ಶ್ರೀನಗರ:ಗಡಿ ಪ್ರದೇಶದಲ್ಲಿ ಪಾಕ್ ನಡೆಸಿರುವ ನಿರಂತರ ಗುಂಡಿನ ದಾಳಿಯಲ್ಲಿ ಓರ್ವ ಜೂನಿಯರ್ ಆರ್ಮಿ ಆಫೀಸರ್ ಹುತಾತ್ಮರಾಗಿದ್ದು, ಸ್ಥಳೀಯ ಮಹಿಳೆಯೊಬ್ಬರು ಕೂಡಾ ಸಾವನ್ನಪ್ಪಿರುವ ಘಟನೆ ಉರಿ ಸೆಕ್ಟರ್ನಲ್ಲಿ ನಡೆದಿದೆ.
ಪಾಕ್ನಿಂದ ಅಪ್ರಚೋದಿತ ಗುಂಡಿನ ದಾಳಿ: ಆರ್ಮಿ ಆಫೀಸರ್ ಹುತಾತ್ಮ - ಓರ್ವ ಆರ್ಮಿ ಆಫೀಸರ್ ಹುತಾತ್ಮ
ಭಾರತೀಯ ಯೋಧರನ್ನ ಗುರಿಯಾಗಿಸಿಕೊಂಡು ನಡೆಸಿರುವ ದಾಳಿಯಲ್ಲಿ ಸೇನೆಯ ಆರ್ಮಿ ಆಫೀಸರ್ ಹುತಾತ್ಮರಾಗಿದ್ದು, ಸ್ಥಳೀಯ ಮಹಿಳೆಯೊಬ್ಬರು ಸಾವನ್ನಪ್ಪಿದ್ದಾರೆ.
ಸಾಂದರ್ಭಿಕ ಚಿತ್ರ
ಭಾರತೀಯ ಸೇನೆಯಲ್ಲಿ ಜೂನಿಯರ್ ಆಫೀಸರ್ ಆಗಿ ಸೇವೆ ಸಲ್ಲಿಸುತ್ತಿದ್ದ ಬ್ರಿಜೇಶ್ ಹುತಾತ್ಮರಾಗಿದ್ದಾರೆ. ಬೆಳಗ್ಗೆ 11.30ರಿಂದ ನಿರಂತರವಾಗಿ ಗುಂಡಿನ ದಾಳಿ ನಡೆಸಿರುವ ಪಾಕ್ಗೆ ಭಾರತೀಯ ಸೇನೆ ಸಹ ತಿರುಗೇಟು ನೀಡಿದೆ.
ಭಾರತೀಯ ಸೇನೆ ಗುರಿಯಾಗಿಸಿಕೊಂಡು ಪಾಕ್ ದಾಳಿ ನಡೆಸಿದ್ದು, ಈ ವೇಳೆ ಆರ್ಮಿ ಆಫೀಸರ್ ಹುತಾತ್ಮರಾಗಿದ್ದಾರೆ.