ಮುಂಬೈ: ಮಹಾರಾಷ್ಟ್ರದಲ್ಲಿ ಉಂಟಾದ ಅನೇಕ ರಾಜಕೀಯ ಬದಲಾವಣೆಗಳ ಬಳಿಕ ಸರ್ಕಾರ ರಚಿಸಿದ ಶಿವಸೇನಾಗೆ ದೊಡ್ಡ ಆಘಾತ ಉಂಟಾಗಿದೆ.
ಇಲ್ಲಿನ ಧಾರವಿಯಲ್ಲಿ ಬುಧವಾರ ನಡೆದ ಕಾರ್ಯಕ್ರಮದಲ್ಲಿ 400ಕ್ಕೂ ಅಧಿಕ ಕಾರ್ಯಕರ್ತರು ಶಿವಸೇನಾ ತೊರೆದು ಬಿಜೆಪಿ ಸೇರ್ಪಡೆಯಾದರು.

ಶಿವಸೇನಾ ಮುಖ್ಯಸ್ಥ ಹಾಗೂ ಮುಖ್ಯಮಂತ್ರಿ ಉದ್ಧವ್ ಠಾಕ್ರೆ ಅವರು ಸರ್ಕಾರ ರಚನೆಗೆ ಕಾಂಗ್ರೆಸ್, ಎನ್ಸಿಪಿ ಜೊತೆ ಕೈ ಜೋಡಿಸಿದ್ದೇ ಕಾರಣ ಎಂದು ತಿಳಿದು ಬಂದಿದೆ.
10 ವರ್ಷಗಳಿಂದ ಶಿವಸೇನಾದ ಹಿಂದುತ್ವದ ಸಿದ್ಧಾಂತವನ್ನೇ ಬೆಂಬಲಿಸುತ್ತಾ ಬಂದಿದ್ದೇವೆ. ಆದರೆ, ಈಗ ಏಕಾಏಕಿ ವಿರುದ್ಧ ದಿಕ್ಕಿನ ಸಿದ್ಧಾಂತವನ್ನು ಒಳಗೊಂಡ ಎನ್ಸಿಪಿ, ಕಾಂಗ್ರೆಸ್ ಜೊತೆ ಸೇರಿ ಅಧಿಕಾರಕ್ಕೆ ಬಂದಿದೆ. ಆದ್ದರಿಂದ ಶಿವಸೇನಾ ತೊರೆದಿದ್ದೇವೆ ಎಂದು ಬಿಜೆಪಿ ಸೇರಿದ ರಮೇಶ್ ನಾದರ್ (ಶಿವಸೇನಾ ಪ್ರಮುಖ ನಾಯಕ) ಹೇಳಿದರು.