ಅಮೇಥಿ (ಯುಪಿ): ಲಾಕ್‌ಡೌನ್‌ನಿಂದಾಗಿ ಇತರ ರಾಜ್ಯಗಳಲ್ಲಿ ಸಿಲುಕಿರುವ ತನ್ನ ಕ್ಷೇತ್ರದ ಸುಮಾರು 32,500 ಜನರ ಬಗ್ಗೆ ಮಾಹಿತಿ ಬಂದಿದೆ. ಶೀಘ್ರದಲ್ಲೇ ಅವರನ್ನು ಮರಳಿ ಕರೆತರಲಾಗುವುದು ಎಂದು ಕೇಂದ್ರ ಸಚಿವೆ ಹಾಗೂ ಅಮೇಥಿ ಸಂಸದೆ ಸ್ಮೃತಿ ಇರಾನಿ ಭರವಸೆ ನೀಡಿದ್ದಾರೆ.
ಹೊರ ರಾಜ್ಯಗಳಲ್ಲಿ ಸಿಲುಕಿರುವ ಅಮೇಥಿಯ ಜನರನ್ನು ಶೀಘ್ರದಲ್ಲಿ ಮರಳಿ ಕರೆತರಲಾಗುವುದು : ಸ್ಮೃತಿ ಇರಾನಿ - ಅಮೇಥಿ ಸಂಸದೆ ಹಾಗೂ ಕೇಂದ್ರ ಸಚಿವೆ ಸ್ಮೃತಿ ಇರಾನಿ
ಶೀಘ್ರದಲ್ಲಿ ಅಮೇಥಿಯ ವಲಸಿಗರು ಊರಿಗೆ ಮರಳಲಿದ್ದಾರೆ. ಈಗಾಗಲೇ 35,500 ಜನರ ಸಂಪೂರ್ಣ ಮಾಹಿತಿ ಸಿಕ್ಕಿದೆ. ಎಲ್ಲಾ ನಿರ್ದೇಶನಗಳನ್ನು ಪಾಲಿಸಿ ಅವರನ್ನು ಊರಿಗೆ ಕರೆತರುವ ವ್ಯವಸ್ಥೆ ಮಾಡಲಾಗುವುದು ಎಂದು ಇರಾನಿ ಹೇಳಿದ್ದಾರೆ.
Around 32,500 Amethi people stuck outside UP, will bring them back soon: Smriti Irani
ಮಾಧ್ಯಮ ಪ್ರತಿನಿಧಿಗಳೊಂದಿಗೆ 15 ನಿಮಿಷಗಳ ಕಾಲ ವಿಡಿಯೋ ಕಾನ್ಫರೆನ್ಸ್ ನಡೆಸಿದ ಅವರು, ಶೀಘ್ರದಲ್ಲಿ ಅಮೇಥಿಯ ವಲಸಿಗರು ಊರಿಗೆ ಮರಳಲಿದ್ದಾರೆ. ಈಗಾಗಲೇ 35,500 ಜನರ ಸಂಪೂರ್ಣ ಮಾಹಿತಿ ಸಿಕ್ಕಿದೆ. ಎಲ್ಲಾ ನಿರ್ದೇಶನಗಳನ್ನು ಪಾಲಿಸಿ ಅವರನ್ನು ಊರಿಗೆ ಕರೆತರುವ ವ್ಯವಸ್ಥೆ ಮಾಡಲಾಗುವುದು ಎಂದು ಇರಾನಿ ಹೇಳಿದ್ದಾರೆ.
ಸಾಮಾಜಿಕ ಅಂತರ ಕಾಯ್ದುಕೊಳ್ಳುವ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸಿ, ನಾವೆಲ್ಲ ಒಟ್ಟಾಗಿ ಅಮೇಥಿಯನ್ನು ಕೊರೊನಾ ಮುಕ್ತವಾಗಿಸೋಣ ಎಂದು ಮಾಧ್ಯಮಗಳ ಪ್ರತಿನಿಧಿಗಳೊಂದಿಗೆ ಮನವಿ ಮಾಡಿದ್ದಾರೆ.