ಮುಂಬೈ:ಡ್ರಗ್ಸ್ ಮಾಫಿಯಾದಲ್ಲಿ ಭಾಗಿಯಾಗಿರುವ ಆರೋಪದ ಮೇಲೆ ನಟಿ ರಿಯಾ ಚಕ್ರವರ್ತಿ ಬಂಧನ ಮಾಡಲಾಗಿದ್ದು, ಇದರ ಬೆನ್ನಲ್ಲೇ ನಟಿ ಪರ ವಕೀಲರು ಮಾತನಾಡಿದ್ದಾರೆ.
ಸತತ ಮೂರು ದಿನಗಳ ಕಾಲ ವಿಚಾರಣೆಗೊಳಪಟ್ಟಿದ್ದ ನಟಿ ರಿಯಾ ಇಂದು ಮಾದಕ ವಸ್ತು ನಿಯಂತ್ರಣ ಬ್ಯೂರೋ(ಎನ್ಸಿಬಿ) ಬಂಧನ ಮಾಡಿದೆ. ಇದೇ ವಿಚಾರವಾಗಿ ಮಾತನಾಡಿರುವ ವಕೀಲ ಸತೀಶ್ ಮನ್ಶಿಂದೆ, ಮಾದಕ ವ್ಯಸನಿಯನ್ನ ಪ್ರೀತಿಸುತ್ತಿದ್ದ ಕಾರಣಕ್ಕಾಗಿ ಅವರನ್ನ ಬಂಧನ ಮಾಡಲಾಗಿದೆ ಎಂದು ವಾಗ್ದಾಳಿ ನಡೆಸಿದ್ದಾರೆ.