ಕರ್ನಾಟಕ

karnataka

ETV Bharat / bharat

ಕೇಜ್ರಿವಾಲ್​ 10 ಕೋಟಿ ರೂಗೆ ಬೇಡಿಕೆ ಇಟ್ಟಿದ್ದರು: ಲಾಲ್ ಬಹದ್ದೂರ್ ಶಾಸ್ತ್ರಿ ಮೊಮ್ಮಗನ ಗಂಭೀರ ಆರೋಪ - ದೆಹಲಿ ವಿಧಾನಸಭಾ ಫೈಟ್​

ಆಮ್​ ಆದ್ಮಿ ಪಕ್ಷದಿಂದ ದೆಹಲಿ ವಿಧಾನಸಭಾ ಚುನಾವಣೆಗೆ ಟಿಕೆಟ್​ ಪಡೆದುಕೊಳ್ಳಲು ಕೇಜ್ರಿವಾಲ್ ಕೋಟ್ಯಂತರ ರೂಪಾಯಿ ಹಣ ಕೇಳಿದ್ದರು​ ಎಂಬ ಗಂಭೀರ ಆರೋಪವನ್ನು ಇದೀಗ ಅದೇ ಪಕ್ಷದ ಶಾಸಕರೊಬ್ಬರು ಮಾಡಿದ್ದಾರೆ.

AAP MLA Adarsh Shastri
ಆದರ್ಶ ಶಾಸ್ತ್ರಿ

By

Published : Jan 18, 2020, 10:57 PM IST

ನವದೆಹಲಿ:ದೆಹಲಿ ವಿಧಾನಸಭೆಗೆ ಮುಂದಿನ ತಿಂಗಳು ಚುನಾವಣೆ ನಡೆಯಲಿದೆ. ಆಡಳಿತಾರೂಢ ಆಮ್​ ಆದ್ಮಿ ಪಕ್ಷ, ಕಾಂಗ್ರೆಸ್​ ಹಾಗೂ ಬಿಜೆಪಿ ಪಕ್ಷ ಗೆಲುವಿಗಾಗಿ ತಂತ್ರ-ರಣತಂತ್ರ ಹೆಣೆಯುತ್ತಿವೆ. ಎಲ್ಲ ಪಕ್ಷಗಳು ಗೆಲ್ಲುವ ಕುದುರೆಗಳಿಗೆ ಮಣೆ ಹಾಕುತ್ತಿವೆ. ಗದ್ದುಗೆಗಾಗಿ ನಡೆಯುತ್ತಿರುವ ಈ ಗುದ್ದಾಟದ ವೇಳೆಯಲ್ಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಟಿಕೆಟ್‌ ಹಂಚಿಕೆಗೆ ಕೋಟಿಗಟ್ಟಲೆ ದುಡ್ಡು ಕೇಳಿದ್ದಾರೆ ಎಂದು ಶಾಸಕ ಆದರ್ಶ ಶಾಸ್ತ್ರಿ ಗಂಭೀರ ಆರೋಪ ಮಾಡಿದ್ದಾರೆ.

ಆಪ್‌ ಶಾಸಕ ಆದರ್ಶ ಶಾಸ್ತ್ರಿ ಕಾಂಗ್ರೆಸ್​​ ಸೇರಿದ್ದು ಎಎಪಿ ಮೇಲೆ ಗಂಭೀರ ಆರೋಪ ಹೊರಿಸಿದ್ದಾರೆ. 2020 ದೆಹಲಿ ವಿಧಾನಸಭೆ ಚುನಾವಣೆಯಲ್ಲಿ ಆಪ್​ನಿಂದ ಸ್ಪರ್ಧಿಸುತ್ತಿರುವ ಅಭ್ಯರ್ಥಿಗಳಿಂದ ಕೇಜ್ರಿವಾಲ್​ 10ರಿಂದ20 ಕೋಟಿ ರೂ ಹಣ ಪಡೆದುಕೊಳ್ಳುತ್ತಿದ್ದಾರೆ ಎಂದು ದ್ವಾರಕಾ ನಗರದ ಎಂಎಲ್​ಎ ದೂರಿದ್ದಾರೆ. ನಾನು ಎಎಪಿಯಿಂದ ಸ್ಪರ್ಧಿಸಲು ಟಿಕೆಟ್ ಕೇಳಿದ್ದೆ. ಆಗ ಅವರು ನನ್ನ ಬಳಿ 10 ಕೋಟಿ ರೂ ಹಣ ಕೊಟ್ಟರೆ ಮಾತ್ರ ಟಿಕೆಟ್‌ ಎಂದಿದ್ದರು ಎಂಬ ಬಾಂಬ್ ಸಿಡಿಸಿದ್ದಾರೆ.

ದ್ವಾರಕಾ ಕ್ಷೇತ್ರದಿಂದ ಅವರಿಗೆ ಶಾಸ್ತ್ರಿ ಅವರಿಗೆ ಆಪ್​ ಟಿಕೆಟ್​ ನಿರಾಕರಿಸಿತ್ತು. ಹೀಗಾಗಿ ಕಾಂಗ್ರೆಸ್​ ಸೇರಿ ಸ್ಪರ್ಧಿಸಲು ಅವರು ನಿರ್ಧರಿಸಿದ್ದಾರೆ. ಮಾಜಿ ಪ್ರಧಾನಿ ಲಾಲ್​ ಬಹುದ್ದೂರ್​ ಶಾಸ್ತ್ರಿ ಮೊಮ್ಮಗನಾಗಿರುವ ಆದರ್ಶ ಶಾಸ್ತ್ರಿ ಇದೀಗ ಕಾಂಗ್ರೆಸ್​ ತೆಕ್ಕೆಯಲ್ಲಿದ್ದು ಅದೃಷ್ಠ ಪರೀಕ್ಷೆಗೆ ಮುಂದಾಗಿದ್ದಾರೆ.

ABOUT THE AUTHOR

...view details