ಹೈದರಾಬಾದ್: ಪ್ಲಾಸ್ಟಿಕ್ ಎಂಬುದು ನಮ್ಮ ಜೀವನದ ಒಂದು ಅವಿಭಾಜ್ಯ ಅಂಗವಾಗಿದೆ. ಪ್ಲಾಸ್ಟಿಕ್‌ನಿಂದ ಉಂಟಾಗುವ ವ್ಯಾಪಕ ಹಾನಿಯ ಬಗ್ಗೆ ಪರಿಣಿತರು ಪದೇ ಪದೆ ಎಚ್ಚರಿಕೆ ನೀಡುತ್ತಿದ್ದರೂ, ಇದರ ಬಳಕೆಯೇನೂ ಕಡಿಮೆಯಾಗಿಲ್ಲ. ಬಾಳಿಕೆ, ಲಭ್ಯತೆ, ಕಡಿಮೆ ವೆಚ್ಚ ಮತ್ತು ಸುಲಭ ನಿರ್ವಹಣೆ ಉದ್ದೇಶದಿಂದ ಮಾರುಕಟ್ಟೆಯಲ್ಲಿ ಪ್ಲಾಸ್ಟಿಕ್ ಬಳಕೆ ಹೆಚ್ಚಳವಾಗುತ್ತಿದೆ.
ಪ್ಲಾಸ್ಟಿಕ್ ಬಳಕೆಯ ಮೇಲೆ ನಿಯಂತ್ರಣ ಅಗತ್ಯ
2030ರ ವೇಳೆಗೆ ಭಾರತದ ನಗರ ಜನಸಂಖ್ಯೆಯು ಪ್ರಸ್ತುತ 38 ಕೋಟಿಯಿಂದ 60 ಕೋಟಿಗೆ ಏರಿಕೆಯಾಗುವ ನಿರೀಕ್ಷೆಯಿದೆ. ಇದೇ ಪ್ರಮಾಣದಲ್ಲಿ ನಗರ ಘನ ತ್ಯಾಜ್ಯವೂ ಏರಿಕೆಯಾಗುತ್ತದೆ. ಜನಸಂಖ್ಯೆ ಹೆಚ್ಚಳಕ್ಕೆ ಅನುಗುಣವಾಗಿ ಸರಕು ಮತ್ತು ಸೇವೆಗಳ ಬೇಡಿಕೆ ಮತ್ತು ಪೂರೈಕೆಯೂ ಹೆಚ್ಚಳವಾಗಲಿದೆ. ಮಾನವನಿಂದಾಗಿ ಗಾಳಿ, ನೀರು ಮತ್ತು ಮಣ್ಣು ಮಲಿನವಾಗುತ್ತಿರುವ ಈ ಹೊತ್ತಿನಲ್ಲಿ, ಪ್ಲಾಸ್ಟಿಕ್ ಬಳಕೆಯ ಮೇಲೆ ನಿಯಂತ್ರಣ ಹೊಂದುವುದು ಅತ್ಯಂತ ಅಗತ್ಯ. ಪ್ಲಾಸ್ಟಿಕ್ ತ್ಯಾಜ್ಯ ಹೆಚ್ಚಳವು ಪ್ರಾಣಿ ಮತ್ತು ಸಸ್ಯಗಳಿಗೆ ಅಪಾಯವನ್ನ ಒಡ್ಡುತ್ತಲೇ ಇದೆ. ಸ್ವಚ್ಛ ಭಾರತ 2.0 ಭಾಗವಾಗಿ, ಪ್ಲಾಸ್ಟಿಕ್ ತ್ಯಾಜ್ಯದ ಸಮಸ್ಯೆ ಎದುರಿಸಲು ವಿಶೇಷ ಪ್ರಯತ್ನಗಳನ್ನು ನಡೆಸಿದೆ.
