ನವದೆಹಲಿ: ಜಮ್ಮು ಮತ್ತು ಕಾಶ್ಮೀರಕ್ಕೆ ನೀಡಿರುವ ವಿಶೇಷ ಸ್ಥಾನವನ್ನು ರದ್ದು ಮಾಡುತ್ತೇವೆ ಎಂದು ಚುನಾವಣೆಗೂ ಮುನ್ನ ಹೇಳಿದ್ದ ಬಿಜೆಪಿ, ಇದೀಗ ಅದೇ ಮಾತನ್ನು ಪುನರುಚ್ಛರಿಸಿದೆ. 370ನೇ ವಿಧಿಯನ್ನು ಮೂಟೆಕಟ್ಟಿಡುತ್ತೇವೆ ಎಂದು ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ರಾಮ್ ಮಾಧವ್ ಹೇಳಿದ್ದಾರೆ.
370ನೇ ವಿಧಿ ಬಗ್ಗೆ ನಮ್ಮ ಸೈದ್ಧಾಂತಿಕ ನಿಲುವೇನು ಎಂಬುದು ಗೊತ್ತೇ ಇದೆ. ಗೃಹ ಸಚಿವ ಅಮಿತ್ ಶಾ ಅವರು ಹೇಳಿದಂತೆ, 370ನೇ ವಿಧಿಯನ್ನು ಮೂಟೆಕಟ್ಟಿಡುವುದು ಖಚಿತ ಎಂದು ಹೇಳಿದ್ದಾರೆ.
ಕಾಶ್ಮೀರದಲ್ಲಿ ಜ್ವಲಂತ ಸಮಸ್ಯೆಗಳನ್ನು ಬಗೆಹರಿಸಲು ಪ್ರಧಾನಿ ಮೋದಿ ನೇತೃತ್ವದ ಸರ್ಕಾರ ಬದ್ಧವಾಗಿದೆ. ಅದೇ ನಿಟ್ಟಿನಲ್ಲಿ ಸಾಗುತ್ತೇವೆ. ಅಲ್ಲದೆ, ಅಂದಿನ ಪ್ರಧಾನಿ ನೆಹರೂ ಅವರು ಈ ವಿಧಿಯನ್ನು ಮಂಡಿಸುವಾಗ ತಾತ್ಕಾಲಿಕವಾಗಿ ಅಸ್ತಿತ್ವದಲ್ಲಿರಲಿದೆ ಎಂದು ಹೇಳಿದರು.
ಈ ವಿಧಿಯನ್ನು ರದ್ದು ಮಾಡಲು ಸಾಕಷ್ಟು ಪ್ರಕ್ರಿಯೆಗಳು ಇರುವುದರಿಂದ, ಸಮಯ ಹಿಡಿಯಲಿದೆ ಎಂದರು.
ನಿನ್ನೆ ಸಂಸತ್ನಲ್ಲಿ ಜಮ್ಮು ಮತ್ತು ಕಾಶ್ಮೀರದ ಸ್ಥಿತಿಗತಿ, ಸಮಸ್ಯೆಗಳ ಬಗ್ಗೆ ಗೃಹ ಸಚಿವ ಅಮಿತ್ ಶಾ ಸುದೀರ್ಘವಾಗಿ ಮಾತನಾಡಿದರು. ರಾಷ್ಟ್ರಪತಿ ಆಳ್ವಿಕೆ ಮುಂದುವರೆಸುವ ಸಂಬಂಧ ಮಸೂದೆ ಮಂಡಿಸಿದರು.