ನವದೆಹಲಿ: ದೆಹಲಿ ವಿಧಾನಸಭಾ ಚುನಾವಣೆಯಲ್ಲಿ ನವದೆಹಲಿ ಕ್ಷೇತ್ರದಿಂದ ಕಣಕ್ಕಿಳಿದಿದ್ದ ಅರವಿಂದ್ ಕೇಜ್ರಿವಾಲ್, ಎದುರಾಳಿ ಬಿಜೆಪಿ ಅಭ್ಯರ್ಥಿಯನ್ನು 21,697 ಮತಗಳ ಅಂತರದಿಂದ ಸೋಲಿಸಿದ್ದಾರೆ.
ಬಿಜೆಪಿಯಿಂದ ಸ್ಪರ್ಧಿಸಿದ್ದ ಸುನೀಲ್ ಕುಮಾರ್ ಯಾದವ್ ಅವರು 25,061 ಮತಗಳನ್ನು ಪಡೆದುಕೊಂಡಿದ್ದಾರೆ. ಇವಿಎಂ ಮತಗಳು (46526) ಮತ್ತು ಅಂಚೆ ಮತಗಳು (232) ಸೇರಿ 46,758 ಮತಗಳನ್ನು ಕೇಜ್ರಿವಾಲ್ ಗಳಿಸಿದ್ದಾರೆ. ಈ ಮೂಲಕ ಸುನೀಲ್ ಕುಮಾರ್ ವಿರುದ್ಧ 21,697 ಮತಗಳಿಂದ ಭರ್ಜರಿ ಜಯ ಸಾಧಿಸಿದರು.