ಎಲೂರು:ಆಂಧ್ರ ಪ್ರದೇಶದ ಎಲೂರಿನಲ್ಲಿ 561 ಮಂದಿಯನ್ನು ಅಸ್ವಸ್ಥಗೊಳಿಸಿ ಓರ್ವನನ್ನು ಬಲಿ ತೆಗೆದುಕೊಂಡು ಬಾರಿ ಸುದ್ದಿಗೆ ಗ್ರಾಸವಾಗಿರುವ ನಿಗೂಢ ಕಾಯಿಲೆಯ ಕಾರಣ ಪ್ರಾಥಮಿಕ ವರದಿಯಲ್ಲಿ ಬಹಿರಂಗವಾಗಿದೆ.
ಪಶ್ಚಿಮ ಗೋದಾವರಿ ಜಿಲ್ಲಾ ಕೇಂದ್ರವಾದ ಎಲೂರಿನಲ್ಲಿ ಶನಿವಾರ ಈ ಘಟನೆ ಸಂಭವಿಸಿತ್ತು. ಇಡೀ ಊರಿನ ನಿವಾಸಿಗಳು ದಿಢೀರನೇ ಅಸ್ವಸ್ಥರಾದರು. ನಿವಾಸಿಗಳಲ್ಲಿ ವಾಂತಿ, ತೀವ್ರ ಚಳಿ ಮತ್ತು ತಲೆನೋವು ಕಾಣಿಸಿಕೊಂಡಿತ್ತು. ಅಸ್ವಸ್ಥರಾಗಿದ್ದ ಗ್ರಾಮಸ್ಥರನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿತ್ತು. ನಿಗೂಢ ಕಾಯಿಲೆಗೆ ಸುಮಾರು 561 ಜನರು ಅಸ್ವಸ್ಥರಾಗಿದ್ದು, ಓರ್ವ ಮೃತಪಟ್ಟಿದ್ದಾನೆ.
ಕಾಯಿಲೆಯ ಕಾರಣ ಪತ್ತೆಗೆ ಮಾದರಿ ಪರೀಕ್ಷೆಗಳನ್ನು ನಡೆಸಿದ್ದರಿಂದ ರಕ್ತದಲ್ಲಿ ಸೀಸ ಮತ್ತು ನಿಕ್ಕಲ್, ಕುಡಿಯುವ ನೀರಿನಲ್ಲಿ ಕೀಟನಾಶಕ ಇರುವುದು ಪ್ರಾಥಮಿಕ ವರದಿಯಿಂದ ತಿಳಿದುಬಂದಿದೆ. ನೀರಿನಲ್ಲಿ ಇ-ಕೋಲಿ ಇರುವುದು ಅಂಶ ಸಾಮಾನ್ಯ ಎಂಬುದು ಕಂಡುಬಂದಿದೆ.
ಕಾಯಿಲೆಯ ಏಕಾಏಕಿ ಹೇಗೆ ಉಂಟಾಯಿತು ಎಂಬುದರ ರೋಗಕಾರಕಗಳ ಬಗ್ಗೆ ಸಮಗ್ರ ವರದಿಗೆ ಸುಮಾರು ಒಂದು ವಾರ ಕಾಯಬೇಕಿದೆ. ನಾನಾ ಏಜೆನ್ಸಿ ಮತ್ತು ಸಂಸ್ಥೆಗಳ ತಂಡಗಳು ಹೆಚ್ಚಿನ ವಿಶ್ಲೇಷಣೆಗಾಗಿ ನೀರು, ಆಹಾರ ಮತ್ತು ರಕ್ತದ ಮಾದರಿಗಳನ್ನು ಸಂಗ್ರಹಿಸಲು ಮುಂದಾಗಿವೆ.