ಪ್ಲಾಸ್ಟಿಕ್ ಬಾಟಲಿ ಕೊಳೆಯಲು ಬೇಕು 450 ಕ್ಕೂ ಹೆಚ್ಚು ವರ್ಷ
ಕೇಂದ್ರೀಯ ಮಾಲಿನ್ಯ ನಿಯಂತ್ರಣ ಮಂಡಳಿಯ 2017 - 18 ರ ವಾರ್ಷಿಕ ವರದಿಯ ಪ್ರಕಾರ, ನಿತ್ಯ ಸುಮಾರು 26,000 ಟನ್ ಪ್ಲಾಸ್ಟಿಕ್ ತ್ಯಾಜ್ಯವನ್ನು ಭಾರತ ಉತ್ಪಾದಿಸುತ್ತದೆ. ಶೇ. 70 ರಷ್ಟು ಪ್ಯಾಕೇಜಿಂಗ್ ತಕ್ಷಣವೇ ಪ್ಲಾಸ್ಟಿಕ್ ತ್ಯಾಜ್ಯ ಪರಿವರ್ತನೆಯಾಗುತ್ತದೆ. ಇವು ಸುತ್ತಲಿನ ಮಣ್ಣನ್ನು ಮಲಿನಗೊಳಿಸುತ್ತವೆ. ಅಂತರ್ಜಾಲಕ್ಕೆ ಸೇರಿಕೊಳ್ಳುತ್ತವೆ ಮತ್ತು ಪರಿಸರ ವ್ಯವಸ್ಥೆಯನ್ನು ನಾಶ ಮಾಡುತ್ತವೆ. ದೇಶಾದ್ಯಂತ ಶೇ. 10 ಕ್ಕಿಂತ ಕಡಿಮೆ ಪ್ಲಾಸ್ಟಿಕ್ ತ್ಯಾಜ್ಯವು ಮರುಸಂಸ್ಕರಣೆಗೊಳ್ಳುತ್ತದೆ. ಒಂದು ಪ್ಲಾಸ್ಟಿಕ್ ಬಾಟಲಿ ಕೊಳೆಯಲು 450 ಕ್ಕೂ ಹೆಚ್ಚು ವರ್ಷಗಳು ಬೇಕಾಗುತ್ತವೆ. ಪ್ರತಿ ವರ್ಷ ಇಡೀ ವಿಶ್ವದಲ್ಲಿ, 80 ಲಕ್ಷ ಟನ್ ಪ್ಲಾಸ್ಟಿಕ್ ತ್ಯಾಜ್ಯವನ್ನು ನೀರಿನ ಮೂಲಕ್ಕೆ ಸುರಿಯಲಾಗುತ್ತಿದೆ.
ಒಂದು ಅಂದಾಜಿನ ಪ್ರಕಾರ, ಸಮುದ್ರ ಮತ್ತು ನದಿಗಳಲ್ಲಿ 15 ಕೋಟಿ ಟನ್ ಪ್ಲಾಸ್ಟಿಕ್ ಸೇರಿಕೊಂಡಿದೆ. 2050 ರ ವೇಳೆಗೆ, ಮೀನಿಗಿಂತ ಹೆಚ್ಚಿನ ಸಂಖ್ಯೆಯ ಪ್ಲಾಸ್ಟಿಕ್ ಸಮುದ್ರದಲ್ಲಿ ಇರಬಹುದು. ನಮ್ಮ ದೇಶದಲ್ಲಿ ಕುಡಿಯುವ ನೀರಿನಲ್ಲಿ ಭಾರಿ ಪ್ರಮಾಣದ ಪ್ಲಾಸ್ಟಿಕ್ ಇರುವುದನ್ನು ಹಲವು ಅಧ್ಯಯನಗಳು ತಿಳಿಸಿವೆ. ಆಘಾತಕಾರಿ ಎಂದರೆ, ನವಜಾತ ಶಿಶುಗಳ ಪ್ಲಾಸ್ಮಾ ಮಾದರಿಯಲ್ಲೂ ಪ್ಲಾಸ್ಟಿಕ್ ಅಂಶ ಕಂಡು ಬಂದಿವೆ. ಕ್ಯಾನ್ಸರ್, ಹಾರ್ಮೋನ್ ಅಸಮತೋಲನ ಮತ್ತು ಹೃದಯದ ಸಮಸ್ಯೆಗಳಂತಹ ಘಟನೆಗಳು ಮೈಕ್ರೋಪ್ಲಾಸ್ಟಿಕ್ ಮಾಲಿನ್ಯದಿಂದಾಗಿ ಹೆಚ್ಚುತ್ತಲೇ ಇವೆ.
