ಕರ್ನಾಟಕ

karnataka

ETV Bharat / bharat

ಕೋವಿಡ್ ಬಳಿಕ ಪಹಲ್ಗಾಂನಲ್ಲಿ ಪುನಾರಂಭಗೊಂಡ ಪ್ರವಾಸೋದ್ಯಮ ಚಟುವಟಿಕೆ: ಸ್ಥಳೀಯರು ಫುಲ್​ ಖುಷ್​​ - ಜಮ್ಮು ಕಾಶ್ಮೀರದಲ್ಲಿ ಪ್ರವಾಸಿಗರ ಸಂಖ್ಯೆ ಹೆಚ್ಚಳ

ಪಹಲ್ಗಾಂನಲ್ಲಿ ಮೈನಸ್ ತಾಪಮಾನದ ನಡುವೆಯೂ ಪ್ರವಾಸಿಗರ ಸಂಖ್ಯೆ ಹೆಚ್ಚುತ್ತಿದೆ. ಇದು ಪ್ರವಾಸೋದ್ಯಮದ ಭವಿಷ್ಯದ ಬಗ್ಗೆ ಜನರಲ್ಲಿ ಆಶಾಭಾವನೆ ಮೂಡಿಸಿದೆ.

Rising in number of tourists in Pahalgam
ಪಹಲ್ಗಾಂನಲ್ಲಿ ಪುನರಾರಂಭಗೊಂಡ ಪ್ರವಾಸೋದ್ಯಮ ಚಟುವಟಿಕೆ

By

Published : Feb 4, 2021, 8:06 PM IST

ಕಾಶ್ಮೀರ: ಕೋವಿಡ್ ಹೊಡೆತಕ್ಕೆ ಸಿಲುಕಿ ಸ್ಥಗಿತಗೊಂಡಿದ್ದ ಜಮ್ಮು-ಕಾಶ್ಮೀರದ ಪ್ರವಾಸೋದ್ಯಮ ಚಟುವಟಿಕೆಗಳು ಪುನಾರಂಭಗೊಳ್ಳುತ್ತಿದ್ದು, ಸ್ಥಳೀಯರ ಮುಖದಲ್ಲಿ ಮಂದಹಾಸ ಮೂಡಿದೆ.

ಸದ್ಯ, ಕೋವಿಡ್ ಸಂಕಷ್ಟದಿಂದ ಹೊರ ಬಂದಿರುವ ವಾತಾವರಣ ನಿರ್ಮಾಣವಾಗಿದ್ದು, ಕಣಿವೆ ನಾಡಿನ ಹಿಮ ರಾಶಿಗಳಲ್ಲಿ ಸ್ಥಳೀಯರಿಗಿಂತ ಪ್ರವಾಸಿಗರು ಹೆಚ್ಚಾಗಿ ಕಾಣಿಸಿಕೊಳ್ಳುತ್ತಿದ್ದಾರೆ. ಪಹಲ್ಗಾಂನಲ್ಲಿ ಮೈನಸ್ ತಾಪಮಾನದ ನಡುವೆಯೂ ಪ್ರವಾಸಿಗರ ಸಂಖ್ಯೆ ಹೆಚ್ಚುತ್ತಿದೆ. ಇದು ಪ್ರವಾಸೋದ್ಯಮದ ಭವಿಷ್ಯದ ಬಗ್ಗೆ ಜನರಲ್ಲಿ ಆಶಾಭಾವನೆ ಮೂಡಿಸಿದೆ.

ಪಹಲ್ಗಾಂನಲ್ಲಿ ಪುನಾರಂಭಗೊಂಡ ಪ್ರವಾಸೋದ್ಯಮ ಚಟುವಟಿಕೆ

ಓದಿ : ಬಾಲಿವುಡ್​​ ತಾರೆಯರ ಶೀತಲ ಸಮರಕ್ಕೆ ಕಾರಣವಾದ ರಿಹಾನ್ನಾ ಟ್ವೀಟ್‌

ಈ ಕುರಿತು ಈಟಿವಿ ಭಾರತದ ಜೊತೆ ಮಾತನಾಡಿದ ಪಹಲ್ಗಾಂ ನಿವಾಸಿ ಅಬ್ದುಲ್ ರಾಶಿದ್, ದೇಶದ ವಿವಿಧ ಭಾಗಗಳ ಜನರು ಆಗಮಿಸುತ್ತಿರುವುದು ತುಂಬಾ ಸಂತೋಷ ನೀಡುತ್ತಿದೆ. ಅಲ್ಲದೆ ಪರ್ವತಗಳ ಮೇಲಿನ ಹಿಮ ರಾಶಿಯೂ ಅದ್ಭುತವಾಗಿ ಕಾಣುತ್ತಿದೆ. 370ನೇ ವಿಧಿಯ ರದ್ಧತಿ ಬಳಿಕ ಇದೇ ಮೊದಲ ಬಾರಿಗೆ ಪ್ರವಾಸೋದ್ಯಮದ ಬಗ್ಗೆ ನಮಗೆ ಆಶಾಭಾವನೆ ಮೂಡಿದೆ ಎಂದಿದ್ದಾರೆ.

ABOUT THE AUTHOR

...view details