ಏನಿದು ಐಎನ್ಎಕ್ಸ್ ಮೀಡಿಯಾ ಪ್ರಕರಣ? ಇಲ್ಲಿದೆ ಟೈಮ್ಲೈನ್
ದೆಹಲಿ ಹೈಕೋರ್ಟ್ ತನ್ನ ನಿರೀಕ್ಷಿತ ಜಾಮೀನು ತಿರಸ್ಕರಿಸಿದ ನಂತರ ಮಾಜಿ ಹಣಕಾಸು ಸಚಿವ ಮತ್ತು ಹಿರಿಯ ಕಾಂಗ್ರೆಸ್ ಮುಖಂಡ ಪಿ.ಚಿದಂಬರಂ ಅವರು ಸುಪ್ರೀಂ ಕೋರ್ಟ್‌ನ್ನು ಸಂಪರ್ಕಿಸಿದ್ದು, ಇನ್ನು 2017 ರಿಂದ ಐಎನ್‌ಎಕ್ಸ್ ಮೀಡಿಯಾ ಪ್ರಕರಣದ ಟೈಮ್ಲೈನ್ ಹೀಗಿದೆ.
ಪಿ.ಚಿದಂಬರಂ
ನವದೆಹಲಿ: ಐಎನ್‌ಎಕ್ಸ್ ಮೀಡಿಯಾ ಪ್ರಕರಣದಲ್ಲಿ ದೆಹಲಿ ಹೈಕೋರ್ಟ್ ತನ್ನ ನಿರೀಕ್ಷಣಾ ಜಾಮೀನು ತಿರಸ್ಕರಿಸಿದ ನಂತರ ಮಾಜಿ ಹಣಕಾಸು ಸಚಿವ ಮತ್ತು ಹಿರಿಯ ಕಾಂಗ್ರೆಸ್ ಮುಖಂಡ ಪಿ.ಚಿದಂಬರಂ ಅವರು ಸುಪ್ರೀಂ ಕೋರ್ಟ್‌ನ್ನು ಸಂಪರ್ಕಿಸಿದ್ದಾರೆ. ಈ ಹಿಂದೆ ಏನಾಗಿತ್ತು ಎಂಬ ಸಂಕ್ಷಿಪ್ತ ವರದಿ ಇಲ್ಲಿದೆ.
- ಎಫ್‌ಐಪಿಬಿ ಕ್ಲಿಯರೆನ್ಸ್‌ನಲ್ಲಿ ಅಕ್ರಮಗಳಿದೆ ಎಂದು ಆರೋಪಿಸಿ ಪಿ ಚಿದಂಬರಂ ವಿರುದ್ಧ ಸಿಬಿಐ 2017 ರ ಮೇ 15 ರಂದು ಎಫ್‌ಐಆರ್ ದಾಖಲಿಸಿತ್ತು.
- ಜಾರಿ ನಿರ್ದೇಶನಾಲಯ (ಇಡಿ) 2018 ರಲ್ಲಿ ಮನಿ ಲಾಂಡರಿಂಗ್ ಪ್ರಕರಣ ದಾಖಲಿಸಿತ್ತು.
- ಈ ಪ್ರಕರಣದಲ್ಲಿ ಚಿದಂಬರಂ, ಕಾರ್ತಿ, ಐಎನ್‌ಎಕ್ಸ್ ಮೀಡಿಯಾ ಮತ್ತು ಹಣಕಾಸು ಸಚಿವಾಲಯದ ಕೆಲ ಅಪರಿಚಿತ ಅಧಿಕಾರಿಗಳ ಮೇಲೆ ಕೇಂದ್ರ ತನಿಖಾ ದಳ ಆರೋಪ ಮಾಡಿತ್ತು.
- ಐಎನ್ಎಕ್ಸ್ ಮೀಡಿಯಾ ಒಂದು ಕಾಲದಲ್ಲಿ ಇಂದ್ರಾಣಿ ಮತ್ತು ಪೀಟರ್ ಮುಖರ್ಜಿಯಾ ಒಡೆತನದಲ್ಲಿತ್ತು.
- ಈ ಜೋಡಿ ಈಗ ಸಂಬಂಧವಿಲ್ಲದ ಕೊಲೆ ಪ್ರಕರಣದಲ್ಲಿ ಜೈಲಿನಲ್ಲಿದ್ದಾರೆ.