ಕರ್ನಾಟಕ

karnataka

ETV Bharat / bharat

ಕ್ಷಮೆಯಾಚನೆ ಮಾಡುವ ಪ್ರಶ್ನೆಯೇ ಇಲ್ಲ: ಪ್ರಶಾಂತ್​ ಭೂಷಣ್​ ಮತ್ತೊಮ್ಮೆ ಸ್ಪಷ್ಟನೆ! - ಸುಪ್ರೀಂಕೋರ್ಟ್​

ಸುಪ್ರೀಂಕೋರ್ಟ್ ಕಾರ್ಯವೈಖರಿ ಬಗ್ಗೆ ಟ್ವೀಟ್ ಮಾಡಿ ಇದೀಗ ಸಂಕಷ್ಟಕ್ಕೊಳಗಾಗಿರುವ ವಕೀಲ ಪ್ರಶಾಂತ್​ ಭೂಷಣ್​ ತಮ್ಮ ಹೇಳಿಕೆಗೆ ಸಂಬಂಧಿಸಿದಂತೆ ಕ್ಷಮೆಯಾಚನೆ ಮಾಡಲ್ಲ ಎಂದು ಪಟ್ಟು ಹಿಡಿದಿದ್ದಾರೆ.

Prashant Bhushan
Prashant Bhushan

By

Published : Aug 24, 2020, 4:06 PM IST

ನವದೆಹಲಿ: ಸುಪ್ರೀಂಕೋರ್ಟ್ ನ್ಯಾಯಮೂರ್ತಿಗಳ ವಿರುದ್ಧ ಟ್ವೀಟ್​ ಮಾಡಿ ನ್ಯಾಯಾಂಗ ನಿಂದನೆಗೊಳಗಾಗಿರುವ ವಕೀಲ ಪ್ರಶಾಂತ್​ ಭೂಷಣ್​​, ತಾವು ಕ್ಷಮೆಯಾಚನೆ ಮಾಡುವುದಿಲ್ಲ ಎಂದು ಮತ್ತೊಮ್ಮೆ ಸ್ಪಷ್ಟನೆ ನೀಡಿದ್ದಾರೆ.

ವಕೀಲರು ಹಾಗೂ ಸಾಮಾಜಿಕ ಕಾರ್ಯಕರ್ತರಾಗಿರುವ ಪ್ರಶಾಂತ್​ ಭೂಷಣ್​, ತಮ್ಮ ನಿಲುವಿಗೆ ಅಂಟಿಕೊಂಡಿದ್ದಾರೆ. ಸುಪ್ರೀಂಕೋರ್ಟ್​ನಲ್ಲಿ ಇದೇ ವಿಚಾರವಾಗಿ ಮಾತನಾಡಿರುವ ಅವರು, ನಾನು ನಿಜವೆಂದು ನಂಬಿರುವ ಹೇಳಿಕೆ ಹಿಂತೆಗೆದುಕೊಳ್ಳಲು ಕ್ಷಮೆಯಾಚನೆ ಮಾಡಿದರೆ, ನನ್ನ ಆತ್ಮಸಾಕ್ಷಿ ಒಪ್ಪಿಕೊಳ್ಳುವುದಿಲ್ಲ. ಜತೆಗೆ ಅದಕ್ಕೆ ಅಪ್ರಾಮಾಣಿಕನಾಗುತ್ತೇನೆ ಎಂದಿದ್ದಾರೆ

ನ್ಯಾಯಾಂಗದ ವಿಚಾರವಾಗಿ ನೀಡಿದ್ದ ಹೇಳಿಕೆಗೆ ನಾನು ಕ್ಷಮೆಯಾಚನೆ ಮಾಡಿದ್ರೆ ಅದು ಆತ್ಮಸಾಕ್ಷಿಗೆ ದ್ರೋಹ ಮಾಡಿದಂತೆ. ನನಗೆ ತಿಳಿದ ಅಭಿಪ್ರಾಯ ಮಂಡಿಸಿದ್ದೇನೆ. ಇದರಲ್ಲಿ ಸುಪ್ರೀಂಕೋರ್ಟ್​ನ ಯಾವುದೇ ನ್ಯಾಯಮೂರ್ತಿಗಳಿಗೆ ಕೆಟ್ಟು ಹೆಸರು ತರುವ ಉದ್ದೇಶ ನನ್ನದಲ್ಲ. ಪ್ರಜಾಪ್ರಭುತ್ವ ಉಳಿಸುವ ಕಾರ್ಯದಲ್ಲಿ ಕೆಲವೊಮ್ಮೆ ಬಹಿರಂಗ ಹೇಳಿಕೆಗಳು ಪ್ರಮುಖ ಪಾತ್ರ ನಿರ್ವಹಿಸುತ್ತವೆ ಎಂದು ಅವರು ತಮ್ಮ ನಿಲುವನ್ನ ಸಮರ್ಥಿಸಿಕೊಂಡಿದ್ದಾರೆ.

ABOUT THE AUTHOR

...view details