ನವದೆಹಲಿ: ಕಾರ್ಗಿಲ್ ವಿಜಯ್ ದಿನದ ನಿಮಿತ್ತ 1999ರ ಕಾರ್ಗಿಲ್ನ ಎತ್ತರದ ಸ್ಥಳದಲ್ಲಿ ಶೌರ್ಯ ಮೆರೆದ ಭಾರತೀಯ ಯೋಧರ ಕೊಡುಗೆಯನ್ನು ಸೇನಾ ಮುಖ್ಯಸ್ಥ ಬಿಪಿನ್ ರಾವತ್ ಸ್ಮರಿಸಿದರು.
ಹುತಾತ್ಮ ಯೋಧರಿಗೆ ಗೌರವ ನಮನ ಸಲ್ಲಿಸಿ ಮಾತನಾಡಿದ ರಾವತ್, ರಕ್ಷಣಾ ಸೇವೆ ನೀಡುವುದು ಎಷ್ಟೇ ಕಷ್ಟದಾಯಕವಾದ ಕೆಲಸ ಆಗಿದ್ದರೂ ಅದನ್ನು ನಮ್ಮ ಸೈನಿಕರ ಕಾರ್ಯಸಾಧ್ಯವಾಗಿಸಿದ್ದಾರೆ. ಸದಾ ದೇಶವಾಸಿಗರ ರಕ್ಷಣೆ ಮಾಡುತ್ತಾರೆ ಎಂಬುದನ್ನು ಅವರ ಪರವಾಗಿ ನಾನು ನಿಮಗೆ ಭರವಸೆ ನೀಡುತ್ತೇನೆ ಎಂದು ಹೇಳಿದರು.
ನಮ್ಮ ಸೈನಿಕರು ಗಡಿಯಲ್ಲಿ ಸಾಮಾನ್ಯ ಮನುಷ್ಯರಾಗಿದ್ದು, ದೇಶದ ಗಡಿಯನ್ನು ಅನುಕ್ಷಣವೂ ಕಾಯುತ್ತಾರೆ ಎಂದು ಯೋಧರ ಸೇವೆಯನ್ನು ಶ್ಲಾಘಿಸಿದರು.
ಕಾರ್ಗಿಲ್ ಯುದ್ಧದಲ್ಲಿ ಹುತಾತ್ಮನಾದ ಯೋಧ ಕ್ಯಾಪ್ಟನ್ ವಿಕ್ರಂ ಬಾತ್ರಾ ಅವರ ತಂದೆ ಜಿ.ಎಲ್. ಬಾತ್ರಾ ಮಾತನಾಡಿ, ಸರ್ಕಾರ ಭಯೋತ್ಪಾದಕರಿಗೆ ಬೆಂಬಲವಾಗಿ ನಿಂತಿರುವ ಪಾಕಿಸ್ತಾನದ ವಿರುದ್ಧ ಕಠಿಣ ಕ್ರಮ ತೆಗೆದುಕೊಳ್ಳಬೇಕು. ಪರಮ್ ವೀರ್ ಚಕ್ರ ಪ್ರಶಸ್ತಿ ಪುರಸ್ಕೃತರ ಬಳಿಕ ದೆಹಲಿಯ ರಸ್ತೆಗಳ ಹೆಸರನ್ನು ಮರುನಾಮಕರಣ ಮಾಡುವಂತೆ ದೆಹಲಿ ಸರ್ಕಾರಕ್ಕೆ ಮನವಿ ಮಾಡಿದೆ. ಆದರೆ, ಈ ಬಗ್ಗೆ ಸರ್ಕಾರ ಇದುವರೆಗೂ ಯಾವುದೇ ಪ್ರತಿಕ್ರಿಯೆ ನೀಡಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಡ್ರಾಸ್ನಲ್ಲಿ ಕಾರ್ಗಿಲ್ ಯುದ್ಧ ಸ್ಮಾರಕದಲ್ಲಿ ಹುತಾತ್ಮ ಯೋಧರಿಗೆ ವಾಯುಪಡೆ ಮುಖ್ಯಸ್ಥ ಮಾರ್ಷಲ್ ಬೀರೇಂದ್ರ ಸಿಂಗ್ ಧನೋವಾ ಹಾಗೂ ನೌಕಾ ಪಡೆ ಮುಖ್ಯಸ್ಥ ಕರಂಬೀರ್ ಸಿಂಗ್ ಕೂಡ ಗೌರವ ಸಲ್ಲಿಸಿದರು.
ಏರ್ಚೀಫ್ ಮಾರ್ಷಾಲ್ ಬಿರೇಂದ್ರ ಸಿಂಗ್ ಧನೋವಾ, ನೌಕಾಪಡೆ ಮುಖ್ಯಸ್ಥ ಅಡ್ಮಿರಲ್ ಕರಮ್ಬೀರ್ ಸಿಂಗ್ ಸಹ ಕಾರ್ಗಿಲ್ ಯೋಧರಿಗೆ ನಮನ ಸಲ್ಲಿಸಿದರು.
ಇನ್ನು ಶ್ರೀನಗರದಲ್ಲಿ ರಾಷ್ಟ್ರಪತಿ ರಾಮನಾಥ್ ಕೋವಿಂದ್ ಸಹ ಕಾರ್ಗಿಲ್ ವೀರ ಯೋಧರಿಗೆ ನಮನ ಸಲ್ಲಿಕೆ ಮಾಡಿದರು.