೇವಾಲಯಗಳು ಮುಳುಗಿವೆ. ಈ ಮಹಾಮಳೆಯಿಂದ ಜನರಿಗೆ ಕಷ್ಟಗಳು ಎದುರಾಗಿರುವುದು ನಿಜ. ಆದರೆ, ಹಲವು ವರ್ಷಗಳ ಬಳಿಕ ದೊಡ್ಡ ಪ್ರಮಾಣದ ಮಳೆ ಆಗಿರುವುದು ಖುಷಿ ತಂದಿದೆ ಎಂದು ಸ್ಥಳೀಯರೊಬ್ಬರು ಹೇಳಿದರು.