ಕರ್ನಾಟಕ

karnataka

ETV Bharat / bharat

ಯುಪಿಯಲ್ಲಿ ಬಂಗಾರದ ನಿಕ್ಷೇಪ: ಭಾರತದ ಒಟ್ಟು ಸಂಗ್ರಹಕ್ಕಿಂತ 5 ಪಟ್ಟು ಹೆಚ್ಚು ಚಿನ್ನ ಪತ್ತೆ..

ಭಾರತದಲ್ಲಿ ಈಗಿರುವ ಬಂಗಾರದ ಸಂಗ್ರಹಕ್ಕಿಂದ 5 ಪಟ್ಟು ಹೆಚ್ಚಿನ ಬಂಗಾರ ಇರುವ ನಿಕ್ಷೇಪ ಉತ್ತರಪ್ರದೇಶದಲ್ಲಿ ಕಂಡು ಬಂದಿದೆ.

gold reserve found in UP's Sonbhadra,ಸೋನ್‌ಭದ್ರಾ ಜಿಲ್ಲೆಯಲ್ಲಿ ಬಂಗಾರದ ನಿಕ್ಷೇಪ ಪತ್ತೆ
ಸೋನ್‌ಭದ್ರಾ ಜಿಲ್ಲೆಯಲ್ಲಿ ಬಂಗಾರದ ನಿಕ್ಷೇಪ ಪತ್ತೆ

By

Published : Feb 22, 2020, 2:12 PM IST

Updated : Feb 23, 2020, 6:34 AM IST

ಸೋನ್‌ಭದ್ರಾ: ಉತ್ತರ ಪ್ರದೇಶದ ಸೋನ್‌ಭದ್ರ ಜಿಲ್ಲೆಯಲ್ಲಿ ಸುಮಾರು 3,000 ಟನ್ ಮತ್ತು 12 ಲಕ್ಷ ಕೋಟಿ ರೂಪಾಯಿಗಳ ಚಿನ್ನದ ನಿಕ್ಷೇಪವನ್ನು ಭಾರತದ ಭೂವೈಜ್ಞಾನಿಕ ಸಮೀಕ್ಷೆ ಕಂಡುಹಿಡಿದಿದೆ. ಇದು ಭಾರತದ ಪ್ರಸ್ತುತ ಬಂಗಾರದ ಸಂಗ್ರಹಕ್ಕಿಂತ ಐದು ಪಟ್ಟು ಹೆಚ್ಚಾಗಿದೆ.

ಸೋನ್ ಪಹಡಿ ಮತ್ತು ಹಾರ್ಡಿ ಪ್ರದೇಶಗಳಲ್ಲಿ ಚಿನ್ನದ ನಿಕ್ಷೇಪ ಪತ್ತೆಯಾಗಿದೆ ಎಂದು ಜಿಲ್ಲಾ ಗಣಿಗಾರಿಕೆ ಅಧಿಕಾರಿ ಕೆ ಕೆ ರೈ ಶುಕ್ರವಾರ ತಿಳಿಸಿದ್ದಾರೆ. 1992-93ರಲ್ಲಿ ಭಾರತದ ಭೂವೈಜ್ಞಾನಿಕ ಸಮೀಕ್ಷೆಯಿಂದ ಸೋನ್‌ಭದ್ರದಲ್ಲಿ ಚಿನ್ನದ ನಿಕ್ಷೇಪವನ್ನು ಕಂಡು ಹಿಡಿಯುವ ಕೆಲಸವನ್ನು ಪ್ರಾರಂಭಿಸಲಾಯಿತು. ಇ-ಟೆಂಡರಿಂಗ್ ಮೂಲಕ ಈ ಬ್ಲಾಕ್‌ಗಳ ಹರಾಜು ಶೀಘ್ರದಲ್ಲೇ ಪ್ರಾರಂಭವಾಗಲಿದೆ ಎಂದು ಹೇಳಿದ್ದಾರೆ.

ಭಾರತದ ಕೇಂದ್ರ ಬ್ಯಾಂಕ್​ನಲ್ಲಿರುವ ಬಂಗಾರದ ಸಂಗ್ರಹ ಎಷ್ಟು?

ಸೋನ್ ಪಹಡಿಯಲ್ಲಿ ಸುಮಾರು 2,943.26 ಟನ್ ಬಂಗಾರ ಇದೆ ಎಂದು ಅಂದಾಜಿಸಲಾಗಿದೆ. ಹಾರ್ಡಿ ಬ್ಲಾಕ್‌ನಲ್ಲಿ ಸುಮಾರು 646.16 ಕಿಲೋ ಗ್ರಾಂ ಇರಬಹುದು ಎಂದು ಅಧಿಕಾರಿ ತಿಳಿಸಿದ್ದಾರೆ. ಅಲ್ಲದೆ ಈ ಪ್ರದೇಶದಲ್ಲಿ ಚಿನ್ನದ ಜೊತೆಗೆ ಇನ್ನೂ ಕೆಲ ಖನಿಜಗಳು ಸಹ ಕಂಡು ಬಂದಿವೆ ಎಂದು ತಿಳಿಸಿದ್ದಾರೆ. ವಿಶ್ವ ಚಿನ್ನದ ಮಂಡಳಿಯ ಪ್ರಕಾರ, ಭಾರತದಲ್ಲಿ ಪ್ರಸ್ತುತ 626 ಟನ್ ಚಿನ್ನದ ಸಂಗ್ರಹವಿದೆ. ಹೊಸದಾಗಿ ಪತ್ತೆಯಾದ ಬಂಗಾರ, ಆ ಮೊತ್ತಕ್ಕಿಂತ ಐದು ಪಟ್ಟು ಹೆಚ್ಚಾಗಿದೆ. ಸುಮಾರು 12 ಲಕ್ಷ ಕೋಟಿ ರೂಪಾಯಿ ಇರಬಹುದು ಎಂದು ಅಂದಾಜಿಸಲಾಗಿದೆ.

