ನವದೆಹಲಿ:ಮಹಾಮಾರಿ ಕೊರೊನಾ ಜ್ವರಕ್ಕೆ ರಾಮಬಾಣ ಎಂದು ಪರಿಗಣಿಸಲಾಗಿದ್ದ ಹೈಡ್ರಾಕ್ಸಿಕ್ಲೋರೋಕ್ವಿನ್ ಮಾತ್ರೆಯ ಮೇಲಿನ ಪ್ರಯೋಗಾರ್ಥ ಪರೀಕ್ಷೆಯನ್ನು ಕಳೆದ ಕೆಲ ದಿನಗಳ ಹಿಂದೆ ತಾತ್ಕಾಲಿಕವಾಗಿ ಕೈಬಿಟ್ಟಿದ್ದ ವಿಶ್ವ ಆರೋಗ್ಯ ಸಂಸ್ಥೆ, ಇದೀಗ ಮತ್ತೊಮ್ಮೆ ಪುನರ್ ಚಾಲನೆ ನೀಡಿದೆ.
ಹೈಡ್ರಾಕ್ಸಿಕ್ಲೋರೋಕ್ವಿನ್ ಮಾತ್ರೆಯಿಂದ ಅಡ್ಡಪರಿಣಾಮಗಳು ಹೆಚ್ಚಿದ್ದು, ಹೃದಯಾಘಾತದ ಆತಂಕ ವ್ಯಕ್ತಪಡಿಸಿತ್ತು. ಆದರೆ ಇದೀಗ ಹೈಡ್ರಾಕ್ಸಿಕ್ಲೋರೋಕ್ವಿನ್ (Hydroxychloroquine) ಔಷಧದ ಕ್ಲಿನಿಕಲ್ ಪ್ರಯೋಗಗಳು ಪುನರಾರಂಭಗೊಂಡಿವೆ ಎಂದು ವಿಶ್ವ ಆರೋಗ್ಯ ಸಂಸ್ಥೆ ಅಧಿಕೃತ ಪ್ರಕಟಣೆ ಹೊರಡಿಸಿದೆ. ಈ ಔಷಧಿ ಭಾರತದಲ್ಲಿ ಅತಿ ಹೆಚ್ಚು ಉತ್ಪಾದನೆಗೊಳ್ಳುತ್ತಿದೆ.