ಅಮರಾವತಿ(ಆಂಧ್ರಪ್ರದೇಶ): ದೇಶಾದ್ಯಂತ ನಿನ್ನೆಯಿಂದ ಮದ್ಯ ಮಾರಾಟ ಮಾಡಲು ಅವಕಾಶ ನೀಡಲಾಗಿದ್ದು, ಸರತಿ-ಸಾಲಿನಲ್ಲಿ ನಿಂತು ಜನರು ಎಣ್ಣೆ ಖರೀದಿ ಮಾಡಲು ಮುಂದಾಗುತ್ತಿದ್ದಾರೆ. ಇದರ ಮಧ್ಯೆ ಆಂಧ್ರಪ್ರದೇಶ ಸರ್ಕಾರ ಎಣ್ಣೆಪ್ರೀಯರಿಗ ದಿಢೀರ್ ಶಾಕ್ ನೀಡಿದೆ.
ಮದ್ಯದ ಮೇಲೆ ಶೇ.50ರಷ್ಟು ಬೆಲೆ ಏರಿಕೆ: ಆಂಧ್ರ ಸರ್ಕಾರದ ಆದೇಶ - ಆಂಧ್ರಪ್ರದೇಶ ಸರ್ಕಾರ
ಮದ್ಯ ಮಾರಾಟ ಮಾಡಲು ಈಗಾಗಲೇ ಕೇಂದ್ರ ಸರ್ಕಾರ ಅನುಮತಿ ನೀಡಿದ್ದು, ಇದರ ಬೆನ್ನಲ್ಲೇ ಆಂಧ್ರಪ್ರದೇಶದಲ್ಲಿ ಎಣ್ಣೆ ಪ್ರೀಯರಿಗೆ ಬಿಗ್ ಶಾಕ್ ನೀಡಲಾಗಿದೆ.
AP govt hikes liquor prices
ನಿನ್ನೆ ನಡೆದ ಸಚಿವ ಸಂಪುಟದಲ್ಲಿ ಈ ಮಹತ್ವದ ನಿರ್ಧಾರ ಕೈಗೊಳ್ಳಲಾಗಿದ್ದು, ಶೇ.25ರಷ್ಟು ಹೆಚ್ಚಳ ಮಾಡಿ ಮದ್ಯ ಮಾರಾಟ ಮಾಡಲಾಗಿದ್ದು, ಇದೀಗ ಅದು ಶೇ.50ರಷ್ಟು ಏರಿಕೆ ಮಾಡಲಾಗಿದೆ. ಇದಕ್ಕೆ ಸಂಬಂಧಿಸಿದಂತೆ ಮಾತನಾಡಿರುವ ರಾಜ್ಯ ಕಂದಾಯ ಇಲಾಖೆ ಕಾರ್ಯದರ್ಶಿ ರಜತ್ ಭಾರ್ಗವ್ ಈ ನಿಯಮ ಸದ್ಯದಿಂದಲೇ ಜಾರಿಗೊಳ್ಳಲಿದೆ ಎಂದಿದ್ದಾರೆ.
ರಾಜ್ಯದಲ್ಲಿ ಬೆಳಗ್ಗೆ 11ರಿಂದ ರಾತ್ರಿ 7ರವರೆಗೆ ಮಧ್ಯದಂಗಡಿ ಓಪನ್ ಆಗ್ತಿದ್ದು, ಇದೀಗ ಮಧ್ಯಾಹ್ನ 12ರಿಂದ ಅಂಗಡಿ ಓಪನ್ ಆಗಲಿವೆ ಎಂದಿದ್ದಾರೆ. ಇದರಿಂದ ರಾಜ್ಯದಲ್ಲಿ 9,000 ಸಾವಿರ ಕೋಟಿ ಹೆಚ್ಚುವರಿ ಆದಾಯ ರಾಜ್ಯದ ಬೊಕ್ಕಸಕ್ಕೆ ಬರಲಿದೆ ಎಂದು ತಿಳಿಸಿದ್ದಾರೆ.