ಕರ್ನಾಟಕ

karnataka

ETV Bharat / bharat

ಶ್ರೀಸಾಮಾನ್ಯನಿಗೆ(ಆಮ್ ಆದ್ಮಿ) ಒಲಿದ ವಿಜಯ!

ದೆಹಲಿ ಚುನಾವಣೆ ಕೊನೇ ಕ್ಷಣದಲ್ಲಿ 3,000 ಮತಗಳಿಗಿಂತ ಕಡಿಮೆ ಅಂತರದಲ್ಲಿ ಕೇಜ್ರಿವಾಲ್ ಗೆಲುವು ಸಾಧಿಸಿದ್ದಾರೆ. ಇದು ಕೇಜ್ರೀವಾಲ್ ಸರ್ಕಾರಕ್ಕೆ ಎಚ್ಚರಿಕೆ ಗಂಟೆಯಾಗಿದ್ದು, ಜನತೆ ತಮ್ಮ ಜನಾದೇಶದ ರೂಪದಲ್ಲಿ ನೀಡಿರುವ ಉಡುಗೊರೆಯು ಕೇಜ್ರಿವಾಲ್ ಸರ್ಕಾರದ ಹೊಣೆಗಾರಿಕೆಯನ್ನು ಹೆಚ್ಚಿಸಿದೆ. ದೇಶದ ರಾಜಧಾನಿಯ ಜನರ ಜೀವನ ಮಟ್ಟವನ್ನು ಹೆಚ್ಚಿಸುವ ಮಹತ್ತರ ಹೊಣೆಯನ್ನು ಅವರ ಹೆಗಲ ಮೇಲೆ ಈ ಗೆಲುವು ಹೊರಿಸಿದೆ.

Aravind Kejriwal has more responsibility about development
ಶ್ರೀಸಾಮಾನ್ಯನಿಗೆ(ಆಮ್ ಆದ್ಮಿ) ಒಲಿದ ವಿಜಯ!

By

Published : Feb 14, 2020, 11:13 AM IST

‘ದೆಹಲಿಯ ಚುನಾವಣಾ ಫಲಿತಾಂಶಗಳು ಅಚ್ಚರಿ ಮೂಡಿಸಲಿದೆ’ ಎಂದು ಬಿಜೆಪಿ ಹೇಳಿತ್ತು. ಅದು ನಿಜವೂ ಆಯಿತು. ಕೇಜ್ರೀವಾಲ್ ನಾಯಕತ್ವದಲ್ಲಿ ಆಮ್ ಆದ್ಮಿ ಪಕ್ಷವು ವೋಟ್​​ ತಡೆಯಿಲ್ಲದೇ ಸಾಗಿದೆ. ಆಪ್ ವಿಷಯದಲ್ಲಿ ಮತಗಟ್ಟೆ ಫಲಿತಾಂಶಗಳು ನಿಜವಾಗಿರುವುದು ಒಂದು ಕಡೆಯಾದರೆ ಬಿಜೆಪಿ 8 ಸೀಟುಗಳನ್ನು ಪಡೆದು ಒಂದಂಕಿ ದಾಟಲಾಗದೇ ಮುಗ್ಗರಿಸಿದ್ದು ಮತ್ತೊಂದು ಕಡೆ. ಶೀಲಾ ದೀಕ್ಷಿತ್ ಅವರ ಮುಂದಾಳತ್ವದಲ್ಲಿ 1996ರಿಂದ 2013ರ ನಡುವೆ ಮೂರು ಸಲ ಗೆಲುವು ಸಾಧಿಸಿದ್ದ ಕಾಂಗ್ರೆಸ್ ಈ ಬಾರಿಯೂ ಶೂನ್ಯ ಸಂಪಾದಿಸಿದೆ.