ಸೋನ್‌ಭದ್ರ ಪ್ರದೇಶದಲ್ಲಿ ಚಿನ್ನದ ನಿಕ್ಷೇಪವನ್ನು ಕಂಡುಹಿಡಿಯುವ ಪ್ರಕ್ರಿಯೆಯನ್ನು ಮೊದಲು ಪ್ರಾರಂಭಿಸಿದವರು ಬ್ರಿಟಿಷರು ಎಂದು ವರದಿಯಾಗಿದೆ. ಇದು ನಕ್ಸಲ್​ ಪೀಡಿತ ಪ್ರದೇಶ ಎಂಬ ಕಾರಣಕ್ಕೆ ಹೆಚ್ಚು ಸುದ್ದಿಯಾಗುತ್ತಿತ್ತು. ಕುತೂಹಲಕಾರಿ ಅಂಶವೇನೆಂದರೆ ಉತ್ತರಪ್ರದೇಶದ 2ನೇ ಅತಿದೊಡ್ಡ ಜಿಲ್ಲೆಯಾಗಿರುವ ಸೋನ್‌ಭದ್ರ ನಾಲ್ಕು ರಾಜ್ಯಗಳೊಂದಿಗೆ ತನ್ನ ಗಡಿಯನ್ನು ಹಂಚಿಕೊಳ್ಳುವ ಏಕೈಕ ಜಿಲ್ಲೆಯಾಗಿದೆ. ಪಶ್ಚಿಮಕ್ಕೆ ಮಧ್ಯಪ್ರದೇಶ, ದಕ್ಷಿಣಕ್ಕೆ ಛತ್ತೀಸ್​ಗಢ, ಆಗ್ನೇಯಕ್ಕೆ ಜಾರ್ಖಂಡ್ ಮತ್ತು ಪೂರ್ವಕ್ಕೆ ಬಿಹಾರ ರಾಜ್ಯಗಳೊಂದಿಗೆ ಗಡಿ ಹಂಚಿಕೊಂಡಿದೆ.

ಅತಿ ಹೆಚ್ಚು ಚಿನ್ನದ ಸಂಗ್ರಹ ಹೊಂದಿರುವ ರಾಷ್ಟ್ರ ಯಾವುದು?

ಈ ಪ್ರದೇಶದಲ್ಲಿ ಬಂಗಾರ ತೆಗೆಯುವ ಕೆಲಸ ಆರಂಭವಾದರೆ, ಅಮೆರಿಕದ ಬಳಿಕ ಅತಿಹೆಚ್ಚು ಬಂಗಾರದ ಸಂಗ್ರಹ ಹೊಂದಿರುವ ದೇಶ ಭಾರತ ಎಂಬ ಹೆಗ್ಗಳಿಕೆಗೆ ಪಾತ್ರವಾಗಲಿದೆ. ಅಂದ ಹಾಗೆ ಈಗ ಅಮೆರಿಕದ ಬಳಿ 8,133.5 ಟನ್​ ಬಂಗಾರದ ಸಂಗ್ರಾಹಗಾರವಿದೆ.

ಕ್ರ ಸಂಖ್ಯೆ ದೇಶ ಬಂಗಾರದ ಪ್ರಮಾಣ
1 ಅಮೆರಿಕ 8,133.5 ಟನ್​
2 ಜರ್ಮನಿ 3,366 ಟನ್
3 ಎಐಎಂಎಫ್​​ 2,814 ಟನ್​
4 ಫ್ರಾನ್ಸ್ 2,436 ಟನ್​
5 ಭಾರತ 626 ಟನ್​

ದೊಡ್ಡಣ್ಣನ ಬಿಟ್ಟರೆ ಹೆಚ್ಚು ಬಂಗಾರ ಇಟ್ಟುಕೊಂಡಿರುವ ರಾಷ್ಟ್ರಗಳಿವು!

ದೊಡ್ಡಣ್ಣನನ್ನು ಹೊರೆತುಪಡಿಸಿದರೆ, ಅತಿ ಹೆಚ್ಚು ಚಿನ್ನದ ಸಂಗ್ರಹ ಇಟ್ಟುಕೊಂಡಿರುವ ರಾಷ್ಟ್ರ ಜರ್ಮನಿ. ಅಂದಹಾಗೆ ಜರ್ಮನಿ ಬಳಿ ಇರುವ ಚಿನ್ನದ ಪ್ರಮಾಣ ಬರೋಬ್ಬರಿ 3,366 ಟನ್​​​​ ಇದನ್ನು ಹೊರೆತುಪಡಿಸಿ ಐಎಂಎಫ್​​ ಬಳಿ ಸುಮಾರು 2,814 ಟನ್​ ಹಾಗೂ ಇಟಲಿ ಬಳಿ 2451.8 ಟನ್​ ಬಂಗಾರದ ದಾಸ್ತಾನಿದೆ. ಇದನ್ನು ಹೊರೆತುಪಡಿಸಿದರೆ ಫ್ರಾನ್ಸ್​​ ಸರಿಸುಮಾರು 2,436 ಟನ್​ ಬಂಗಾರವನ್ನ ಹೊಂದಿದೆ.

Last Updated : Feb 23, 2020, 6:34 AM IST

ABOUT THE AUTHOR

...view details