1986 ರ ಪರಿಸರ ರಕ್ಷಣೆ ಕಾಯ್ದೆಯ 6, 8 ಮತ್ತು 25ನೇ ಕಲಂ ನೀಡಿದ ಅಧಿಕಾರದ ಪ್ರಕಾರ, ಭಾರತ ಸರ್ಕಾರವು ಪರಿಸರ, ಅರಣ್ಯ ಮತ್ತು ಹವಾಮಾನ ಬದಲಾವಣೆಯ ಬಗ್ಗೆ ಪ್ಲಾಸ್ಟಿಕ್ ತ್ಯಾಜ್ಯ ನಿರ್ವಹಣೆ ನಿಯಮಗಳು 2015 ಅನ್ನು ಪ್ರಕಟಿಸಿದೆ. ಈ ನಿಯಮಗಳು ತ್ಯಾಜ್ಯ ಉತ್ಪಾದಕರು, ಸ್ಥಳೀಯ ಸಂಸ್ಥೆಗಳು, ಗ್ರಾಮೀಣ ಕೌನ್ಸಿಲ್‌ಗಳು, ಉತ್ಪಾದಕರು, ಆಮದುದಾರರು ಮತ್ತು ಬ್ರಾಂಡ್ ಮಾಲೀಕರನ್ನು ಉದ್ದೇಶಿಸಿದೆ. ಪರಿಷ್ಕರಿಸಿದ ನಿಯಮಗಳ ಪ್ರಕಾರ, ಮರುಸಂಸ್ಕರಿಸಿದ ಪ್ಲಾಸ್ಟಿಕ್ ಅನ್ನು ಶೇಖರಣೆಗೆ ತೆಗೆದುಕೊಂಡು ಹೋಗುವುದು ಅಥವಾ ಪ್ಯಾಕೇಜಿಂಗ್‌ಗೆ ಬಳಸುವಂತಿಲ್ಲ. ಮೂಲ ಅಥವಾ ಮರುಸಂಸ್ಕರಿಸಿದ ಪ್ಲಾಸ್ಟಿಕ್‌ನಿಂದ ಮಾಡಿದ ಚೀಲಗಳು 50 ಮೈಕ್ರಾನ್‌ಗಳಿಗಿಂತ ಕಡಿಮೆ ದಪ್ಪ ಇರುವಂತಿಲ್ಲ.
2022 ರ ವೇಳೆಗೆ ಸಂಪೂರ್ಣ ನಿರ್ಮೂಲನೆಗೊಳಿಸುವ ಧ್ಯೇಯ
ಒಮ್ಮೆ ಬಳಸಿ ಬಿಸಾಡುವ ಪ್ಲಾಸ್ಟಿಕ್ ಅನ್ನು 2022 ರ ವೇಳೆಗೆ ಸಂಪೂರ್ಣ ನಿರ್ಮೂಲನೆಗೊಳಿಸುವ ಧ್ಯೇಯವನ್ನು ಕೇಂದ್ರ ಸರ್ಕಾರ ಹೊಂದಿದೆ. ಬಹುತೇಕ ರಾಜ್ಯಗಳು ಈಗಾಗಲೇ ಒಮ್ಮೆ ಬಳಸಿ ಬಿಸಾಡುವ ಪ್ಲಾಸ್ಟಿಕ್‌ಗಳನ್ನು ನಿಷೇಧಿಸಿವೆ. ಪ್ಲಾಸ್ಟಿಕ್ ಬ್ಯಾಗ್‌ಗಳು, ಕಪ್‌ಗಳು, ಪ್ಲೇಟ್‌ಗಳು, ಸಣ್ಣ ಬಾಟಲ್‌ಗಳು ಮತ್ತು ಸ್ಟ್ರಾಗಳನ್ನು ಇನ್ನು ಉತ್ಪಾದನೆ ಮಾಡಲಾಗುತ್ತಿಲ್ಲ ಹಾಗೂ ಬಳಸಲಾಗುತ್ತಿಲ್ಲ. ಖಾದಿ ಮತ್ತು ಗ್ರಾಮೋದ್ಯೋಗ ಆಯೋಗವು ಬಿದಿರಿನ ಮತ್ತು ಮಣ್ಣಿನ ಸಾಮಗ್ರಿಗಳನ್ನು ಸಿದ್ಧಪಡಿಸುತ್ತಿದ್ದು, ಇವು ಪ್ಲಾಸ್ಟಿಕ್ ಬದಲಿಗೆ ಬಳಕೆ ಉದ್ದೇಶ ಹೊಂದಿವೆ. ಇಂತಹ ಪರಿಸರ ಸ್ನೇಹಿ ಉಪಕ್ರಮಗಳ ಮೂಲಕ ಸರ್ಕಾರವು ಗ್ರಾಮೀಣ ಉದ್ಯೋಗಕ್ಕೂ ಪ್ರೋತ್ಸಾಹ ನೀಡುತ್ತಿದೆ.
