ಕರ್ನಾಟಕ

karnataka

ಮೊದಲ ಬಾರಿಗೆ ಶ್ವಾಸಕೋಶ ಮತ್ತು ಹೃದಯ ಕಸಿ: ವೈದ್ಯಕೀಯ ಕ್ಷೇತ್ರದಲ್ಲಿ ಅಪೊಲೊ ಸಾಧನೆ

By

Published : Oct 8, 2020, 5:01 PM IST

ಕೊರೊನಾ ಸಂದರ್ಭದಲ್ಲಿ ವ್ಯಕ್ತಿಯೋರ್ವನಿಗೆ ಶ್ವಾಸಕೋಶ ಮತ್ತು ಹೃದಯ ಅಂಗಾಂಗ ಕಸಿ ಮಾಡಿ ವೈದ್ಯಕೀಯ ಕ್ಷೇತ್ರದಲ್ಲಿ ಅಪೊಲೊ ಹಾಸ್ಪಿಟಲ್ಸ್​ ಗ್ರೂಪ್​ ಸಾಧನೆ ಮಾಡಿದೆ.

ವೈದ್ಯಕೀಯ ಕ್ಷೇತ್ರದಲ್ಲಿ ಅಪೊಲೊ ಸಾಧನೆ
ವೈದ್ಯಕೀಯ ಕ್ಷೇತ್ರದಲ್ಲಿ ಅಪೊಲೊ ಸಾಧನೆ

ಚೆನ್ನೈ:ಕೊರೊನಾ ಸಾಂಕ್ರಾಮಿಕ ಸಮಯದಲ್ಲೂ ಅಪೊಲೊ ಆಸ್ಪತ್ರೆಯಲ್ಲಿ ಮೊದಲ ಬಾರಿಗೆ ಶ್ವಾಸಕೋಶ ಮತ್ತು ಹೃದಯ ಅಂಗಾಂಗ ಕಸಿ ಮಾಡಲಾಗಿದೆ. ಈ ಮೂಲಕ ವೈದ್ಯಕೀಯ ಕ್ಷೇತ್ರದಲ್ಲಿ ಹೊಸ ಮೈಲಿಗಲ್ಲು ಸಾಧಿಸಿದೆ.

39 ವರ್ಷದ ರೋಗಿಗೆ ಶ್ವಾಸಕೋಶದ ಸಮಸ್ಯೆಯಿತ್ತು. ಆದರೆ ಕೊರೊನಾ ಪ್ರಚೋದಿತ ಲಾಕ್​ಡೌನ್​ ಸಂದರ್ಭದಲ್ಲಿ ಆತನ ಸ್ಥಿತಿ ಗಂಭೀರವಾಗತೊಡಗಿದೆ. ಆದರೆ ದಾನಿಗಳ ಶ್ವಾಸಕೋಶಗಳು ಲಭ್ಯವಾಗುವವರೆಗೆ ಅವನ ಹೃದಯ ಮತ್ತು ಶ್ವಾಸಕೋಶವನ್ನು ಕಾಪಾಡಲು ಅವನನ್ನು ಇಸಿಎಂಒ(ExtraCorporeal membrane oxygenation)ಗೆ ಒಳಪಡಿಸಲಾಯಿತು.

ಇನ್ನು ಈ ಬಗ್ಗೆ ಅಪೊಲೊ ಹಾಸ್ಪಿಟಲ್ಸ್​ ಗ್ರೂಪ್​ನ ಅಧ್ಯಕ್ಷ ಡಾ. ಪ್ರತಾಪ್ ಸಿ ರೆಡ್ಡಿ ಮಾತನಾಡಿದ್ದು, "ಅಂಗಾಂಗ ಕಸಿ ಮಾಡುವ ಶಸ್ತ್ರ ಚಿಕಿತ್ಸೆಯನ್ನು 1995ರಲ್ಲಿ ಪ್ರಾರಂಭಿಸಲಾಗಿದೆ. ಆದರೆ ಕೊರೊನಾ ಸಂದರ್ಭದಲ್ಲಿ ಶ್ವಾಸಕೋಶ ಮತ್ತು ಹೃದಯದ ಕಸಿ ಮಾಡಿದ್ದು, ಅಪೂರ್ವ ಸಾಧನೆಯಾಗಿದೆ. ಆರೋಗ್ಯದ ವಿಷಯದಲ್ಲಿ ಇತ್ತೀಚಿನ ವೈದ್ಯಕೀಯ ಪ್ರಗತಿಗಳು ಮತ್ತು ತಂತ್ರಜ್ಞಾನವನ್ನು ಅಳವಡಿಸಿಕೊಳ್ಳುತ್ತಿದ್ದೇವೆ. ಅಂಗಾಗ ಕಸಿ ಮಾಡುವ ವಿಧಾನವನ್ನು ಜಾಗತಿಕ ಮಟ್ಟದಲ್ಲಿ ವಿಸ್ತರಿಸಲು ನಾವು ಪ್ರಯತ್ನಿಸುತ್ತಿದ್ದೇವೆ. ಅಷ್ಟೇ ಅಲ್ಲದೆ ಅನೇಕ ಸಾಧನೆಯನ್ನೂ ಮಾಡಿದ್ದೇವೆ" ಎಂದರು.

ABOUT THE AUTHOR

...view details