70 ಸೀಟುಗಳ ಅಸೆಂಬ್ಲಿಯಲ್ಲಿ 62 ಸೀಟುಗಳನ್ನು ಆಪ್ ತನ್ನ ಉಡಿಗೆ ಹಾಕಿಕೊಂಡಿದ್ದು, ಶೇಕಡಾ 54.5ರಷ್ಟು ಮತಹಂಚಿಕೆ ಗಳಿಸಿಕೊಳ್ಳುವ ಮೂಲಕ ಇತಿಹಾಸ ಸೃಷ್ಟಿಸಿದೆ. 2015ರ ಚುನಾವಣೆಗೆ ಹೋಲಿಸಿದರೆ ಈ ಸಲ ನಡೆದ ಚುನಾವಣೆಯಲ್ಲಿ ಶೇ5 ರಷ್ಟು ಕಡಿಮೆ ಮತದಾನವಾಗಿತ್ತಲ್ಲದೇ ಆಪ್ ಪಕ್ಷವು ಹಿಂದಿನ ಚುನಾವಣೆಗೆ ಹೋಲಿಸಿದರೆ ಶೇ 1ರಷ್ಟು ಕೊರತೆ ಮತಗಳನ್ನು ಪಡೆದಿರುವುದು ಅಚ್ಚರಿ. ಹಾಗಿದ್ದರೂ ಅದು 62 ಸೀಟುಗಳನ್ನು ಪಡೆದುಕೊಂಡಿತು. ಆಶ್ಚರ್ಯಕರ ಎಂಬಂತೆ ಬಿಜೆಪಿಯು ಈ ಬಾರಿ ಕಳೆದ ಬಾರಿಗಿಂತ ಶೇ 6.5 ರಷ್ಟು ಹೆಚ್ಚುವರಿ ಮತ ಪಡೆದು ಒಟ್ಟು ಶೇ 38.8ರಷ್ಟು ಮತಗಳನ್ನ ಬುಟ್ಟಿಗೆ ಹಾಕಿಕೊಂಡಿದೆ. ಆದರೆ ಗೆದ್ದದ್ದು ಮಾತ್ರ ಐದು ಹೆಚ್ಚುವರಿ ಸೀಟುಗಳನ್ನು ಮಾತ್ರ. ಕಾಂಗ್ರೆಸ್ ಪಕ್ಷವು 2008ರಲ್ಲಿ ಶೇ40.3ರಷ್ಟು ಮತಗಳನ್ನು, 2013ರಲ್ಲಿ ಶೇ 24.5, 2015ರಲ್ಲಿ ಶೇ 9.6ರಷ್ಟು ಮತಗಳನ್ನು ಪಡೆದು ಈ ಸಲ 63 ಕ್ಷೇತ್ರಗಳಲ್ಲಿ ಠೇವಣಿಯನ್ನೂ ಕಳೆದುಕೊಂಡು ದೆಹಲಿ ರಾಜಕಾರಣದಲ್ಲಿ ತನ್ನ ಅಸ್ತಿತ್ವವನ್ನೇ ಕಳೆದುಕೊಂಡಿದೆ. ಆಪ್ 2015ರಲ್ಲಿ ಪಡೆದುಕೊಂಡಿದ್ದ 67 ಸೀಟುಗಳಲ್ಲಿ 60 ಕ್ಷೇತ್ರಗಳಲ್ಲಿ ಈ ಸಲ ಗೆಲುವಿನ ಅಂತರ 10,000 ಮತಗಳಿಗಿಂತಲೂ ಹೆಚ್ಚಾಗಿದೆಯಲ್ಲದೇ 45 ಕ್ಷೇತ್ರಗಳಲ್ಲಿ ಅದು 20,000ಕ್ಕಿಂತಲೂ ಹೆಚ್ಚು. ಆದರೆ ಆಗ ಬಿಜೆಪಿ ಗೆದ್ದಿದ್ದ ಮೂರು ಕ್ಷೇತ್ರಗಳಲ್ಲಿ ಈ ಬಾರಿ ಕೇವಲ 6,000 ಮತಗಳ ಅಂತರದಲ್ಲಿ ಗೆಲುವು ಸಾಧಿಸಿದೆ. ಹಾಗೆಯೇ ಉಪ ಮುಖ್ಯಮಂತ್ರಿ ಸಿಸೋಡಿಯಾ ಅವರ ಗೆಲುವು ಕಡೆಯವರೆಗೂ ಡೋಲಾಯಮಾನವಾಗಿದ್ದು ಕೊನೇ ಕ್ಷಣದಲ್ಲಿ 3,000 ಮತಗಳಿಗಿಂತ ಕಡಿಮೆ ಅಂತರದಲ್ಲಿ ಗೆಲುವು ಸಾಧಿಸಿದ್ದಾರೆ. ಇದು ಕೇಜ್ರೀವಾಲ್ ಸರ್ಕಾರಕ್ಕೆ ಎಚ್ಚರಿಗೆ ಗಂಟೆಯಾಗಿದೆ. ಜನತೆ ತಮ್ಮ ಜನಾದೇಶದ ರೂಪದಲ್ಲಿ ನೀಡಿರುವ ಉಡುಗೊರೆಯು ಕೇಜ್ರಿವಾಲ್ ಸರ್ಕಾರದ ಹೊಣೆಗಾರಿಕೆಯನ್ನು ಹೆಚ್ಚಿಸಿದೆ. ದೇಶದ ರಾಜಧಾನಿಯ ಜನರ ಜೀವನ ಮಟ್ಟವನ್ನು ಹೆಚ್ಚಿಸುವ ಮಹತ್ತರ ಹೊಣೆಯನ್ನು ಅವರ ಹೆಗಲ ಮೇಲೆ ಈ ಗೆಲುವು ಹೊರಿಸಿದೆ.

