ನವದೆಹಲಿ :ಅಜ್ಞಾನಕ್ಕಿಂತ ದುರಹಂಕಾರವೇ ಹೆಚ್ಚು ಅಪಾಯಕಾರಿ ಎಂಬ ವಿಶ್ವಪ್ರಸಿದ್ಧ ಭೌತವಿಜ್ಞಾನಿ ಆಲ್ಬರ್ಟ್ ಐನ್‌ಸ್ಟೀನ್ ಅವರ ಉಲ್ಲೇಖವನ್ನು ಬಳಸಿಕೊಂಡು ಕಾಂಗ್ರೆಸ್ ಮುಖಂಡ ರಾಹುಲ್ ಗಾಂಧಿ ಕೇಂದ್ರ ಸರ್ಕಾರದ ವಿರುದ್ಧ ಕಿಡಿಕಾರಿದ್ದಾರೆ.
ಈ ಬಗ್ಗೆ ಟ್ವೀಟ್ ಮಾಡಿರುವ ರಾಹುಲ್ ಗಾಂಧಿ, ಅಜ್ಞಾನಕ್ಕಿಂತ ದುರಂಹಕಾರವೇ ಹೆಚ್ಚು ಅಪಾಯಕಾರಿ ಎಂಬುದನ್ನು ಈ ಲಾಕ್ಡೌನ್ ಸಾಬೀತುಪಡಿಸುತ್ತದೆ ಎಂದಿದ್ದಾರೆ. ದೇಶದಲ್ಲಿ ಕೊರೊನಾ ಸೋಂಕು ಹೆಚ್ಚುತ್ತಿರುವ ಮತ್ತು ಆರ್ಥಿಕತೆ ಹೇಗೆ ಕುಸಿಯುತ್ತಿದೆ ಎಂದು ತೋರಿಸುವ ಗ್ರಾಫ್ ಇರುವ ವಿಡಿಯೋವನ್ನು ರಾಹುಲ್ ಪೋಸ್ಟ್ ಮಾಡಿದ್ದಾರೆ.