ಕರ್ನಾಟಕ

karnataka

ETV Bharat / bharat

ಲಡಾಖ್​ಗೆ ಭೂಸೇನಾ ಮುಖ್ಯಸ್ಥ ನರವನೆ ಭೇಟಿ: ಭದ್ರತಾ ಸ್ಥಿತಿಗತಿ ಕುರಿತು ಪರಿಶೀಲನೆ - ಪಿಎಲ್‌ಎ

ಪೂರ್ವ ಲಡಾಖ್​​ನ ಪಾಂಗೊಂಗ್ ತ್ಸೋ ಸರೋವರದ ಬಳಿ ಭಾರತ ಹಾಗೂ ಚೀನಾ ಸೈನಿಕರ ನಡುವೆ ಸಂಘರ್ಷ ನಡೆದಿರುವುದು ವರದಿಯಾದ ಬೆನ್ನಲ್ಲೇ ಭೂಸೇನಾ ಮುಖ್ಯಸ್ಥ ಮನೋಜ್​ ಮುಕುಂದ್​ ನರವನೆ ಇಂದು ಲಡಾಖ್​ಗೆ ಭೇಟಿ ನೀಡಿದ್ದಾರೆ.

Army Chief
ಮನೋಜ್​ ಮುಕುಂದ್​ ನರವನೆ

By

Published : Sep 3, 2020, 11:55 AM IST

ನವದೆಹಲಿ: ಭಾರತ-ಚೀನಾ ಗಡಿ ಪ್ರದೇಶದಲ್ಲಿನ ಭದ್ರತಾ ಸ್ಥಿತಿಗತಿಯನ್ನು ಪರಿಶೀಲಿಸಲು ಭೂಸೇನಾ ಮುಖ್ಯಸ್ಥ ಮನೋಜ್​ ಮುಕುಂದ್​ ನರವನೆ ಅವರು ಪೂರ್ವ ಲಡಾಖ್​ಗೆ ಭೇಟಿ ನೀಡಿದ್ದಾರೆ.

ಪೂರ್ವ ಲಡಾಖ್​​ನ ಪಾಂಗೊಂಗ್ ತ್ಸೋ ಸರೋವರದ ಬಳಿ ಭಾರತ ಹಾಗೂ ಚೀನಾ ಸೈನಿಕರ ನಡುವೆ ಸಂಘರ್ಷ ನಡೆದಿರುವುದು ವರದಿಯಾದ ಬೆನ್ನಲ್ಲೇ ಎಂ ಎಂ ನರವನೆ ಇಲ್ಲಿಗೆ ಭೇಟಿ ನೀಡಿದ್ದಾರೆ. ಗಡಿ ನಿಯಂತ್ರಣ ರೇಖೆಯುದ್ದಕ್ಕೂ (ಎಲ್‌ಎಸಿ) ಇರುವ ಪರಿಸ್ಥಿತಿ ಕುರಿತು ಹಿರಿಯ ಕಮಾಂಡರ್‌ಗಳು ನರವನೆ ಅವರಿಗೆ ಮಾಹಿತಿ ನೀಡಲಿದ್ದಾರೆ.

ಆಗಸ್ಟ್ 29 ಮತ್ತು 30ರ ತಡರಾತ್ರಿ ಚೀನಾದ ಪೀಪಲ್ಸ್ ಲಿಬರೇಶನ್ ಆರ್ಮಿ (ಪಿಎಲ್‌ಎ) ಸೈನಿಕರು ಭಾರತದೊಳಗೆ ನುಸುಳಲು ಯತ್ನಿಸಿದ್ದು, ಪಾಂಗೊಂಗ್ ತ್ಸೋ ಸರೋವರದ ಬಳಿ ಭಾರತೀಯ ಪಡೆ ಇವರನ್ನು ತಡೆದಿದೆ ಎಂದು ಸೇನೆಯ ಸಾರ್ವಜನಿಕ ಸಂಪರ್ಕಾಧಿಕಾರಿ ಕರ್ನಲ್ ಅಮನ್​ ಆನಂದ್ ನಿನ್ನೆ ತಿಳಿಸಿದ್ದರು. ಆದರೆ ಈ ಮಾಹಿತಿಯನ್ನು ತಳ್ಳಿ ಹಾಕಿದ ಚೀನಾ, ಪಾಂಗೊಂಗ್ ತ್ಸೋ ಸರೋವರದ ಬಳಿ ಭಾರತೀಯ ಪಡೆ LAC ಅತಿಕ್ರಮಣ ಮಾಡಿದೆ ಎಂದು ಆರೋಪಿಸಿದೆ.

ABOUT THE AUTHOR

...view details