1996ರಲ್ಲಿ ಬಿಜೆಪಿಯ ಅಂದಿನ ಮಹಾದಂಡನಾಯಕರಾಗಿದ್ದ ವಾಜಪೇಯಿ ಅವರು ಮುಂಬೈ ಮಹಾಧಿವೇಶನದಲ್ಲಿ ಮಾತನಾಡುತ್ತಾ, “ನಾವು ಆಶ್ವಮೇಧ ಯಾಗವನ್ನಾರಂಭಿಸಿದ್ದೇವೆ, ಅದು ದೆಹಲಿಯತ್ತ ಸಾಗುತ್ತಿದೆ” ಎಂದಿದ್ದರು. ಆಗ ಬಿಜೆಪಿಯು ಶೇ 42.8ರಷ್ಟು ಮತಗಳನ್ನು ಪಡೆದು 49 ಸೀಟುಗಳನ್ನೂ ಪಡೆದುಕೊಂಡಿತ್ತು. ಅವರು ಆಗ ಸಾರ್ವತ್ರಿಕ ಚುನಾವಣೆಗಳಲ್ಲಿ ಗೆದ್ದು ಭಾರತ ಸರ್ಕಾರದ ಚುಕ್ಕಾಣಿ ಹಿಡಿಯುವ ಭರವಸೆ ಹೊಂದಿದ್ದರು. ನಂತರ ಕೇಂದ್ರದಲ್ಲಿ ಅಧಿಕಾರಕ್ಕೆ ಬಂದು ದೆಹಲಿ ವಿಧಾನಸಭೆಯಲ್ಲಿಯೂ ಬಿಜೆಪಿ ಅಧಿಕಾರಕ್ಕೆ ಬಂದಿದ್ದರೂ ಈ ಸ್ಥಿತಿ ಹೆಚ್ಚು ಕಾಲ ಉಳಿಯದೇ 1998ರಲ್ಲಿ ಕಾಂಗ್ರೆಸ್ ಮತ್ತೆ ಅಧಿಕಾರ ಹಿಡಿಯಿತು. 2014 ಮತ್ತು 2019ರಲ್ಲಿ ಸಾರ್ವತ್ರಿಕ ಚುನಾವಣೆಗಳಲ್ಲಿ ಮತ್ತೆ ಬಿಜೆಪಿ ಅಧಿಕಾರಿಕ್ಕೆ ಬಂದರೂ ದೆಹಲಿಯಲ್ಲಿ ಅಧಿಕಾರ ಪಡೆಯುವುದು ಅದಕ್ಕೆ ಹುಳಿದ್ರಾಕ್ಷಿಯಾಗಿಯೇ ಪರಿಣಮಿಸಿದೆ. 2014ರ ಚುನಾವಣೆಗಳಲ್ಲಿ ಮೋದಿ ಅಲೆಯು ಎಲ್ಲಾ 7 ಲೋಕಸಭಾ ಸೀಟುಗಳನ್ನು ಮತ್ತು 60 ಪ್ಲಸ್ ಅಸೆಂಬ್ಲಿ ಸೀಟುಗಳನ್ನು ಸಹ ಗುಡಿಸಿ ಹಾಕಿತು. 2015ರಲ್ಲಿ ಆಮ್ ಆದ್ಮಿ ಬಿಜೆಪಿಯ ಅಲೆಯನ್ನು ತಣ್ಣಗಾಗಿಸಿತು. ಎಲ್ಲ 7 ಲೋಕಸಭಾ ಸೀಟುಗಳನ್ನು ಬಿಜೆಪಿ ವಶಕ್ಕೆ ಪಡೆದುಕೊಂಡಿತು. 2017ರಲ್ಲಿ ದೆಹಲಿಯ ಮೂರು ಗ್ರೇಟರ್ ಮೆಟ್ರೋಗಳಿಗೆ ನಡೆದ ಚುನಾವಣೆಯಲ್ಲಿ ಆಪ್ ಕೇವಲ ಶೇ 26ರಷ್ಟು ಮತ ಗಳಿಸುವಂತೆ ಬಿಜೆಪಿ ಕಟ್ಟಿಹಾಕಿತು. ಆದರೆ ಕಳೆದ ಸಲದ ಸಾರ್ವತ್ರಿಕ ಚುನಾವಣೆಯಲ್ಲಿ ಬಿಜೆಪಿಯು ಎಲ್ಲಾ ಏಳು ಲೋಕಸಭಾ ಕ್ಷೇತ್ರಗಳಲ್ಲಿ ವಿಜಯ ಪತಾಕೆ ಹಾರಿಸಿತು. ಆಗ ಆಪ್ ಪಡೆದಿದ್ದು ಬರೀ ಶೇ18ರಷ್ಟು ಮತಗಳು. ಪರಿಣಾಮವಾಗಿ ಈ ಸಲದ ಅಸೆಂಬ್ಲಿ ಚುನಾವಣೆಯಲ್ಲಿ ಸಹ ಮೋದಿ ಮ್ಯಾಜಿಕ್‍ನಿಂದಾಗಿ ಎಲ್ಲಾ ಸೀಟುಗಳನ್ನು ತಾನು ಗೆಲ್ಲುತ್ತೇನೆ ಎಂಬ ಭ್ರಮೆಯಲ್ಲಿ ಬಿಜೆಪಿ ಮುಳುಗಿತ್ತು. ಆದರೆ ಈಗ ಬಿಜೆಪಿಯ ಪೌರತ್ವ ತಿದ್ದುಪಡಿ ಕಾಯ್ದೆ, ಹಿಂದುತ್ವ ಅಜೆಂಡಾ ಮುಂದೆ ಮಾಡಿಕೊಂಡು, 200ಕ್ಕೂ ಹೆಚ್ಚು ಸಂಸದರನ್ನು, 50 ಕೇಂದ್ರ ಸಚಿವರನ್ನು ರಾಜಧಾನಿಯಲ್ಲಿ ಜಮಾಯಿಸುವಂತೆ ಮಾಡಿದ್ದರ ಹೊರತಾಗಿಯೂ ದೆಹಲಿಯ ಮತದಾರರು ಯಾಕೆ ಆಪ್ ಕಡೆಗೆ ವಾಲಿದರು ಎಂಬ ಬಗ್ಗೆ ಬಿಜೆಪಿ ಗಂಭೀರ ಆತ್ಮಾವಲೋಕನ ಮಾಡಿಕೊಳ್ಳಬೇಕಿದೆ.