ಅಸೋಚಾಮ್-ಇವೈ ಜಂಟಿ ಅಧ್ಯಯನದ ಪ್ರಕಾರ, 2019-20 ರ ವೇಳೆಗೆ ಪ್ಲಾಸ್ಟಿಕ್ ಅನ್ನು ಅತಿ ಹೆಚ್ಚು ಬಳಸಿರುವುದು ಭಾರತದ ಪ್ಯಾಕೇಜಿಂಗ್ ಉದ್ಯಮವಾಗಿದೆ. ವಿಶ್ವಸಂಸ್ಥೆಯ ಪರಿಸರ ಕಾರ್ಯಕ್ರಮವು 10 ಮಾರ್ಗಸೂಚಿಗಳನ್ನು ರೂಪಿಸಿದ್ದು, ಇದನ್ನು 60 ದೇಶಗಳು ಅನುಸರಿಸುತ್ತಿವೆ. ನಗರ ಮತ್ತು ಗ್ರಾಮೀಣ ತ್ಯಾಜ್ಯಗಳ ಸಂಗ್ರಹ, ಸಾಗಣೆ ಮತ್ತು ವಿಲೇವಾರಿಗೆ ಪರಿಣಾಮಕಾರಿ ಕಾರ್ಯತಂತ್ರವನ್ನು ಭಾರತ ಸರ್ಕಾರ ರೂಪಿಸಬೇಕಿದೆ. ಎಲ್ಲ ಪಟ್ಟಣಗಳು ಮತ್ತು ನಗರಗಳಲ್ಲಿ ಪ್ಲಾಸ್ಟಿಕ್ ಸಂಗ್ರಹ ಸೆಂಟರ್ಗಳನ್ನು ಸ್ಥಾಪಿಸಬೇಕಿದೆ. ಪ್ಲಾಸ್ಟಿಕ್ ತ್ಯಾಜ್ಯದಿಂದ ಹೊಸ ಉತ್ಪನ್ನಗಳನ್ನು ಅಭಿವೃದ್ಧಿಪಡಿಸುವ ಸಂಶೋಧನೆಗೆ ಪ್ರೋತ್ಸಾಹ ನೀಡಬೇಕಿದೆ ಮತ್ತು ಅದಕ್ಕೆ ಅನುದಾನ ಒದಗಿಸಬೇಕಿದೆ.
ಪ್ಲಾಸ್ಟಿಕ್ ಸಮಸ್ಯೆಯನ್ನು ಕೊನೆಗೊಳಿಸಲು ಬದ್ಧತೆ ಅಗತ್ಯ
ಪರಿಸರದ ರಕ್ಷಣೆಯ ಜೊತೆಗೆ, ಪ್ಲಾಸ್ಟಿಕ್ ಮರುಬಳಕೆ ಮತ್ತು ಸಂಬಂಧಿಸಿದ ಉದ್ಯಮಗಳು ಉದ್ಯೋಗ ಅವಕಾಶಗಳನ್ನು ಒದಗಿಸಬಹುದಾಗಿದೆ. ಭಾರತದಲ್ಲಿ ಪ್ಲಾಸ್ಟಿಕ್ ನಿಯಮಗಳು ಹಲವು ವರ್ಷಗಳಿಂದಲೂ ಜಾರಿಯಲ್ಲಿದ್ದರೂ, ಅದರ ಅನುಷ್ಠಾನ ಇನ್ನೂ ಆಮೆಗತಿಯಲ್ಲಿದೆ. ಪ್ಲಾಸ್ಟಿಕ್ ಸಮಸ್ಯೆಯನ್ನು ಕೊನೆಗೊಳಿಸಲು ರಾಜಕಾರಣಿಗಳು ಮತ್ತು ನಾಯಕರು ಬದ್ಧತೆಯನ್ನು ಪ್ರದರ್ಶಿಸಬೇಕಿದೆ. ಇದರ ಜೊತೆಗೆ, ಸಾರ್ವಜನಿಕರಲ್ಲಿ ಜಾಗೃತಿ ಮತ್ತು ಭಾಗವಹಿಸುವಿಕೆಯೂ ಅತ್ಯಂತ ಪ್ರಮುಖವಾಗಿದೆ.