ಕರ್ನಾಟಕ

karnataka

ETV Bharat / bharat

ಮುಂಬೈನ ಕ್ಲೀನ್​​​ ಪ್ರದೇಶಕ್ಕಿಂತ ಸ್ಲಂನಲ್ಲೇ ಹೆಚ್ಚು ರೋಗನಿರೋಧಕ ಶಕ್ತಿ: ಸಮೀಕ್ಷೆ - ಮುಂಬೈನ ಇತರ ಪ್ರದೇಶಗಳಿಗಿಂತ ಸ್ಲಂ ನಿವಾಸಿಗಳಲ್ಲಿ ಪ್ರತಿಕಾಯ ಜಾಸ್ತಿ

ಸಮೀಕ್ಷೆಯೊಂದರ ಪ್ರಕಾರ ಮುಂಬೈ ಮಹಾನಗರದಲ್ಲಿ ಕೊಳಗೇರಿಗಳಲ್ಲಿ ವಾಸಿಸುವ ಜನರಲ್ಲಿ ಅದರಲ್ಲೂ ಮಹಿಳೆಯರಲ್ಲಿ ಇತರ ಪ್ರದೇಶಗಳಲ್ಲಿ ವಾಸಿಸುವ ಜನರಿಗಿಂತ ಹೆಚ್ಚಿನ ರೋಗನಿರೋಧಕ ಶಕ್ತಿ ಇದೆ ಎಂದು ತಿಳಿದು ಬಂದಿದೆ.

Antibody higher in slum dwellers than in other regions
ಸ್ಲಂ ನಿವಾಸಿಗಳಲ್ಲಿ ಪ್ರತಿಕಾಯ ಜಾ

By

Published : Jul 29, 2020, 1:56 PM IST

ಮುಂಬೈ : ಸಮೀಕ್ಷೆಯೊಂದರ ಪ್ರಕಾರ ಬೃಹತ್​ ಮುಂಬೈ ಮಹಾನಗರಿ ಕೊಳಗೇರಿ ಪ್ರದೇಶಗಳಲ್ಲಿ ಶೇ. 57 ಮತ್ತು ಇತರ ಪ್ರದೇಶಗಳಲ್ಲಿ ಶೇ.16 ರಷ್ಟು ಜರನಲ್ಲಿ ರೋಗ ನಿರೋಧಕ ಶಕ್ತಿ ಕಂಡು ಬಂದಿದೆ.

ಮುಂಬೈ ನಗರದಲ್ಲಿ ಸೋಂಕಿನ ಪ್ರಕರಣಗಳು ಹೆಚ್ಚುತ್ತಿರುವ ಹಿನ್ನೆಲೆ ನಾಗರಿಕರಲ್ಲಿ ರೋಗ ನಿರೋಧಕ ಶಕ್ತಿ ಹೇಗಿದೆ ಎಂಬ ಬಗ್ಗೆ ಸಮೀಕ್ಷೆ ನಡೆಸಲಾಗಿತ್ತು. ಸಮೀಕ್ಷೆಯ ಮೊದಲ ಸುತ್ತಿನ ವರದಿಯಲ್ಲಿ ಸ್ಲಂಗಳಲ್ಲೇ ಕೊರೊನಾ ಹೊಡೆದೋಡಿಸುವ ಶಕ್ತಿ ಹೆಚ್ಚು ಎಂಬ ಅಂಶ ಬಹಿರಂಗವಾಗಿದೆ. ಇದರರ್ಥ ಕೊರೊನಾಗೆ ಒಳಗಾಗಿದ್ದರೂ, ಅನೇಕರಿಗೆ ಇದರ ಬಗ್ಗೆ ತಿಳಿದಿಲ್ಲ.

SARS-Covid 2 ಗಾಗಿ ರಕ್ತದ ಮಾದರಿಗಳಲ್ಲಿನ ಪ್ರತಿಕಾಯದ ಪ್ರಮಾಣ ಪತ್ತೆ ಹಚ್ಚಲು, ನೀತಿ ಆಯೋಗ,​ ಗ್ರೇಟರ್ ಮುಂಬೈ ಮುನ್ಸಿಪಲ್ ಕಾರ್ಪೊರೇಷನ್, ಟಾಟಾ ಇನ್​​ಸ್ಟಿಟ್ಯೂಟ್​ ಆಫ್ ಫಂಡಮೆಂಟಲ್ ರಿಸರ್ಚ್ ಜಂಟಿಯಾಗಿ ಈ ಸಮೀಕ್ಷೆ ನಡೆಸಿವೆ. ಕಸ್ತೂರ್ಬಾ ಆಣ್ವಿಕ ಜೀವಶಾಸ್ತ್ರ ವೈದ್ಯಕೀಯ ಪ್ರಯೋಗಾಲಯ, ಅನುವಾದ ಆರೋಗ್ಯ ವಿಜ್ಞಾನ ಮತ್ತು ತಂತ್ರಜ್ಞಾನ ಸಂಸ್ಥೆ, ಎ.ಟಿ.ಇ. ಚಂದ್ರ ಪ್ರತಿಷ್ಠಾನ ಮತ್ತು ಐಡಿಎಫ್‌ಸಿ ಸಂಸ್ಥೆಗಳು ಈ ಸಮೀಕ್ಷೆಗೆ ಸಹಕಾರ ನೀಡಿವೆ.

