ಕರ್ನಾಟಕ

karnataka

ETV Bharat / bharat

ಪಿಜ್ಜಾ ಡೆಲಿವರಿ ಬಾಯ್​ಗೆ ಕೊರೊನಾ ಪಾಸಿಟಿವ್: 72 ಮನೆಗಳಿಗೆ ತಲುಪಿತ್ತು ಆಹಾರ!

ದೆಹಲಿ ದಕ್ಷಿಣ ಜಿಲ್ಲೆಯ ಪ್ರದೇಶವೊಂದರ ಪಿಜ್ಜಾ ಡೆಲಿವರಿ ಬಾಯ್​ವೊಬ್ಬನ ವರದಿ ಕೊರೊನಾ ಪಾಸಿಟಿವ್​ ಬಂದಿದ್ದು, ರೆಸ್ಟೋರೆಂಟ್​ನಿಂದ ಆಹಾರ ತರಿಸಿಕೊಂಡಿದ್ದ 72 ಮನೆಗಳ ಜನರನ್ನು ಕ್ವಾರಂಟೈನ್​ನಲ್ಲಿರಿಸಿರುವುದು ಎಚ್ಚರಿಕೆಯ ಗಂಟೆಯಾಗಿದೆ.

Are door-to-door food deliveries a new health hazard
Are door-to-door food deliveries a new health hazard

By

Published : Apr 16, 2020, 8:19 PM IST

ಹೊಸದಿಲ್ಲಿ: ಮನೆಯಲ್ಲೇ ಕುಳಿತು ಆ್ಯಪ್​ ಮೂಲಕ ಆರ್ಡರ್​ ಮಾಡಿದ್ರೆ ಸಾಕು, ಕೆಲವೇ ನಿಮಿಷಗಳಲ್ಲಿ ಮನೆ ಬಾಗಿಲಿಗೇ ಆಹಾರದ ಪೊಟ್ಟಣ ಬರುತ್ತದೆ. ಹಲವಾರು ಕಂಪನಿಗಳು ಹಾಗೂ ಸ್ಥಳೀಯ ಹೋಟೆಲ್​ನವರು ಬೇಕೆಂದಾಗ ಮನೆ ಬಾಗಿಲಿಗೆ ಫುಡ್​ ಡೆಲಿವರಿ ಮಾಡುತ್ತಾರೆ.

ಕೊರೊನಾ ವೈರಸ್​ ವೇಗವಾಗಿ ಹರಡುತ್ತಿರುವ ಸಮಯದಲ್ಲಿ ಮನೆಗೇ ಆಹಾರ ತರಿಸುವುದು ಸುರಕ್ಷಿತ ಎಂಬ ಭಾವನೆ ನಿಮ್ಮಲ್ಲಿ ಮೂಡಿದ್ದರೆ ಆಶ್ಚರ್ಯವಿಲ್ಲ. ಆದರೆ ದೆಹಲಿಯಲ್ಲಿ ಪಿಜ್ಜಾ ಡೆಲಿವರಿ ಮಾಡುವ ವ್ಯಕ್ತಿಯೊಬ್ಬನಿಗೆ ಕೊರೊನಾ ಸೋಂಕು ತಗುಲಿರುವುದು ಎಲ್ಲರ ನಿದ್ದೆಗೆಡಿಸಿದೆ. ಆನ್​ಲೈನ್​​ ಮೂಲಕ ಊಟ, ತಿಂಡಿ ತರಿಸುವುದು ಎಷ್ಟು ಸುರಕ್ಷಿತ ಎಂಬ ಪ್ರಶ್ನೆ ಈಗ ಮೂಡುವಂತಾಗಿದೆ.

