ಶ್ರೀನಗರ: ಉತ್ತರ ಕಾಶ್ಮೀರದ ನಾನಾ ಭಾಗಗಳಲ್ಲಿ ಸಂಭವಿಸಿದ ಹಿಮಪ್ರವಾಹದಲ್ಲಿ ಭಾರತೀಯ ಸೇನೆ ಐವರು ವೀರಯೋಧರು ಮರಣವನ್ನಪ್ಪಿದ್ದಾರೆ. ಇನ್ನು ಈ ದುರಂತಗಳಲ್ಲಿ ಕನಿಷ್ಠ 6 ನಾಗರಿಕರು ಸಾವನ್ನಪ್ಪಿದ್ದಾರೆ ಎಂದು ಮೂಲಗಳಿಂದ ಮಾಹಿತಿ ಲಭ್ಯವಾಗಿದೆ.
ಸೈನಿಕರ ಮೇಲೆ ಮತ್ತೆ ಹಿಮಪ್ರವಾಹದ ಮರ್ಮಾಘಾತ... 5 ಯೋಧರ ವೀರಮರಣ!? ಇತರ 6 ಮಂದಿ ಸಾವು - ಕಾಶ್ಮೀರ ಭಾಗದಲ್ಲಿ ಸಂಭವಿಸಿದ ಹಿಮಪ್ರವಾಹ
ಕಾಶ್ಮೀರ ಭಾಗದಲ್ಲಿ ಸಂಭವಿಸಿದ ಹಿಮಪ್ರವಾಹದಲ್ಲಿ ಭಾರತೀಯ ಸೇನೆಯ ನಾಲ್ವರು ಯೋಧರು ಮೃತಪಟ್ಟಿದ್ದಾರೆ.
ಹಿಮಪ್ರವಾಹಕ್ಕೆ ಇಂದು ಕಾಶ್ಮೀರದಲ್ಲಿ ಕನಿಷ್ಠ 11 ಮಂದಿ ಪ್ರಾಣಕಳೆದುಕೊಂಡಿದ್ದಾರೆ. ಭಾರತ- ಪಾಕ್ ಅಂತಾರಾಷ್ಟ್ರೀಯ ಗಡಿ ಭಾಗದ ಮಚಿಲ್ ಪ್ರದೇಶದಲ್ಲಿ ಈ ದುರ್ಘಟನೆ ಸಂಭವಿಸಿದೆ. ಪ್ರತಿವರ್ಷ ಚಳಿಗಾಲದಲ್ಲಿ ಕಾಶ್ಮೀರದಲ್ಲಿ ಇಂತಹ ದುರ್ಘಟನೆಗಳು ನಡೆಯುತ್ತಲೇ ಇರುತ್ತವೆ. ಕಳೆದ ಕೆಲ ವರ್ಷಗಳ ಹಿಂದೆ, ನಮ್ಮ ರಾಜ್ಯದ ವೀರಯೋಧ ಹನುಮಂತ ನಾಯಕ್, ಹಿಮಪ್ರವಾಹದ ವಿರುದ್ಧ ಹೋರಾಡಿ ಬದುಕುಳಿದಿದ್ದರೂ ಅಂತಿಮವಾಗಿ ಹಿಮ ಹುಣ್ಣಿನಿಂದ ವೀರಮರಣವನ್ನಪ್ಪಿದ್ದರು.
ಹಿಮಪ್ರವಾಹದ ಹಿನ್ನಲೆಯಲ್ಲಿ ಯೋಧರನ್ನು ಪತ್ತೆ ಹಚ್ಚಲು ಸೇನಾ ಕಾರ್ಯಾಚರಣೆ ಆರಂಭಗೊಂಡಿದೆ. ಮೃತ ದೇಹಗಳಿಗಾಗಿ ಹಾಗೂ ಬದುಕುಳಿದವರಿಗಾಗಿ ರಕ್ಷಣಾ ಕಾರ್ಯಾಚರಣೆ ನಡೆಸಲು ಸೇನೆ ಸನ್ನದ್ಧವಾಗಿದೆ. ಈ ಸಂಬಂಧ ಹೆಚ್ಚಿನ ಮಾಹಿತಿ ನಿರೀಕ್ಷಿಸಲಾಗುತ್ತಿದೆ.