ಜನಸಂಖ್ಯಾವಾರು ನೋಡಿದಾಗ ದೆಹಲಿಯು 140 ದೇಶಗಳನ್ನು ಮೀರಿಸಿದೆ. ಆದರೆ ಜನತೆಗೆ ಮೂಲಸೌಕರ್ಯಗಳನ್ನು ಒದಗಿಸುವುದೇ ದುಸ್ತರವಾಗಿತ್ತು. ಕಸ ಹೊಡೆಯುವ ಪೊರಕೆಯನ್ನು ಚಿನ್ಹೆಯಾಗಿ ಹೊಂದಿರುವ ಆಮ್ ಆದ್ಮಿ ಪಕ್ಷವು ಸರ್ಕಾರಿ ಕಚೇರಿಗಳಲ್ಲಿ ಭ್ರಷ್ಟಾಚಾರವನ್ನು ಕಸ ಹೊಡೆದಂತೆ ಸ್ವಚ್ಛಗೊಳಿಸಿದ ಕಾರಣದಿಂದಲಾಗಿ ಅಂತಹ ಮೂಲಸೌಕರ್ಯಗಳನ್ನು ಒದದಿಸಲು ಹಾಗೂ ವಿಶೇಷವಾಗಿ ಬಡವರ ಮತ್ತು ಮಹಿಳೆಯರ ಬೆಂಬಲ ಗಳಿಸಲು ಸಾಧ್ಯವಾಯಿತು. 2013ರಲ್ಲಿ ಅಧಿಕಾರಕ್ಕೆ ಬಂದ ಕೇಜ್ರೀವಾಲರ ಪಕ್ಷವು ಉಚಿತ ವಿದ್ಯುತ್ ಮತ್ತು ಕುಡಿಯುವ ನೀರಿನ ಯೋಜನೆಗಳ ಮೇಲೆ ಗಮನ ಕೇಂದ್ರೀಕರಿಸಿತಲ್ಲದೇ ಮೊಹಲ್ಲಾ ಕ್ಲಿನಿಕ್ ಗಳ ಮೂಲಕ ಜನರಿಗೆ ಹತ್ತಿರವಾಯಿತು. ಶಾಲೆಗಳಲ್ಲಿ ಶಿಕ್ಷಣದ ಗುಣಮಟ್ಟವನ್ನು ಹೆಚ್ಚಿಸುವ ಕಡೆಗೆ ಅದು ಆದ್ಯತೆ ನೀಡಿತಲ್ಲದೇ ಹುಡುಗಿಯರು ಮತ್ತು ಮಹಿಳೆಯರಿಗೆ ಉಚಿತ ಪ್ರಯಾಣ ಸೌಲಭ್ಯ ನೀಡಿತು. ಇದು ಜನರ ಮೆಚ್ಚುಗೆಗೆ ಕಾರಣವಾಯಿತು. ವ್ಯಾಪಕ ಮಟ್ಟದಲ್ಲಿ ಸಿಸಿಟಿವಿ ಕ್ಯಾಮೆರಾಗಳನ್ನು ಹಾಕುವ ಮೂಲಕ ಅದು ಮಹಿಳೆಯರ ಸುರಕ್ಷತೆಗೆ ಅತಿ ಹೆಚ್ಚು ಪ್ರಾಮುಖ್ಯತೆ ನೀಡಿತು. ತನ್ನ ಕೆಲಸದ ಮೂಲಕವೇ ಮತಗಳಿಸುವುದಾಗಿ ಘೋಷಿಸಿದ್ದ ಆಪ್ ಎಲ್ಲೂ ಅನಗತ್ಯವಾಗಿ ವಿವಾದಗಳಿಗೆ ಮತ್ತು ವ್ಯರ್ಥರಾಜಕಾರಣಕ್ಕೆ ತಲೆಕೊಡದೇ ಹುಷಾರಾಗಿ ವರ್ತಿಸಿತು. 14% ಇರುವ ಮುಸ್ಲಿಂ ಮತದಾರರೆಲ್ಲರೂ ಕೇಜ್ರೀವಾಲ್ ಅವರನ್ನು ಬೆಂಬಲಿಸಿದರು.

