ಹೈದರಾಬಾದ್: ದೇಶಾದ್ಯಂತ ಎಲ್ಲ ವಲಯಗಳು ಮಾರಾಟಕ್ಕೆ ಮುಕ್ತವಾಗಿವೆ ಎಂದು ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಎಂದು ಸರಿಯಾಗಿಯೇ ಹೇಳಿದ್ದಾರೆ. ಇದೇ ರೀತಿ ಮಾಡಲು ದೇಶದ ಬೆನ್ನೆಲುಬು ರೈತರಿಗೆ ಯಾಕೆ ಅವಕಾಶ ಕೊಡಬಾರದು? ಮೇಲ್ನೋಟಕ್ಕೆ ಈ ವಾದವು ನಮ್ಮೆಲ್ಲರಿಗೂ ನ್ಯಾಯಯುತ ಪ್ರತಿಪಾದನೆಯಂತೆ ತೋರುತ್ತದೆ, ಆದರೆ ಇದು ಸರಿಯೇ?
ಈ ಪ್ರಶ್ನೆಗೆ ಸೂಕ್ತ ಉತ್ತರ ಹುಡುಕಬೇಕಾದರೆ ನಾವು ನಮ್ಮ ಭಾರತ ದೇಶದ ಸಂವಿಧಾನದ ಸ್ಥಾಪನಾ ವಿಚಾರಗಳಿಗೆ ಹಿಂತಿರುಗಬೇಕಾಗಿದೆ. ಈಸ್ಟ್ ಇಂಡಿಯನ್ ಕಂಪನಿಯ (ವಿಶ್ವದ ಮೊದಲ ಕೃಷಿ-ವ್ಯವಹಾರ ಎಂಎನ್‌ಸಿ) 350 ವರ್ಷಗಳ ಶೋಷಣೆಯ ನಂತರ, ಭಾರತೀಯ ರೈತರನ್ನು ಕನಿಷ್ಠ ಮಟ್ಟಕ್ಕೆ ಇಳಿಸಲಾಯಿತು. ಈ ಸಂದರ್ಭ ನಾವು ವಿನ್ ಸ್ಟನ್ ಚರ್ಚಿಲ್ ಅವರ ಸುಜನನಶಾಸ್ತ್ರ ನೀತಿಗೆ ಧನ್ಯವಾದ ಹೇಳಲೇಬೇಕು. ಬಂಗಾಳವು ಮಹಾ ಬರಗಾಲವನ್ನು ಅನುಭವಿಸುತ್ತಿದ್ದರೆ ಇತ್ತ ದೇಶದ ಉಳಿದ ಭಾಗದ ಜನ ನಿರ್ಗತಿಕರಾಗಿದ್ದರು. ಆದರೆ, ವೈಸ್‌ರಾಯ್ ಮತ್ತು ಅವರ ಪಕ್ಷಗಳು ಮಾತ್ರ ‘ಜಿನ್ ಮತ್ತು ಟಾನಿಕ್’ ಹೊಳೆಯಲ್ಲಿ ತೇಲುತ್ತಿದ್ದರು. ಕೃಷಿ-ನಿಗಮಗಳ ಅತಿರೇಕದ ಶೋಷಣೆಗೆ ಸಾಕ್ಷಿಯಾದ ಭಾರತೀಯ ಶಾಸಕಾಂಗದ ಪ್ರತಿನಿಧಿಗಳು ಏಳನೇ ವೇಳಾಪಟ್ಟಿ (ಆರ್ಟಿಕಲ್ 246) ಮೂಲಕ “ಕೃಷಿ” ಯನ್ನು ಪ್ರವೇಶ 14 ರಲ್ಲಿ ಮತ್ತು “ಮಾರುಕಟ್ಟೆ ಮತ್ತು ಮೇಳಗಳನ್ನು” ರಾಜ್ಯ ಪಟ್ಟಿಯ 28 ನೇ ಸ್ಥಾನದಲ್ಲಿ ಇರಿಸಿದ್ದಾರೆ. ಆದ್ದರಿಂದ ಮತ್ತೊಮ್ಮೆ, ಭಾರತವು ತನ್ನ ಭೂಮಿ ಮೇಲೆ ಅಂತಹ ಕ್ರೂರ ಸ್ವಾಧೀನದ ದಾಳಿಗೆ ತುತ್ತಾಗುವುದಿಲ್ಲ.
