ನವದೆಹಲಿ: ಭಾರತೀಯ ಸೇನೆಗೆ ಸೇರಿದ ಆಸ್ಪತ್ರೆಯಲ್ಲಿ ಕೆಲಸ ನಿರ್ವಹಿಸುತ್ತಿದ್ದ ದಾದಿ ಜೊತೆ ಅಕ್ರಮ ಸಂಬಂಧ ಹೊಂದಿದ್ದ ಕರ್ನಲ್ ವೊಬ್ಬರನ್ನು ಸೇವೆಯನ್ನು ಮೊಟಕುಗೊಳಿಸಲಾಗಿದೆ.
ನಿವೃತ್ತರಾದರೂ ಭಾರತೀಯ ಸೇನಾ ಕಾಯ್ದೆ ಸೆಕ್ಷನ್ 123ರ ಅನ್ವಯ ಕಾರ್ಯ ನಿರ್ವಹಿಸುತ್ತಿದ್ದ ಕರ್ನಲ್ ಅವರ ಸೇವೆಯನ್ನು ತಕ್ಷಣದಿಂದಲೇ ಜಾರಿಗೆಬರುವಂತೆ ಮೊಟಕುಗೊಳಿಸಿ ಪ್ರಕರಣ ಸಂಬಂಧ ತನಿಖೆಗೆ ಆದೇಶಿಸಲಾಗಿದೆ.
ಶಿಕ್ಷೆಗೆ ಗುರಿಯಾಗಿರುವ ಕರ್ನಲ್, ಸೇನಾ ಆಸ್ಪತ್ರೆಯಲ್ಲಿನ ದಾದಿಯೊಂದಿಗೆ ಅನೈತಿಕ ಸಂಬಂಧ ಹೊಂದಿದ್ದರು ಎನ್ನಲಾಗಿದೆ. ಈ ಬಗ್ಗೆ ಸೇನೆಯಲ್ಲಿದ್ದ ಸೈನಿಕರೇ ರಕ್ಷಣಾ ಸಚಿವ ರಾಜನಾಥ್ ಸಿಂಗ್ಗೆ ಈ ಹಿಂದೆ ಪತ್ರ ಬರೆದಿದ್ದರು.