ನವದೆಹಲಿ:ಪ್ರಧಾನಿ ಮೋದಿ ಆಪ್ತ ಹಾಗೂ ರಾಜಕೀಯ ಚತುರ ಅರುಣ್ ಜೇಟ್ಲಿ ಶನಿವಾರ ಮಧ್ಯಾಹ್ನ ವಿಧಿವಶರಾಗಿದ್ದು, ಪಕ್ಷಾತೀತವಾಗಿ ರಾಜಕೀಯ ನಾಯಕರು, ವಿವಿಧ ಕ್ಷೇತ್ರದ ಗಣ್ಯರು ಕಂಬನಿ ಮಿಡಿದಿದ್ದಾರೆ.
'ನನ್ನ ಗೆಳೆಯನ ಕಳೆದುಕೊಂಡಿರುವೆ'... ಜೇಟ್ಲಿ ನೆನೆದು ಮೋದಿ ಭಾವುಕ!
ಹಲವು ದಶಕಗಳ ಕಾಲ ರಾಜಕೀಯದಲ್ಲಿದ್ದ ಜೇಟ್ಲಿ ಆ ಕ್ಷೇತ್ರದಲ್ಲಿ ಸಾಕಷ್ಟು ಪಳಗಿದ್ದರು. ಕರ್ನಾಟಕ ಚುನಾವಣೆಯಲ್ಲಿ ಬಹುಮುಖ್ಯ ಪಾತ್ರ ವಹಿಸಿದ್ದ ಜೇಟ್ಲಿ ದೂರದ ಬ್ರಿಟನ್ ಎಲೆಕ್ಷನ್ನಲ್ಲೂ ಮಾಜಿ ಹಣಕಾಸು ಸಚಿವರ ಪಾತ್ರ ಬಹಳ ದೊಡ್ಡದಿತ್ತು ಎನ್ನುವುದು ಹಲವರಿಗೆ ತಿಳಿಯದ ವಿಚಾರ.
ತಮ್ಮ ಬಿಡುವಿಲ್ಲದ ಕೆಲಸದ ನಡುವೆಯೂ ಜೇಟ್ಲಿ ಲಂಡನ್ಗೆ ಆಗಾಗ್ಗೆ ಭೇಟಿ ನೀಡುತ್ತಿದ್ದರು. ಪಾರ್ಲಿಮೆಂಟ್ ಸ್ಕ್ವೇರ್ನಲ್ಲಿ 2015ರ ಮಾರ್ಚ್ನಲ್ಲಿ ಮಹಾತ್ಮ ಗಾಂಧಿ ಪ್ರತಿಮೆಯ ಅನಾವರಣ ಮಾಡಲು ಜೇಟ್ಲಿ ಹಾಗೂ ಬಿಗ್ಬಿ ಅಮಿತಾಭ್ ಬಚ್ಚನ್ ಒಟ್ಟಿಗೆ ತೆರಳಿದ್ದರು.
2015ರ ಜೇಟ್ಲಿ ಲಂಡನ್ ಪ್ರವಾಸ ಅಲ್ಲಿನ ಚುನಾವಣಾ ವಿಚಾರದಲ್ಲಿ ಅತ್ಯಂತ ಮಹತ್ವದ್ದಾಗಿತ್ತು ಎನ್ನುವ ವಿಚಾರ ಇದೀಗ ತಿಳಿದು ಬಂದಿದೆ. ಈ ಪ್ರವಾಸದಲ್ಲಿ ಅರುಣ್ ಜೇಟ್ಲಿ ಬ್ರಿಟನ್ನ ಆಗಿನ ಪ್ರಧಾನಿ ಡೇವಿಡ್ ಕ್ಯಾಮರೂನ್ ಜೊತೆಗೆ ಕೆಲಹೊತ್ತು ಮಾತುಕತೆ ನಡೆಸಿದ್ದರು.