ದೆಹಲಿ ದಕ್ಷಿಣ ಜಿಲ್ಲೆಯ ಪ್ರದೇಶವೊಂದರ ಪಿಜ್ಜಾ ಡೆಲಿವರಿ ವ್ಯಕ್ತಿಯ ವರದಿ ಕೊರೊನಾ ಪಾಸಿಟಿವ್​ ಬಂದಿದ್ದು, ರೆಸ್ಟೋರೆಂಟ್​ನಿಂದ ಆಹಾರ ತರಿಸಿಕೊಂಡಿದ್ದ 72 ಮನೆಗಳ ಜನರನ್ನು ಕ್ವಾರಂಟೈನ್​ನಲ್ಲಿರಿಸಿರುವುದು ಎಚ್ಚರಿಕೆಯ ಗಂಟೆಯಾಗಿದೆ. ವ್ಯಕ್ತಿ ಕೆಲಸ ಮಾಡುತ್ತಿದ್ದ ಸ್ಟಾರ್ಟ್​ಅಪ್​​ ಕಂಪನಿ ಬಾಕ್ಸ್ ​8 ತನ್ನ ಉದ್ಯೋಗಿಗೆ ಕೊರೊನಾ ಸೋಂಕು ತಗುಲಿರುವುದನ್ನು ಒಪ್ಪಿಕೊಂಡಿದೆ. "ಎಲ್ಲಾ ರೀತಿಯ ಸುರಕ್ಷತಾ ಕ್ರಮಗಳನ್ನು ನಾವು ಅಳವಡಿಸಿಕೊಂಡಿದ್ದರೂ ದಕ್ಷಿಣ ದೆಹಲಿಯ ಮಾಳವೀಯ ನಗರದ ನಮ್ಮ ಕಿಚನ್​ನಲ್ಲಿ ಕೆಲಸ ಮಾಡುತ್ತಿದ್ದ ಡೆಲಿವರಿ ಪಾರ್ಟನರ್​ ಕೊರೊನಾ ಪಾಸಿಟಿವ್ ಆಗಿರುವುದು ದುಃಖದ ಸಂಗತಿಯಾಗಿದೆ." ಎಂದು ಕಂಪನಿ ಹೇಳಿಕೊಂಡಿದೆ.

ಬಾಕ್ಸ್​ 8 ಹೋಟೆಲ್​ನ ಆನ್​ಲೈನ್​​ ಆರ್ಡರ್​ ತೆಗೆದುಕೊಂಡು ಡೆಲಿವರಿ ಮಾಡುವ ಜೊಮ್ಯಾಟೊ, ತನ್ನ ಪಾರ್ಟನರ್​ ರೆಸ್ಟೋರೆಂಟ್ ಒಂದರ ಡೆಲಿವರಿ ಬಾಯ್​ಗೆ ಕೊರೊನಾ ಸೋಂಕು ತಗುಲಿದ್ದನ್ನು ಖಚಿತಪಡಿಸಿದೆ. ಆದರೆ ರೆಸ್ಟೋರೆಂಟ್ ಹೆಸರನ್ನು ಮಾತ್ರ ಜೊಮ್ಯಾಟೊ ಪ್ರಸ್ತಾಪಿಸಿಲ್ಲ. ಈಗಾಗಲೇ ಎಲ್ಲಾ ಗ್ರಾಹಕರನ್ನು ಸಂಪರ್ಕಿಸಲಾಗಿದ್ದು, ತಕ್ಷಣದಿಂದ ಜಾರಿಗೆ ಬರುವಂತೆ ರೆಸ್ಟೋರೆಂಟ್​ ಮುಚ್ಚಲಾಗಿದೆ ಎಂದು ಜೊಮ್ಯಾಟೊ ಹೇಳಿದೆ.

ಡೆಲಿವರಿ ಬಾಯ್​ ಜೊತೆ ಕೆಲಸ ಮಾಡುತ್ತಿದ್ದ ಎಲ್ಲಾ 16 ಸಹೋದ್ಯೋಗಿಗಳನ್ನು ಕ್ವಾರಂಟೈನ್​ ಮಾಡಲಾಗಿದ್ದು, ಇಲ್ಲಿಂದ ಯಾವ್ಯಾವ ಮನೆಗಳಿಗೆ ಆಹಾರ ಪೂರೈಸಲಾಗಿದೆ ಎಂಬುದನ್ನು ಪತ್ತೆ ಮಾಡಲಾಗುತ್ತಿದೆ. ಈ ರೆಸ್ಟೋರೆಂಟ್​ನಿಂದ 72 ಮನೆಗಳಿಗೆ ಆಹಾರ ಪೂರೈಸಿರುವ ಕುರಿತು ತಿಳಿದು ಬಂದಿದ್ದು, ಆ ಎಲ್ಲಾ ಮನೆಗಳ ಸದಸ್ಯರಿಗೆ ಸ್ವಯಂ ನಿಬಂಧನೆ ವಿಧಿಸಿಕೊಳ್ಳಲು ಸೂಚಿಸಲಾಗಿದೆ ಎಂದು ಜಿಲ್ಲಾ ಮ್ಯಾಜಿಸ್ಟ್ರೇಟ್ ಬಿ.ಎಂ.ಮಿಶ್ರಾ ಮಾಧ್ಯಮಗಳಿಗೆ ತಿಳಿಸಿದರು.

ABOUT THE AUTHOR

...view details