ಶ್ರೀನಗರ: ಜಮ್ಮು ಮತ್ತು ಕಾಶ್ಮೀರ ಕಣಿವೆಯಲ್ಲಿನ ಭದ್ರತಾ ವ್ಯವಸ್ಥೆ ಪರಿಶೀಲನೆಗಾಗಿ ಭೂಸೇನಾ ಮುಖ್ಯಸ್ಥ ಎಂ.ಎಂ. ನರವಣೆ ಗುರುವಾರ ಶ್ರೀನಗರಕ್ಕೆ ಆಗಮಿಸಿದರು. ನಾರ್ದರ್ನ್ ಆರ್ಮಿ ಕಮಾಂಡರ್ ಲೆಫ್ಟಿನೆಂಟ್ ಜನರಲ್ ವೈ.ಕೆ. ಜೋಶಿ ಹಾಗೂ ಚಿನಾರ್ ಕೋರ್ ಕಮಾಂಡರ್ ಲೆಫ್ಟಿನೆಂಟ್ ಜನರಲ್ ಬಿ.ಎಸ್. ರಾಜು ಜೊತೆಗಿದ್ದಾರೆ.
ಭೂಸೇನಾ ಮುಖ್ಯಸ್ಥರ ಕಾಶ್ಮೀರ ಭೇಟಿ; ಭದ್ರತಾ ವ್ಯವಸ್ಥೆ ಪರಿಶೀಲನೆ
ಭಾರತ ಪಾಕ್ ಗಡಿಯಲ್ಲಿರುವ ಭಾರತೀಯ ರಕ್ಷಣಾ ಪಡೆಗಳ ಬೇಸ್ಗಳಿಗೆ ಭೇಟಿ ನೀಡಿದ ಎಂ.ಎಂ. ನರವಣೆ ಯೋಧರೊಂದಿಗೆ ಮಾತುಕತೆ ನಡೆಸಿದರು. ಜಮ್ಮು ಮತ್ತು ಕಾಶ್ಮೀರದಲ್ಲಿ ಶಾಂತಿ ಹಾಗೂ ಅಭಿವೃದ್ಧಿಯ ಹೊಸ ಮನ್ವಂತರ ಆರಂಭವಾಗಿದೆ ಎಂದು ಹೇಳಿದ ಅವರು, ಯಾವುದೇ ಸಮಯದಲ್ಲಿ ಎದುರಾಗಬಹುದಾದ ಭದ್ರತಾ ಸವಾಲುಗಳನ್ನು ಎದುರಿಸಲು ಸದಾ ಸನ್ನದ್ಧರಾಗಿರಬೇಕೆಂದು ಸೂಚಿಸಿದರು.
ಭಾರತ ಪಾಕ್ ಗಡಿಯಲ್ಲಿರುವ ಭಾರತೀಯ ರಕ್ಷಣಾ ಪಡೆಗಳ ಬೇಸ್ಗಳಿಗೆ ಭೇಟಿ ನೀಡಿದ ಎಂ.ಎಂ. ನರವಣೆ ಯೋಧರೊಂದಿಗೆ ಮಾತುಕತೆ ನಡೆಸಿದರು. ಜಮ್ಮು ಮತ್ತು ಕಾಶ್ಮೀರದಲ್ಲಿ ಶಾಂತಿ ಹಾಗೂ ಅಭಿವೃದ್ಧಿಯ ಹೊಸ ಮನ್ವಂತರ ಆರಂಭವಾಗಿದೆ ಎಂದು ಹೇಳಿದ ಅವರು, ಯಾವುದೇ ಸಮಯದಲ್ಲಿ ಎದುರಾಗಬಹುದಾದ ಭದ್ರತಾ ಸವಾಲುಗಳನ್ನು ಎದುರಿಸಲು ಸದಾ ಸನ್ನದ್ಧರಾಗಿರಬೇಕೆಂದು ಸೂಚಿಸಿದರು. ಕಣಿವೆಯಲ್ಲಿ ಕೋವಿಡ್-19 ಹರಡದಂತೆ ತಡೆಗಟ್ಟಲು ಎಲ್ಲ ರಾಜ್ಯದ ಸರ್ಕಾರಿ ಇಲಾಖೆಗಳು ಸಮನ್ವಯತೆಯಿಂದ ಕೆಲಸ ಮಾಡುತ್ತಿವೆ ಎಂದು ಶ್ಲಾಘಿಸಿದರು.
92 ಬೇಸ್ ಹಾಸ್ಪಿಟಲ್ಗೆ ಭೇಟಿ ನೀಡಿದ ನರವಣೆ ಅಲ್ಲಿನ ವ್ಯವಸ್ಥೆಗಳನ್ನು ಪರಿಶೀಲಿಸಿದರು. ನಂತರ ಬಾದಾಮಿ ಬಾಗ್ ಕ್ಯಾಂಟೋನ್ಮೆಂಟ್ನಲ್ಲಿ ಚಿನಾರ್ ಕೋರ್ ಕಮಾಂಡರ್, ಜಮ್ಮು ಮತ್ತು ಕಾಶ್ಮೀರದ ಒಟ್ಟಾರೆ ಪರಿಸ್ಥಿತಿಯ ಮಾಹಿತಿ ನೀಡಿದರು. ಸಂಜೆ ಸ್ಥಳೀಯ ಸಮಾಜ ಮುಖಂಡರನ್ನು ಭೇಟಿಯಾದ ನರವಣೆ ಅವರೊಂದಿಗೆ ಮಾತುಕತೆ ನಡೆಸಿದರು.