ವಿವಿಧ ರೀತಿಯ ಪ್ರತಿಯೊಂದು ಗಾತ್ರದ ಭೂಮಿಗಲ್ಲು ಎಲ್ಲ ರೀತಿಯ ಬೆಲೆ ಬೆಳೆಯಲು ಮತ್ತು ಮಾರುಕಟ್ಟೆಗಳಿಗೆ ಸರಿ ಹೊಂದುವುದಿಲ್ಲವಾದ್ದರಿಂದ ಅವರು ತಮ್ಮ ಸ್ವಂತ ಹೊಲಗಳ ಮೇಲೆ ರಾಜ್ಯಗಳಿಗೆ ಅತ್ಯುನ್ನತ ಸ್ವಾಯತ್ತತೆಯನ್ನು ನೀಡಲು ಮತ್ತು ಜಮೀನಿನನಲ್ಲಿ ಉತ್ಪಾದನೆಗೆ ಅವಕಾಶ ನೀಡಲು ಬಯಸಿದ್ದರು. ಪ್ರತಿಯೊಂದು ಪ್ರದೇಶ ಮತ್ತು ಕೃಷಿ - ಹವಾಮಾನವು ತನ್ನದೇ ಆದ ಸಾಮಾಜಿಕ ಮತ್ತು ಆರ್ಥಿಕ ಅಭ್ಯಾಸಗಳೊಂದಿಗೆ ಭಿನ್ನವಾಗಿವೇ. ಹೀಗಾಗಿ, ಕೇಂದ್ರ ನಿಯಂತ್ರಣ ನೀತಿಯು ಪ್ರಮಾದ ಮತ್ತು ಸಂಪೂರ್ಣ ದಬ್ಬಾಳಿಕೆಯಾಗಿದೆ.
ಎಪಿಎಂಸಿ (ಕೃಷಿ ಉತ್ಪಾದನಾ ಮಾರುಕಟ್ಟೆ ಸಮಿತಿಗಳು) ಕಾಯ್ದೆಯು ದೇಶದ ದೂರದ ಭಾಗದಲ್ಲಿರುವ ಪ್ರತಿಯೊಬ್ಬ ರೈತರಿಗೆ ಕನಿಷ್ಠ ನ್ಯಾಯಯುತವಾಗಿ ನಡೆಸಿಕೊಂಡಿವೆ ಮತ್ತು ತನ್ನ ಉತ್ಪನ್ನಗಳನ್ನು ಮಾರಾಟ ಮಾಡಲು ಸಮಾನ ಅವಕಾಶವನ್ನು ಕಲ್ಪಿಸಿವೆ. ಇದು ವ್ಯಾಪಾರಿಗಳು ಮತ್ತು ಚಿಲ್ಲರೆ ವ್ಯಾಪಾರಿಗಳಿಗೆ ನಿಲುಗಡೆ ಪರಿಶೀಲನೆಯಾಗಿಯೂ ಕಾರ್ಯನಿರ್ವಹಿಸಿತು, ಅಲ್ಲಿ ಅವರು ಪದಾರ್ಥದ ಗುಣಮಟ್ಟ ಮತ್ತು ನೈರ್ಮಲ್ಯವನ್ನು ಖಚಿತಪಡಿಸಿಕೊಳ್ಳಬಹುದು, ಆದರೆ ಯಾವುದೇ ರೈತ ಅಥವಾ ವ್ಯಾಪಾರಿ ಅನ್ಯಾಯದ ಚೌಕಾಸಿ ಮಾಡುತ್ತಿರಲಿಲ್ಲ. ಸ್ಥಳೀಯ ರೈತರು ಮತ್ತು ವ್ಯಾಪಾರಿಗಳು ಸೇರಿದಂತೆ ಸ್ಥಳೀಯ ಪ್ರತಿನಿಧಿಗಳಿಂದ ಎಪಿಎಂಸಿ ಸಮಿತಿಯನ್ನು ರಚಿಸಲಾಯಿತು. ಒಮ್ಮೆ ಇದರಲ್ಲಿ ಲೋಪಗಳು ಕಂಡುಬಂದವು. ಎಲ್ಲಿ ರೈತರು ಒತ್ತಡದ ಮೇಲೆ ವ್ಯಾಪಾರಿಗಳಿಗೆ ತಮ್ಮ ಉತ್ಪನ್ನಗಳ ಮಾರಾಟ ಅಥವಾ ಅನ್ಯಾಯದ ಬೆಳೆಗೆ ಮಾರುತ್ತಿದ್ದರೋ ಅಲ್ಲಿ ಮಂದಿ ವ್ಯಾಪ್ತಿಯನ್ನ ಮೀರಿ ಅಂತಾರಾಜ್ಯದವರೆಗೂ ಎಪಿಎಂಸಿ ಮಾರಾಟ ವ್ಯಾಪ್ತಿಯನ್ನ ವಿಸ್ತರಿಸಲಾಯಿತು.
