ಶ್ರೀನಗರ:ಪಾಕ್ ಆಕ್ರಮಿತ ಕಾಶ್ಮೀರದೊಳಗೆ ನುಗ್ಗಿ ಉಗ್ರರ ಕ್ಯಾಂಪ್ ಧ್ವಂಸ ಮಾಡಿರುವ ಜತೆಗೆ 50ಕ್ಕೂ ಹೆಚ್ಚು ಉಗ್ರರನ್ನು ಸೆದೆಬಡೆಯುವಲ್ಲಿ ಭಾರತೀಯ ಸೇನೆ ಯಶಸ್ವಿಯಾಗಿದೆ. ಇಷ್ಟಾದರೂ ಭಯೋತ್ಪಾದಕರಿಗೆ ಬುದ್ಧಿ ಬಂದಿರುವ ಹಾಗೇ ಕಾಣಿಸುತ್ತಿಲ್ಲ.
ಉಗ್ರರ ವಿರುದ್ಧದ ಕಾರ್ಯಾಚರಣೆ ವೇಳೆ ಆರ್ಮಿ ಅಧಿಕಾರಿ ಹುತಾತ್ಮ! - ಆರ್ಮಿ ಅಧಿಕಾರಿ ಹುತಾತ್ಮ
ಭಯೋತ್ಪಾದಕರ ವಿರುದ್ಧ ನಡೆಯುತ್ತಿದ್ದ ಕಾರ್ಯಾಚರಣೆ ವೇಳೆ ಭಾರತೀಯ ಸೇನೆಯ ಓರ್ವ ಸೇನಾಧಿಕಾರಿ ಹುತಾತ್ಮರಾಗಿರುವ ಘಟನೆ ನಡೆದಿದೆ.
ಸಾಂದರ್ಭಿಕ ಚಿತ್ರ
ಇದೀಗ ಜಮ್ಮು-ಕಾಶ್ಮೀರದ ಅವಂತಿಪುರ್ ಹಾಗೂ ನೌಸಾರಿ ಸೆಕ್ಟರ್ನಲ್ಲಿ ಉಗ್ರರ ವಿರುದ್ಧ ಕಾರ್ಯಾಚರಣೆ ನಡೆಸುತ್ತಿದ್ದ ವೇಳೆ ಭಾರತೀಯ ಸೇನೆಯ ಜೂನಿಯರ್ ಸೇನಾ ಅಧಿಕಾರಿ ಹುತಾತ್ಮರಾಗಿದ್ದಾರೆ.
ನೌಸಾರಿ ಸೆಕ್ಟರ್ನಲ್ಲಿ ಅಡಗಿ ಕುಳಿತಿದ್ದ ಮೂವರು ಉಗ್ರರ ವಿರುದ್ಧ ಕಾರ್ಯಾಚರಣೆ ನಡೆಸುತ್ತಿದ್ದ ವೇಳೆ, ಉಗ್ರರು ಗುಂಡಿನ ದಾಳಿ ನಡೆಸಿದಾಗ ಈ ಘಟನೆ ನಡೆದಿದೆ. ಉಗ್ರರ ವಿರುದ್ಧದ ಕಾರ್ಯಾಚರಣೆ ಈಗಲೂ ಮುಂದುವರಿದಿದ್ದು, ಭಾರತೀಯ ಸೇನೆ ತಿರುಗೇಟು ನೀಡುತ್ತಿದೆ. ಕಳೆದ ಕೆಲ ದಿನಗಳಿಂದ ಭಾರತೀಯ ಗಡಿಯೊಳಗೆ ನುಗ್ಗಲು ಉಗ್ರರು ಸತತ ಪ್ರಯತ್ನ ನಡೆಸುತ್ತಿದ್ದು, ಈ ವೇಳೆ ಭಾರತೀಯ ಯೋಧರು ತಿರುಗೇಟು ನೀಡುತ್ತಿದ್ದಾರೆ.