ಕರ್ನಾಟಕ

karnataka

ETV Bharat / bharat

ಮುಸುಕುದಾರಿಯಿಂದ ಬಂಗಾರದಂಗಡಿಗೆ ಖನ್ನ... ಅಬ್ಬಾ! ಕದ್ದೊಯ್ದ ಚಿನ್ನ ಎಷ್ಟು ಗೊತ್ತಾ? - ಮುಜಾಫರ್​ನಗರದಲ್ಲಿ ಬಂಗಾರ ಕಳ್ಳತಯನ

ಮುಜಾಫರ್​ನಗರದಲ್ಲಿ ಮುಸುಗುದಾರಿಗಳು ಬಂಗಾರದಂಗಡಿಯಿಂದ ಬರೋಬ್ಬರಿ 25 ಕೆಜಿ ಮೌಲ್ಯದ ಚಿನ್ನಾಭರಣ ದೋಚಿದ್ದಾರೆ. ಕಳ್ಳತನದ ವೇಳೆ ಬಂಗಾರದ ಅಂಗಡಿ ಮಾಲೀಕನಿಗೆ ಬಂದೂಕು ತೋರಿಸಿ ಹೆದರಿಸಿದ್ದಾರೆ.

armed-men-loot-25-kg-
ಮುಜಾಫರ್​ನಗರದಲ್ಲಿ ಕಳ್ಳತನ

By

Published : Jan 13, 2020, 2:47 PM IST

ಮುಜಾಫರ್​​ನಗರ( ಉತ್ತರಪ್ರದೇಶ): ನಾಲ್ವರು ಶಸ್ತ್ರಸಜ್ಜಿತ ಮುಸುಕುದಾರಿಗಳು, ಮುಜಾಫರ್​ನಗರದ ಆಭರಣ ಮಳಿಗೆಯೊಂದಕ್ಕೆ ದಾಳಿ ಮಾಡಿ, 25 ಕೆಜಿ ಚಿನ್ನಾಭರಣಗಳನ್ನ ದರೋಡೆ ಮಾಡಿ ಪರಾರಿಯಾಗಿದ್ದಾರೆ.

ಮುಜಾಫರ್​ನಗರದಲ್ಲಿ ಕಳ್ಳತನ

ಭಾನುವಾರ ಸಂಜೆ ಈ ಘಟನೆ ನಡೆದಿದೆ. ನಾಲ್ವರು ಮುಸುಕುದಾರಿಗಳು ಎರಡು ಮೋಟರ್​ಸೈಕಲ್​ನಲ್ಲಿ ಬಂದು ಸಿನಿಮೀಯ ರೀತಿಯಲ್ಲಿ, ಆಭರಣ ಮಳಿಗೆಗೆ ನುಗ್ಗಿ 25 ಕೆಜಿ ಚಿನ್ನವನ್ನ ದೋಚಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

ಮುಸುಕುದಾರಿಗಳು ಬಂಗಾರದಂಗಡಿ ಮಾಲೀಕ ಬಾಬ್ಲು ಸೈನಿ ಅವರಿಗೆ ಬಂದೂಕನಿಂದ ಬೆದರಿಸಿ, ಚಿನ್ನವನ್ನ ದೋಚಿದ್ದಾರೆ. ಈ ಸಂಬಂಧ ಪೊಲೀಸರು ದೂರು ಸ್ವೀಕರಿಸಿ ಬರುವಷ್ಟರಲ್ಲಿ ಅವರೆಲ್ಲ ಪರಾರಿಯಾಗಿದ್ದರು. ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಆರೋಪಿಗಳ ಪತ್ತೆಗೆ ಬಲೆ ಬೀಸಿದ್ದಾರೆ.

ABOUT THE AUTHOR

...view details