ಕರ್ನಾಟಕ

karnataka

ETV Bharat / bharat

ದಾಖಲೆಗಳ ಸರದಾರ ಒಡಿಶಾದ ಯೋಧನಿಂದ ಗಿನ್ನೆಸ್​​ ರೆಕಾರ್ಡ್​ - Oupada Block in Baleshwar district

ಒಂದು ಗಂಟೆ 3 ನಿಮಿಷಗಳ ಕಾಲ ತಲೆಕೆಳಗೆ ಕಾಲು ಮೇಲೆ ಮಾಡಿ ನಿಂತು ದೇಹದ ಮೇಲ್ಮೈಯನ್ನು ತನ್ನ ಪಾದದಿಂದ 6,000 ಕ್ಕೂ ಹೆಚ್ಚು ಬಾರಿ ಮುಟ್ಟುವ ಮೂಲಕ ಒಡಿಶಾದ ಯೋಧ ಗಿನ್ನೆಸ್​​ ಬುಕ್​ ಆಫ್​ ರೆಕಾರ್ಡ್​ನಲ್ಲಿ ದಾಖಲೆ ಬರೆದಿದ್ದಾರೆ.

Army officer from Odisha creates Guinness Book of World Records
ದಾಖಲೆಗಳ ಸರದಾರ ಒಡಿಶಾದ ಯೋಧನಿಂದ ಗಿನ್ನೀಸ್​ ರೆಕಾರ್ಡ್​

By

Published : Jan 16, 2021, 1:06 PM IST

ಒಡಿಶಾ:ಭಾರತೀಯ ಸೇನೆಯಲ್ಲಿ ಲೆಫ್ಟಿನೆಂಟ್ ಕರ್ನಲ್ ಆಗಿ ಸೇವೆ ಸಲ್ಲಿಸುತ್ತಿರುವ ಬಾಲೇಶ್ವರ ಜಿಲ್ಲೆಯ ಔಪಾಡಾ ಬ್ಲಾಕ್‌ನ ಬಂಗುರು ಗ್ರಾಮದ ಲಕ್ಷ್ಮಿಧರ್ ಭುಯಾನ್ ವಿಶ್ವ ಗಿನ್ನೆಸ್​​ ಬುಕ್​ ಆಫ್​ ರೆಕಾರ್ಡ್​ನಲ್ಲಿ ದಾಖಲೆ ಬರೆದಿದ್ದಾರೆ.

ದಾಖಲೆಗಳ ಸರದಾರ ಒಡಿಶಾದ ಯೋಧನಿಂದ ಗಿನ್ನೆಸ್​​ ರೆಕಾರ್ಡ್​

ಒಂದು ಗಂಟೆ 3 ನಿಮಿಷಗಳ ಕಾಲ ತಲೆಕೆಳಗೆ ಕಾಲು ಮೇಲೆ ಮಾಡಿ ನಿಂತ ಅವರು, ದೇಹದ ಮೇಲ್ಮೈಯನ್ನು ತನ್ನ ಪಾದದ ಮೂಲಕ 6,000 ಕ್ಕೂ ಹೆಚ್ಚು ಬಾರಿ ಮುಟ್ಟಬಲ್ಲರು. ವಯಸ್ಸು 50 ವರ್ಷ ದಾಟಿದ್ದರೂ ಅವರು ವಿವಿಧ ಅಪರೂಪದ ದಾಖಲೆಗಳನ್ನು ಹೊಂದಿದ್ದಾರೆ.

ಕರ್ನಲ್ ಭುಯಾನ್, 1992 ರಿಂದ ಭಾರತೀಯ ಸೇನೆಯಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ. ಮ್ಯಾರಥಾನ್ ಓಟಗಾರರಾಗಿರುವ ಅವರು, ಯೋಗದಲ್ಲಿ 34 ವರ್ಷಗಳ ಅನುಭವ ಹೊಂದಿದ್ದಾರೆ. ಕರ್ನಲ್ ಭುಯಾನ್ ಈವರೆಗೆ ಆರು ದಾಖಲೆಗಳನ್ನು ಹೊಂದಿದ್ದಾರೆ.

ಕರ್ನಲ್ ಭುಯಾನ್ ಅವರ ವಿವಿಧ ದಾಖಲೆಗಳು:

ಕೋಕಾ-ಕೋಲಾ ಬುಕ್ ಆಫ್ ರೆಕಾರ್ಡ್ಸ್

ಲಿಮ್ಕಾ ಬುಕ್ ಆಫ್ ರೆಕಾರ್ಡ್ಸ್

ಬೆಸ್ಟ್ ಆಫ್ ಇಂಡಿಯಾ ರೆಕಾರ್ಡ್ಸ್

ಇಂಡಿಯಾ ಬುಕ್ ಆಫ್ ರೆಕಾರ್ಡ್ಸ್

ಏಷ್ಯಾ ಬುಕ್ ಆಫ್ ರೆಕಾರ್ಡ್ಸ್

ಸದ್ಯ, ಗಿನ್ನೆಸ್ ಬುಕ್ ಆಫ್ ವರ್ಲ್ಡ್ ರೆಕಾರ್ಡ್ಸ್

ABOUT THE AUTHOR

...view details