ಆಪ್‍ ತಾನು ರಾಷ್ಟ್ರಮಟ್ಟದಲ್ಲಿ ವಿಸ್ತರಣೆಗೊಳ್ಳಲು ಅವಕಾಶವಿಲ್ಲ ಎಂಬುದನ್ನು ಅರ್ಥ ಮಾಡಿಕೊಂಡ ನಂತರದಲ್ಲಿ 2017ರ ನಗರಪಾಲಿಕೆ ಚುನಾವಣೆಗಳ ಕಾರಣದಿಂದಾಗಿ ಅದು ಆಚರಣಾತ್ಮಕವಾಗಿ ಮತ್ತು ವಾಸ್ತವಿಕವಾಗಿ ಕೆಲಸ ಮಾಡತೊಡಗಿತು. ಕೇಜ್ರಿವಾಲ್ ದೆಹಲಿಯ ಮೇಲೆ ಮಾತ್ರವೇ ಗಮನ ನೀಡತೊಡಗಿದರು. ಕೇಂದ್ರ ಮತ್ತು ದೆಹಲಿ ಸರ್ಕಾರಗಳ ಆಧಿಕಾರಗಳೇನು ಎಂದು ಸುಪ್ರೀಂ ಕೋರ್ಟು ಗೆರೆಕೊರೆದಂತೆ ಸ್ಪಷ್ಟಪಡಿಸಿದ ನಂತರದಲ್ಲಿ ವಾರ್ಷಿಕ 60,000 ಕೋಟಿ ರೂಪಾಯಿಗಳ ಬಜೆಟ್ ವೆಚ್ಚದಲ್ಲೇ ರಾಜಧಾನಿಯ ಪರಿಸ್ಥಿತಿಯನ್ನು ಸುಧಾರಿಸಲು ಪ್ರಯತ್ನಿಸುವುದು ಅನಿವಾರ್ಯವಾಯಿತು. ಜೀವನ ಮಟ್ಟದಲ್ಲಿ ಜಾಗತಿಕವಾಗಿ 140 ದೇಶಗಳ ಪೈಕಿ 118ನೇ ಸ್ಥಾನದಲ್ಲಿರುವ ದೆಹಲಿಯ ಸ್ಥಾನವನ್ನು ಕೇಜ್ರೀವಾಲ್ ಆಡಳಿತ ಹೇಗೆ ಸುಧಾರಿಸುತ್ತದೆ ಎಂಬುದನ್ನು ಕಾಯ್ದು ನೋಡಬೇಕಿದೆ, ಇದೇ ಅವರಿಗೆ ಅಗ್ನಿಪರೀಕ್ಷೆಯಾಗಲಿದೆ.

ABOUT THE AUTHOR

...view details