ತ್ರಿಪುರ: ವಿದ್ಯುನ್ಮಾನ ಸಾಧನಗಳನ್ನು ಬಳಸಿ ಎಟಿಎಂನಲ್ಲಿ ಅಪಾರ ಪ್ರಮಾಣದ ಹಣ ಕಳ್ಳತನ ಮಾಡಿರುವ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ಶುಕ್ರವಾರ ಆರೋಪಿಯನ್ನು ಬಂಧಿಸಿದ್ದರು. ಆದ್ರೆ ಇಂದು ಪೊಲೀಸ್ ಲಾಕ್ ಅಪ್‌ನಲ್ಲಿ ಆರೋಪಿಯ ಶವ ಪತ್ತೆಯಾಗಿದ್ದು, ಈ ಕುರಿತು ಮ್ಯಾಜಿಸ್ಟೀರಿಯಲ್ ವಿಚಾರಣೆ ನಡೆಸುವಂತೆ ಸರ್ಕಾರ ಆದೇಶಿಸಿದೆ.
ಸುಶಾಂತ ಘೋಷ್ ಪೊಲೀಸ್ ಲಾಕ್ ಅಪ್‌ನಲ್ಲಿ ಮೃತಪಟ್ಟ ಆರೋಪಿ. ಎಟಿಎಂನಿಂದ ಹಣ ಕಳ್ಳತನಕ್ಕೆ ಪ್ರಕರಣಕ್ಕೆ ಸಂಬಂಧಿಸಿದಂತೆ ಈತನನ್ನು ಶುಕ್ರವಾರ ಅಗರ್ತಲಾ ನಗರದ ಹೊರವಲಯದಲ್ಲಿರುವ ಲಂಕಾಮುರಾದಲ್ಲಿ ಬಂಧಿಸಲಾಗಿತ್ತು. ಅಗರ್ತಲಾ ಪೊಲೀಸ್ ಠಾಣೆಯಲ್ಲಿ ಶನಿವಾರ ಮತ್ತು ಭಾನುವಾರ ಮಧ್ಯರಾತ್ರಿ ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎಂದು ಪೊಲೀಸ್ ಅಧಿಕಾರಿ ತಿಳಿಸಿದ್ದಾರೆ.