ವಿಶಾಖಪಟ್ಟಣಂ: ಕಾಲೇಜ್ನಲ್ಲಿ ವ್ಯಾಸಂಗ ಮಾಡುತ್ತಿದ್ದ ವಿದ್ಯಾರ್ಥಿನಿಗೆ ಯುವಕನೋರ್ವ ಲವ್ ಪ್ರಪೋಸಲ್ ಮಾಡಿದ್ದು, ಅದು ತಿರಸ್ಕಾರಗೊಂಡಿದ್ದರಿಂದ ಆಕ್ರೋಶಗೊಂಡ ಯುವಕ ಆಕೆಗೆ ಚಾಕುವಿನಿಂದ ಹಲ್ಲೆ ಮಾಡಿರುವ ಘಟನೆ ಆಂಧ್ರಪ್ರದೇಶದ ವಿಶಾಖಪಟ್ಟಣಂದಲ್ಲಿ ನಡೆದಿದೆ.
ಪ್ರೇಮ ನಿವೇದನೆ ತಿರಸ್ಕಾರ... ಕಾಲೇಜ್ ವಿದ್ಯಾರ್ಥಿನಿಗೆ ಚಾಕುವಿನಿಂದ ಇರಿದ ಯುವಕ! - college student
ವಿದ್ಯಾರ್ಥಿನಿವೋರ್ವಳು ಪ್ರೇಮ ಪ್ರಸ್ತಾವ ತಿರಸ್ಕಾರ ಮಾಡಿದಳು ಎಂಬ ಕೋಪದಲ್ಲಿ ಯುವಕನೋರ್ವ ಆಕೆಗೆ ಚಾಕುವಿನಿಂದ ಹಲ್ಲೆ ಮಾಡಿರುವ ಘಟನೆ ಆಂಧ್ರಪ್ರದೇಶದ ವಿಶಾಖಪಟ್ಟಣಂದಲ್ಲಿ ನಡೆದಿದೆ.
ಇಲ್ಲಿನ ಅನಕಪಲ್ಲೆ ನಿವಾಸಿಯಾಗಿದ್ದ ಯಶೋಧ ಭಾರ್ಗವಿ ಕಾಲೇಜ್ ಮುಗಿಸಿಕೊಂಡು ವಾಪಸ್ ಬರುತ್ತಿದ್ದಾಗ ನಾಗಸಾಯಿ ಎಂಬ ಯುವಕ ಆಕೆಯ ಮೇಲೆ ಚಾಕುವಿನಿಂದ ಹಲ್ಲೆ ಮಾಡಿದ್ದಾನೆ. ಯುವಕನಿಂದ ಹಲ್ಲೆಗೊಳಗಾಗಿರುವ ಭಾರ್ಗವಿ ಕುತ್ತಿಗೆಗೆ ತೀವ್ರ ಗಾಯವಾಗಿದ್ದು, ರಕ್ತಸ್ರಾವವಾಗಿದೆ. ಪೊಲೀಸರು ತಿಳಿಸಿರುವ ಪ್ರಕಾರ, ಯುವಕ ಆಕೆಯ ಗಂಟಲಿಗೆ ಚಾಕುವಿನಿಂದ ಇರಿದು, ಅವಳ ಗಂಟಲು ಸೀಳುವ ಪ್ರಯತ್ನ ಮಾಡಿದ್ದಾನೆಂದು ತಿಳಿಸಿದ್ದಾರೆ. ಸಧ್ಯ ಆಸ್ಪತ್ರೆಯಲ್ಲಿ ಆಕೆಗೆ ಚಿಕಿತ್ಸೆ ನೀಡಲಾಗುತ್ತಿದ್ದು, ಸ್ಥಿತಿ ಗಂಭೀರವಾಗಿದೆ ಎಂದು ತಿಳಿಸಿದ್ದಾರೆ.
ಇದರ ಜತೆಗೆ ಭಾರ್ಗವಿ, ಎದೆ, ಭುಜ ಹಾಗೂ ಪಕ್ಕೆಲುಬುಗಳಿಗೆ ತೀವ್ರ ಗಾಯಗಳಾಗಿವೆ. ತಕ್ಷಣವೇ ಸ್ಥಳೀಯರು ಆರೋಪಿಯನ್ನ ಹಿಡಿದು ಪೊಲೀಸರಿಗೆ ಒಪ್ಪಿಸಿದ್ದು, ಸದ್ಯ ಆತ ಪೊಲೀಸರ ವಶದಲ್ಲಿದ್ದಾನೆ.