ಕರ್ನಾಟಕ

karnataka

ETV Bharat / bharat

ನಿಷೇಧಿತ ಜಾರ್ಖಂಡ್ ಜನ್ ಮುಕ್ತಿ ಪರಿಷದ್ - ಸೇನೆ ನಡುವೆ ಗುಂಡಿನ ಚಕಮಕಿ - ಜಾರ್ಖಂಡ್​ನಲ್ಲಿ ಶಸ್ತ್ರಾಸ್ತ್ರಗಳು ವಶಕ್ಕೆ

ಜಾರ್ಖಂಡ್ ಜನ್​ ಮುಕ್ತಿ ಪರಿಷದ್ ಹಾಗೂ ಸೇನೆಯ ನಡುವೆ ಗುಂಡಿನ ಕಾಳಗ ನಡೆದಿದ್ದು, ಅಪಾರ ಪ್ರಮಾಣದ ಶಸ್ತ್ರಾಸ್ತ್ರಗಳನ್ನು ವಶಕ್ಕೆ ಪಡೆಯಲಾಗಿದೆ.

gunfight between forces, militants
ಜಾರ್ಖಂಡ್ ಜನ್ ಮುಕ್ತಿ ಪರಿಷದ್ ಹಾಗೂ ಸೇನೆ ನಡುವೆ ಗುಂಡಿನ ಚಕಮಕಿ

By

Published : Dec 3, 2020, 10:06 PM IST

ಮೇದಿನಿನಗರ್ (ಜಾರ್ಖಂಡ್):ನಿಷೇಧಿತ ಜಾರ್ಖಂಡ್ ಜನ್​ ಮುಕ್ತಿ ಪರಿಷದ್ ಹಾಗೂ ಸೇನೆಯ ನಡುವೆ ಗುಂಡಿನ ಕಾಳಗ ನಡೆದಿದ್ದು, ಅಪಾರ ಪ್ರಮಾಣದ ಶಸ್ತ್ರಾಸ್ತ್ರಗಳನ್ನು ಸೇನೆ ವಶಕ್ಕೆ ಪಡೆದುಕೊಂಡಿದೆ.

ಪಲಮು ಜಿಲ್ಲೆಯಲ್ಲಿರುವ ಪಂಕಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಕಂಡು ಬರುವ ಸಾಲ್ಮದಿರಿ ಅರಣ್ಯದಲ್ಲಿ ಗುಂಡಿನ ಚಕಮಕಿ ನಡೆದಿದ್ದು, ಸುಮಾರು ಒಂದೂವರೆ ಗಂಟೆ ಪರಿಸ್ಥಿತಿ ಉದ್ವಿಗ್ನವಾಗಿತ್ತು ಎಂದು ಪೊಲೀಸರು ತಿಳಿಸಿದ್ದಾರೆ.

ಜನರನ್ನು ದರೋಡೆ ಮಾಡುವ ಸಲುವಾಗಿ ಜಾರ್ಖಂಡ್ ಜನ್​ ಮುಕ್ತಿ ಪರಿಷದ್ ಸದಸ್ಯರು ಅಲ್ಲಿದ್ದರು. ಸೇನೆ ಅಲ್ಲಿಗೆ ಧಾವಿಸಿದಾಗ ಅವರೆಡೆ ಗುಂಡು ಹಾರಿಸಿ, ಪರಾರಿಯಾಗಲು ಯತ್ನಿಸಿದ್ದಾರೆ. ಗುಂಡಿನ ಚಕಮಕಿ ನಡೆದಿದೆ. ಈ ವೇಳೆ, ಶಸ್ತ್ರಾಸ್ತ್ರಗಳನ್ನು ಬಿಟ್ಟು ಅವರು ಪರಾರಿಯಾಗಿದ್ದಾರೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.

ಜಾರ್ಖಂಡ್ ಜನ್​ ಮುಕ್ತಿ ಪರಿಷದ್ ಸದಸ್ಯರು ಕಾಡಿನೊಳಗೆ ಪರಾರಿಯಾಗಿದ್ದು, ಅವರಿಗಾಗಿ ಶೋಧ ಕಾರ್ಯ ನಡೆಸಲಾಗಿದೆ. ಇದರ ಜೊತೆಗೆ ಎಕೆ - 47, ಸ್ಟೆನ್ ಗನ್, ಹಲವು ರೈಫಲ್​ಗಳು ಹಾಗೂ ಇತರ ಶಸ್ತ್ರಾಸ್ತ್ರಗಳನ್ನು ವಶಕ್ಕೆ ಪಡೆಯಲಾಗಿದೆ.

ABOUT THE AUTHOR

...view details