ನವದೆಹಲಿ:ಕಾಂಗ್ರೆಸ್ ಮುಖಂಡ ರಾಹುಲ್ ಗಾಂಧಿ ಕೇಂದ್ರ ಸರ್ಕಾರ "ಬಡವರ ವಿರೋಧಿ ಸರ್ಕಾರ" ಎಂದು ವಾಗ್ದಾಳಿ ನಡೆಸಿದ್ದಾರೆ. ಈ ಸಂಬಂಧ ಟ್ವೀಟ್ ಮಾಡಿರುವ ಅವರು ಕೊರೊನಾ ವೈರಸ್ ಸಾಂಕ್ರಾಮಿಕದ ಸಂದರ್ಭವನ್ನು ಕೇಂದ್ರ ಸರ್ಕಾರ ಲಾಭಗಳಿಸಲು ಬಳಸುತ್ತಿದೆ ಎಂದು ಆರೋಪಿಸಿದ್ದಾರೆ.
ಲಾಭಗಳಿಸಲು ಕೊರೊನಾ ಬಿಕ್ಕಟ್ಟಿನ ಬಳಕೆ: ಕೇಂದ್ರದ ವಿರುದ್ಧ ರಾಹುಲ್ ಗಾಂಧಿ ಆರೋಪ - ಶ್ರಮಿಕ್ ಸ್ಪೆಷಲ್ ರೈಲು
ಕೇಂದ್ರ ಸರ್ಕಾರ ಬಡವರ ವಿರೋಧಿ ಸರ್ಕಾರ ಆಗಿದ್ದು, ಕೊರೊನಾ ವೈರಸ್ ಬಿಕ್ಕಟ್ಟಿನ ಸಂದರ್ಭವನ್ನು ಲಾಭ ಗಳಿಸಲು ಸನ್ನಿವೇಶ ಬಳಸಿಕೊಳ್ಳುತ್ತಿದೆ ಎಂದು ರಾಹುಲ್ ಗಾಂಧಿ ಟ್ವೀಟ್ ಮಾಡಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.
rahul gandhi
ಕೊರೊನಾ ವೈರಸ್ ಸಾಂಕ್ರಾಮಿಕ ಸಮಯದಲ್ಲಿ ವಲಸಿಗರನ್ನು ಕರೆದೊಯ್ಯಲು 'ಶ್ರಮಿಕ್ ಸ್ಪೆಷಲ್' ರೈಲುಗಳನ್ನು ಓಡಿಸುವ ಮೂಲಕ ರೈಲ್ವೆ ಇಲಾಖೆ 428 ಕೋಟಿ ರೂಪಾಯಿಗಳ ಆದಾಯವನ್ನು ಗಳಿಸಿದೆ ಎಂದು ತಿಳಿಸಿದ ರಾಹುಲ್, ವರದಿಯ ಕ್ಲಿಪ್ಪಿಂಗ್ ಪೋಸ್ಟ್ ಮಾಡಿದ್ದಾರೆ.
"ರೋಗದ ಕರಿಛಾಯೆ ಆವರಿಸಿದೆ, ಜನರು ತೊಂದರೆಯಲ್ಲಿದ್ದಾರೆ, ಆದರೆ ಸರ್ಕಾರ ವಿಪತ್ತನ್ನು ಲಾಭವನ್ನಾಗಿ ಪರಿವರ್ತಿಸುವ ಮೂಲಕ ಬಡವರ ವಿರೋಧಿಯಾಗಿದೆ" ಎಂದು ರಾಹುಲ್ ಗಾಂಧಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.