ವ್ಯವಸ್ಥೆಯನ್ನು ನಿಯಂತ್ರಿಸಲು ಮತ್ತು ಕನಿಷ್ಠ ಬೆಂಬಲ ಬೆಲೆಗಳು ರೈತರಿಗೆ ತಲುಪುವಂತೆ ನೋಡಿಕೊಳ್ಳಲು ಇದನ್ನು ಮಾಡಲಾಗಿದೆ. ಮಂದಿ ಇಲ್ಲದಿದ್ದರೆ ಎಂಎಸ್‌ಪಿಯನ್ನು ರೈತರಿಗೆ ತಲುಪಿಸುವುದು ಅಸಾಧ್ಯ. ವ್ಯಾಪಾರಿಯಂತೆ ಬೆಂಬಲ ಬೆಲೆಯನ್ನು ತಲುಪಿಸಲು ಖಾಸಗಿ ಉದ್ಯಮವನ್ನು ಇನ್ನೂ ನಂಬಲು ಸಾಧ್ಯವಿಲ್ಲ. ಐತಿಹಾಸಿಕವಾಗಿ, ಬೆಲೆ ನಿಯಂತ್ರಣವನ್ನು ಕಾಪಾಡುವ ನಿಯಮಗಳನ್ನು ತೆಗೆದುಹಾಕಿದ ನಂತರ, ಅಮೇರಿಕ ಮತ್ತು ಜಾಗತಿಕ ಮಟ್ಟದಲ್ಲಿ ಕೃಷಿ-ವ್ಯಾಪಾರ ದೈತ್ಯರಾದ ಕಾರ್ಗಿಲ್, ಲೂಯಿಸ್ ಡ್ರೆಫಿಯಸ್ ಮುಂತಾದವರು ಪ್ರಾಬಲ್ಯ ಸಾಧಿಸಿದ್ದನ್ನ ನಾವು ನೋಡಿದ್ದೇವೆ. ಆ ಬಳಿಕ, ರೈತ ಸಹಕಾರ ಸಂಘಗಳನ್ನು ವ್ಯವಸ್ಥಿತವಾಗಿ ಒಡೆಯಲಾಯಿತು ಮತ್ತು “ಮಾರುಕಟ್ಟೆ ಶಕ್ತಿಗಳು” ಅಮೇರಿಕಾದಲ್ಲಿ ಕೃಷಿ ಗುಲಾಮಗಿರಿಯ ಹೊಸ ಯುಗಕ್ಕೆ ಕಾರಣವಾದವು. ಇದರ ಫಲಿತಾಂಶವೆಂದರೆ, 2020 ರಲ್ಲಿ ಅಮೆರಿಕದ ಕೃಷಿ ಸಾಲವು 25 425 ಬಿಲಿಯನ್ ಮತ್ತು ಕೇವಲ ನಾಲ್ಕೇ ನಾಲ್ಕು ಕಂಪನಿಗಳು ವಿಶ್ವದ ಧಾನ್ಯ ಪೂರೈಕೆಯ ಶೇ. 70 ಕ್ಕಿಂತ ಅಧಿಕ ಪ್ರಮಾಣವನ್ನ ನಿಯಂತ್ರಿಸುತ್ತವೆ.
ಬಿಹಾರದ ಕುತೂಹಲಕಾರಿ ಪ್ರಕರಣ