ಸಮೀಕ್ಷೆಗಾಗಿ ನಗರದ ಮೂರು ವಾರ್ಡ್​ಗಳ ಸಾಮಾನ್ಯ ಜನರಿಂದ ಮಾದರಿಗಳನ್ನು ತೆಗೆದುಕೊಂಡು ಅವುಗಳನ್ನು ವಯಸ್ಸು ಮತ್ತು ಲಿಂಗದ ಆಧಾರ ಮೇಲೆ ವಿಭಜಿಸಿ ಅಧ್ಯಯನ ಮಾಡಲಾಯಿತು. ಅಧ್ಯಯನದಲ್ಲಿ ಪುರುಷರಿಗಿಂತ ಮಹಿಳೆಯರಲ್ಲಿ ಪ್ರತಿಕಾಯ ಕಣಗಳು ಹೆಚ್ಚಾಗಿವೆ ಎಂದು ತಿಳಿದು ಬಂದಿದೆ.

ಸಮೀಕ್ಷೆ ವರದಿ ಅಂಕಿ ಅಂಶಗಳು :

ಜುಲೈ 2020 ರ ಮೊದಲ ಹದಿನೈದು ದಿನಗಳಲ್ಲಿ ನಡೆದ ಮೊದಲ ಸುತ್ತಿನ ಸಮೀಕ್ಷೆಯಲ್ಲಿ, ಅಂದಾಜು 8,870 ಜನರ ಒಟ್ಟು 6,936 ಮಾದರಿಗಳನ್ನು ಸಂಗ್ರಹಿಸಲಾಗಿದೆ. ಇದರಲ್ಲಿ ಕೊಳೆಗೇರಿ ಪ್ರದೇಶಗಳ ಜನರಲ್ಲಿ ಶೇ. 57 ಮತ್ತು ಇತರ ಪ್ರದೇಶಗಳ ಜನರಲ್ಲಿ ಶೇ.16 ರಷ್ಟು ಪ್ರತಿಕಾಯ( ರೋಗನಿರೋಧಕ ಶಕ್ತಿಯ ಕಣಗಳು) ಉತ್ಪತ್ತಿಯಾಗಿವೆ ಎಂಬುವುದು ಗೊತ್ತಾಗಿದೆ.

ವರದಿಯು ಏನು ಹೇಳುತ್ತದೆ :

ಸಮೀಕ್ಷಾ ವರದಿಯ ಪ್ರಕಾರ, ಮಹಿಳೆಯರಲ್ಲಿ ಪ್ರತಿಕಾಯ ಪ್ರಮಾಣ ಪುರುಷರಿಗಿಂತ ಹೆಚ್ಚಿನ ಪ್ರಮಾಣದಲ್ಲಿದೆ. ಸೋಂಕಿನ ಮರಣ ಪ್ರಮಾಣವನ್ನು ನೋಡಿದರೆ, ಮೂರು ವಾರ್ಡ್​ಗಳಲ್ಲಿ ಶೇ. 5 ರಿಂದ 6 ರಷ್ಟಿದೆ (0.05 ರಿಂದ 0.10%) ರೋಗ ಲಕ್ಷಣವಿರುವ ರೋಗಿಗಳನ್ನು ಪ್ರತ್ಯೇಕಗೊಳಿಸುವುದು, ಸಾಮಾಜಿಕ ಅಂತರ ಕಾಪಾಡುವುದು, ಮಾಸ್ಕ್​​ ಧರಿಸುವುದು ಸೇರಿದಂತೆ ಇತರ ಕ್ರಮಗಳು ರೋಗ ಹರಡುವಿಕೆಯನ್ನು ತಡೆಗಟ್ಟಲು ಸಾಧ್ಯವಾಗಿಸುತ್ತದೆ ಎಂಬುದನ್ನ ಕಂಡುಕೊಳ್ಳಲಾಗಿದೆ.

ಮುಂಬೈ ನಗರದಲ್ಲಿ ಪ್ರಸ್ತುತ ಕೊರೊನಾ ಪ್ರಕರಣಗಳ ಸಂಖ್ಯೆ 1 ಲಕ್ಷ ದಾಟಿದೆ. ಅಂದರೆ ದೇಶದ ಒಟ್ಟಾರೆ ಸೋಂಕಿತರ ಪೈಕಿ ಶೇ. 7 ರಷ್ಟು ಜನ ಮುಂಬೈ ನಗರದಲ್ಲಿದ್ದಾರೆ. ಒಟ್ಟು 6 ಸಾವಿರ ಮಂದಿ ಇದುವರೆಗೆ ಸೋಂಕಿಗೆ ಬಲಿಯಾಗಿದ್ದಾರೆ. ನಗರದಲ್ಲಿ ಒಟ್ಟು 1.2 ಕೋಟಿ ಜನಸಂಖ್ಯೆ ಇದ್ದು, ಈ ಪೈಕಿ ಶೇ.65 ರಷ್ಟು ಜನ ಕೊಳಗೇರಿಗಳಲ್ಲಿ ವಾಸಿಸುತ್ತಿದ್ದಾರೆ. ಉಳಿದ 65 ಲಕ್ಷದಷ್ಟು ಜನರು ಇತರ ಪ್ರದೇಶಗಳಲ್ಲಿ ವಾಸಿಸುತ್ತಿದ್ದಾರೆ.

ABOUT THE AUTHOR

...view details