ಮಲ್ಕನ್ಗಿರಿ(ಒಡಿಶಾ):ನಕ್ಸಲ್ ಪೀಡಿತ ಮಲ್ಕನ್ಗಿರಿ ಜಿಲ್ಲೆಯ ಹೆಣ್ಣುಮಗಳೊಬ್ಬಳು ವಿಶೇಷ ಸಾಧನೆ ಮಾಡುವ ಮೂಲಕ ಕನಸು ಹೊತ್ತ ಅದೆಷ್ಟೋ ಬಾಲಕಿಯರಿಗೆ ಸ್ಫೂರ್ತಿಯ ಸೆಲೆಯಾಗಿದ್ದಾರೆ.
27 ವರ್ಷದ ಅನುಪ್ರಿಯಾ ಲಕ್ರಾ ಮಲ್ಕನ್ಗಿರಿ ಎನ್ನುವ ನಕ್ಸಲ್ ಬಾಧಿತ ಜಿಲ್ಲೆಗೆ ಸೇರಿದವಳು. ಆದರೆ, ಇಂದಿನ ಆಕೆಯ ಸಾಧನೆ ಜಿಲ್ಲೆಗೆ ಅಂಟಿದ ಕಳಂಕವನ್ನು ಕೊಂಚವಾದರೂ ಮರೆಸಿದೆ ಎಂದರೆ ತಪ್ಪಲ್ಲ..!
23 ವಯಸ್ಸಿನ ಲಕ್ರಾ ಇಂಜಿನಿಯರಿಂಗ್ ತೊರೆದು ಏವಿಯೇಷನ್ ಅಕಾಡೆಮಿ ಸೇರುತ್ತಾಳೆ. ನಾಲ್ಕು ವರ್ಷದ ಸತತ ಪರಿಶ್ರಮದ ಬಳಿಕ ಇಂದು ಅನುಪ್ರಿಯಾ ಲಕ್ರಾ ಪೈಲಟ್ ಆಗಿ ಕಂಡ ಕನಸನ್ನು ನನಸು ಮಾಡಿಕೊಂಡಿದ್ದಾಳೆ. ಈ ಮೂಲಕ ಈ ಜಿಲ್ಲೆಯ ಮೊದಲ ಮಹಿಳಾ ಪೈಲಟ್ ಎನ್ನುವ ಹೆಗ್ಗಳಿಕೆ ಪಾತ್ರರಾಗಿದ್ದಾರೆ. ಖಾಸಗಿ ಏರ್ಲೈನ್ನ ಕೋ-ಪೈಲಟ್ ಆಗಿ ಶೀಘ್ರವೇ ನಿಯುಕ್ತಿಗೊಳ್ಳಲಿದ್ದಾರೆ.