ಕರ್ನಾಟಕ

karnataka

ETV Bharat / bharat

ಸಿಂಹದಂತಿದ್ದ ನನ್ನ ಮಗ ಎಲ್ಲಿ?: ಹುತಾತ್ಮ ಯೋಧನ ತಾಯಿ ಕಣ್ಣೀರು... - undefined

ನಿನ್ನೆ ಅನಂತ್​ನಾಗ್​ನಲ್ಲಿ ನಡೆದ ಎನ್​ಕೌಂಟರ್ ವೇಳೆ ಮೇಜರ್​ ಕೇತಾನ್ ಶರ್ಮ ಹುತಾತ್ಮರಾಗಿದ್ದಾರೆ. ಮೀರತ್​ನಲ್ಲಿರುವ ಅವರ ಮನೆಯಲ್ಲಿ ಶೋಕ ಮಡುಗಟ್ಟಿದೆ. ಮನೆಗೆ ಆಸರೆಯಾಗಿದ್ದ ಮಗ ಇನ್ನಿಲ್ಲಎಂಬುದು ಅವರ ಪೋಷಕರನ್ನು ಅತೀವ ದುಃಖಕ್ಕೀಡುಮಾಡಿದೆ.

Ketan Sharma

By

Published : Jun 18, 2019, 1:47 PM IST

Updated : Jun 18, 2019, 2:19 PM IST

ನವದೆಹಲಿ:ಪುಲ್ವಾಮದಲ್ಲಿ ರಕ್ಕಸ ದಾಳಿ ನಡೆದು, 40ಕ್ಕೂ ಹೆಚ್ಚು ಯೋಧರು ಹುತಾತ್ಮರಾಗಿದ್ದು ದೇಶದ ಕರಾಳ ಇತಿಹಾಸ. ಇದೀಗ ಮತ್ತೆ ಪುಲ್ವಾಮದಲ್ಲಿ ನಡೆದ ದಾಳಿಯಲ್ಲಿ ತೀವ್ರವಾಗಿ ಗಾಯಗೊಂಡಿದ್ದ ಇಬ್ಬರು ಯೋಧರು ಹುತಾತ್ಮರಾಗಿದ್ದಾರೆ.

ಹುತಾತ್ಮ ಯೋಧ ಕೇತಾನ್ ಶರ್ಮಮನೆಯಲ್ಲಿ ಶೋಕ

ಇದರ ಬೆನ್ನಲ್ಲೆ, ನಿನ್ನೆ ಅನಂತ್​ನಾಗ್​ನಲ್ಲಿ ನಡೆದ ಎನ್​ಕೌಂಟರ್ ವೇಳೆ ಮೇಜರ್​ ಕೇತಾನ್ ಶರ್ಮ ಹುತಾತ್ಮರಾಗಿದ್ದಾರೆ. ಮೀರತ್​ನಲ್ಲಿರುವ ಅವರ ಮನೆಯಲ್ಲಿ ಶೋಕ ಮಡುಗಟ್ಟಿದೆ. ಮನೆಗೆ ಆಸರೆಯಾಗಿದ್ದ ಮಗ ಇನ್ನಿಲ್ಲ ಎಂಬುದು ಅವರ ಪೋಷಕರನ್ನು ಅತೀವ ದುಃಖಕ್ಕೀಡುಮಾಡಿದೆ. ಮಗನ ನೆನಪಿನಲ್ಲಿ ಕಣ್ಣೀರಿಡುತ್ತಿರುವ ಕೇತಾನ್ ತಾಯಿ, ಸಿಂಹದಂತಿದ್ದ ನಮ್ಮ ಮಗ ಎಲ್ಲಿ ಹೋದ? ಅವನನ್ನು ಕರೆಯಿಸಿ. ಅವನಿಲ್ಲದೇ ನಾನು ಹೇಗೆ ಬಾಳಲಿ ಎಂದು ಅಳುತ್ತಿರುವ ದೃಶ್ಯಗಳು ಕರುಳು ಹಿಂಡುವಂತಿವೆ. ಸೇನೆಯ ಅಧಿಕಾರಿಗಳು ಪೋಷಕರನ್ನು ಸಮಾಧಾನ ಮಾಡುತ್ತಿರುವ ದೃಶ್ಯಗಳು ಎಲ್ಲೆಡೆ ಹರಿದಾಡುತ್ತಿವೆ.

ನಿನ್ನೆ ಪುಲ್ವಾಮದ ಅರಿಹಾಲ್ ಎಂಬಲ್ಲಿ ಸಾಗುತ್ತಿದ್ದ ಗಸ್ತು ವಾಹನ 44 ಆರ್​ಆರ್​ ಮೇಲೆ ಉಗ್ರರು ಐಇಡಿ ದಾಳಿ ನಡೆಸಿದ್ದರು. ದಾಳಿಯಲ್ಲಿ ಗಾಯಗೊಂಡಿದ್ದ ಇಬ್ಬರು ಯೋಧರನ್ನು ಆಸ್ಪತ್ರೆಗೆ ದಾಖಲಿಸಿತ್ತಾದರೂ, ಇಂದು ಚಿಕಿತ್ಸೆ ಫಲಿಸದೇ ಕಣ್ಮುಚ್ಚಿದ್ದಾರೆ ಎಂದು ಭಾರತೀಯ ಸೇನೆ ಹೇಳಿದೆ. ಹುತಾತ್ಮರಾದ ಯೋಧರು ಹವಿಲ್ದಾರ್​ ಅಮರ್ಜೀತ್​ ಕುಮಾರ್​ ಹಾಗೂ ನಾಯಕ್​ ಅಜಿತ್ ಕುಮಾರ್​ ಸಾಹೋ ಎಂದು ಮಾಹಿತಿ ಲಭ್ಯವಾಗಿದೆ. ಘಟನೆಯಲ್ಲಿ 9 ಯೋಧರು ಗಾಯಗೊಂಡಿದ್ದರು.

Last Updated : Jun 18, 2019, 2:19 PM IST

For All Latest Updates

TAGGED:

ABOUT THE AUTHOR

...view details