ಪಣಜಿ :ಗಡಿ ಮತ್ತು ಗಡಿಯೊಳಗೂ ಶೌರ್ಯದಿಂದ ಹೋರಾಡಿದ ವೀರಯೋಧರನ್ನು ಗೌರವಿಸಲು ಪ್ರತಿ ವರ್ಷ ಡಿಸೆಂಬರ್ 7ರಂದು 'ಸಶಸ್ತ್ರ ಪಡೆಗಳ ಧ್ವಜ ದಿನ'ವನ್ನಾಗಿ ಆಚರಿಸಲಾಗುತ್ತದೆ. ಈ ಸಂದರ್ಭದಲ್ಲಿ ಕೇಂದ್ರ ರಕ್ಷಣಾ ಖಾತೆ ರಾಜ್ಯ ಸಚಿವ ಶ್ರೀಪಾದ್ ನಾಯಕ್ರವರು ದೇಶಕ್ಕಾಗಿ ಯೋಧರ ತ್ಯಾಗ ಮತ್ತು ಸೇವೆಯನ್ನ ಸ್ಮರಿಸಿದರು.
ದೇಶದ ಗೌರವವನ್ನು ಕಾಪಾಡಲು ಗಡಿಗಳಲ್ಲಿ ಧೈರ್ಯದಿಂದ ಹೋರಾಡುವ ಸೈನಿಕರನ್ನು ಗೌರವಿಸಲು ಭಾರತವು 1949ರಿಂದ ಡಿಸೆಂಬರ್ 7ಕ್ಕೆ ಸಶಸ್ತ್ರ ಪಡೆಗಳ ಧ್ವಜ ದಿನವನ್ನಾಗಿ ಆಚರಿಸುತ್ತಿದೆ.
ಇನ್ನು ಸಶಸ್ತ್ರ ಪಡೆಗಳಿಗೆ ಶುಭಾಶಯ ತಿಳಿಸಿದ ನಾಯಕ್, ವಿಡಿಯೋವೊಂದನ್ನು ಶೇರ್ ಮಾಡಿದ್ದು "ನಮ್ಮ ಮಹಾನ್ ರಾಷ್ಟ್ರದ ಭವಿಷ್ಯದ ಪ್ರಗತಿಗೆ ರಾಷ್ಟ್ರೀಯ ಭದ್ರತೆ ಅತ್ಯಂತ ಮಹತ್ವದ್ದಾಗಿದೆ" ಎಂದು ಹೇಳಿದ್ದಾರೆ.