ನವದೆಹಲಿ: ಪಾಕಿಸ್ತಾನ ಏನಾದರೂ ಮತ್ತೆ ತೊಂದರೆ ನೀಡಿದರೆ ತಕ್ಕ ಪ್ರತ್ಯುತ್ತರ ನೀಡದೆ ಬಿಡೋದಿಲ್ಲ ಎಂದು ಸೇನಾ ಮುಖ್ಯಸ್ಥ ಬಿಪಿನ್ ರಾವತ್ ಎಚ್ಚರಿಸಿದ್ದಾರೆ.
ಕಾರ್ಗಿಲ್ ವಿಜಯೋತ್ಸವದ ನಿಮಿತ್ತ ನಡೆದ ಉಪನ್ಯಾಸ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಉಗ್ರ ಸಂಘಟನೆಗಳ ಮೂಲಕ ಭಾರತದ ಮೇಲೆ ದಾಳಿ ಪಾಕ್ ದಾಳಿ ನಡೆಸಿದೆ. ದೇಶವನ್ನು ರಕ್ಷಿಸುವ ಉದ್ದೇಶದಿಂದ ಭಾರತೀಯ ಸೈನಿಕರು ಸಹ ತಕ್ಕ ಉತ್ತರ ಕೊಟ್ಟಿದ್ದಾರೆ. ಇನ್ಮುಂದೆ ಪಾಕ್ ತನ್ನ ವರ್ತನೆ ಮುಂದುವರೆಸಿದ ನಾವು ಕಠಿಣ ಪ್ರತಿಕ್ರಿಯೆ ನೀಡುವುದರಲ್ಲಿ ಅನುಮಾನವೇ ಇಲ್ಲ ಎಂದರು.
ಸೇನಾ ಮುಖ್ಯಸ್ಥ ಬಿಪಿನ್ ರಾವತ್ ತಾಂತ್ರಿಕತೆಯಿಂದಾಗಿ ಭವಿಷ್ಯದ ಸಂಘರ್ಷಗಳು ಮತ್ತಷ್ಟು ಹಿಂಸಾತ್ಮಕವಾಗಿ, ಊಹಿಸಲೂ ಆಗದಷ್ಟು ಜಟಿಲವಾಗಲಿವೆ. ಭಾರತೀಯ ಸೇನೆಯು ಎಲ್ಲ ತರದ ಯುದ್ಧಗಳಿಗೆ ಸಿದ್ಧವಾಗಿರಬೇಕು. ಆಧುನಿಕ ತಂತ್ರಜ್ಞಾನವು ಯುದ್ಧದ ಮಾದರಿಯಲ್ಲೇ ಬದಲಾವಣೆ ತರುತ್ತಿದೆ. ರಣರಂಗದಲ್ಲಿ ತಾಂತ್ರಿಕತೆ ಹಾಗೂ ಬಾಹ್ಯಾಕಾಶ ವಲಯ ಪ್ರಮುಖ ಪಾತ್ರ ವಹಿಸುತ್ತದೆ. ಇದೆಲ್ಲದ್ದಕ್ಕೂ ಸಂಪರ್ಕ ಕಲ್ಪಿಸುತ್ತದೆ ಎಂದರು.
ಇಂದಿನ ಸಾಂಪ್ರದಾಯಿಕ ಸಂಘರ್ಷಗಳೇ ಮುಂದೆ ಹೈಬ್ರೀಡ್ ಯುದ್ಧಕ್ಕೆ ಕಾರಣವಾಗಬಹುದು. ಹಾಗಾಗಿ ಬಾಹ್ಯಾಕಾಶ, ಸೈಬರ್ ಹಾಗೂ ವಿಶೇಷ ಪಡೆಗಳಲ್ಲಿ ಸಾಕಷ್ಟು ಪರಿವರ್ತನೆ ಆಗಬೇಕಿದೆ ಎಂದರು. ಲಡಾಕ್ನಲ್ಲಿ ಚೀನಾದಿಂದ ಯಾವುದೇ ಅತಿಕ್ರಮಣ ನಡೆದಿಲ್ಲ. ಅಲ್ಲೂ ಸೇನೆ ಹದ್ದಿನ ಕಣ್ಣಿಟ್ಟಿದೆ ಎಂದು ಸೇನಾ ಮುಖ್ಯಸ್ಥರು ಸ್ಪಷ್ಟಪಡಿಸಿದ್ದಾರೆ