ನವದೆಹಲಿ:ಸಂಸತ್ತಿನಿಂದ ಆದೇಶ ಬಂದರೆ ಖಂಡಿತವಾಗಿಯೂ ಪಾಕ್ ಆಕ್ರಮಿತ ಕಾಶ್ಮೀರವನ್ನ ಪುನಃ ಪಡೆದುಕಳ್ಳುಲು ನಾವು ಸಿದ್ದರಿದ್ದೇವೆ ಎಂದು ಸೇನಾ ಮುಖ್ಯಸ್ಥ ಮನೋಜ್ ಮುಕುಂದ್ ನರವಾನೆ ಹೇಳಿದ್ದಾರೆ
ಇಂದು ದೆಹಲಿಯಲ್ಲಿ ಪತ್ರಿಕಾಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ನರವಾನೆ, ಸಂಸತ್ತಿನಲ್ಲಿ ನಿರ್ಣಯವಾದ ಪ್ರಕಾರ, ಪಿಒಕೆ, ಜಮ್ಮು ಮತ್ತು ಕಾಶ್ಮೀರ ನಮ್ಮ ದೇಶಕ್ಕೆ ಸೇರಿದ್ದಾಗಿದೆ. ಒಂದೊಮ್ಮೆ ಸರ್ಕಾರದಿಂದ ಆದೇಶ ಬಂದರೆ, ಪಾಕಿಸ್ತಾನ ಆಕ್ರಮಿತ ಕಾಶ್ಮೀರದ ಮೇಲೆ ಹಿಡಿತ ಸಾಧಿಸಲು ಭಾರತೀಯ ಸೇನೆ ಖಂಡಿತವಾಗಿಯೂ ಸಿದ್ಧವಿದೆ ಎಂದು ನರವಾನೆ ತಿಳಿಸಿದ್ದಾರೆ.
ಇನ್ನು ಕಾಶ್ಮೀರ ಕಣಿವೆಯಲ್ಲಿ ನಿಯೋಜಿಸಲಾಗಿರುವ ಸೇನಾಧಿಕಾರಿಗಳ ವಿರುದ್ಧದ ದೂರುಗಳ ಬಗ್ಗೆ ಪ್ರತಿಕ್ರಿಯಿಸಿದ ಮನೋಜ್ ಮುಕುಂದ್, ಸೇನೆಯಲ್ಲಿ ಕಮಾಂಡರ್ಗಳು ನೀಡಿದ ತೀರ್ಪುಗಳಿಗೆ ಗೌರವಿಸಬೇಕಾಗಿದೆ ಹಾಗೂ ಅಲ್ಲಿ ಈವರೆಗೆ ದಾಖಲಾದ ಎಲ್ಲಾ ದೂರುಗಳು ಆಧಾರರಹಿತವಾಗಿದ್ದು ಎಂದು ಸಾಬೀತಾಗಿದೆ ಎಂದರು.
ಇನ್ನು ಸಿಯಾಚಿನ್ ಪ್ರದೇಶದ ಬಗ್ಗೆ ಪ್ರಸ್ತಾಪಿಸಿದ ಅವರು, ಇದೊಂದು ಭಾರತೀಯ ಸೇನೆಗೆ ಪ್ರಮುಖವಾದ ಅಂಶವಾಗಿದ್ದು,ಆಯಕಟ್ಟಿನ ಪ್ರದೇಶವಾದ್ದರಿಂದ ಪಶ್ಚಿಮ ಹಾಗೂ ಉತ್ತರ ಭಾಗಗಳ ಬಗ್ಗೆ ನಿಗಾ ಇಡುವಲ್ಲಿ ಭಾರತೀಯ ಸೇನೆಗೆ ಸಿಯಾಚಿನ್ ತುಂಬಾ ಸಹಕಾರಿಯಾಗಿದೆ ಎಂದಿದ್ದಾರೆ.
ಕೇಂದ್ರ ಸರ್ಕಾರದಿಂದ ರಚನೆಯಾದ ಚೀಫ್ ಡಿಫೆನ್ಸ್ ಹುದ್ದೆ(ಸಿಡಿಎಸ್) ಅತ್ಯಂತ ಉತ್ತಮವಾದ ಯೋಜನೆಯಾಗಿದ್ದು, ಇದು ಸಂಪೂರ್ಣ ಯಶಸ್ಸು ಕಂಡಿದೆ ಎಂದು ಭಾರತೀಯ ಸೇನಾ ಮುಖ್ಯಸ್ಥ ಮನೋಜ್ ಮುಕುಂದ್ ನರವಾನೆ ತಿಳಿಸಿದ್ದಾರೆ.