ಚೆನ್ನೈ: ಆರು ಮಂದಿ ಬಂಧಿತ ರಂಗೋಲಿ ಪ್ರತಿಭಟನಾಕಾರರನ್ನು ಚೆನ್ನೈ ನಗರ ಪೊಲೀಸರು ಬಿಡುಗಡೆ ಮಾಡಿದ ಬೆನ್ನಲ್ಲೇ ತಮಿಳುನಾಡಿನ ರಾಜಕೀಯ ನಾಯಕರ ಮನೆಗಳ ಮುಂದೆ ಪೌರತ್ವ ಕಾಯ್ದೆ ಹಾಗೂ ರಾಷ್ಟ್ರೀಯ ನಾಗರಿಕರ ನೋಂದಣಿ ವಿರೋಧಿ ರಂಗೋಲಿಗಳು ಕಂಡುಬಂದಿವೆ.
DMK ನಾಯಕರ ಮನೆ ಮುಂದೆಯೂ 'ಸಿಎಎ-ಎನ್‌ಆರ್‌ಸಿ ವೇಂಡಂ' ರಂಗೋಲಿ... ಫೋಟೋ ವೈರಲ್ - ಸಿಎಎ ಹಾಗೂ ಎನ್‌ಆರ್‌ಸಿ ವಿರೋಧಿ ರಂಗೋಲಿ ಲೇಟೆಸ್ಟ್ ಸುದ್ದಿ
ತಮಿಳುನಾಡಿನ ರಾಜಕೀಯ ನಾಯಕರ ಮನೆಗಳ ಮುಂದೆ ಪೌರತ್ವ ಕಾಯ್ದೆ ಹಾಗೂ ರಾಷ್ಟ್ರೀಯ ನಾಗರಿಕರ ನೋಂದಣಿ ವಿರೋಧಿ ರಂಗೋಲಿಗಳು ಕಂಡುಬಂದಿವೆ.
![DMK ನಾಯಕರ ಮನೆ ಮುಂದೆಯೂ 'ಸಿಎಎ-ಎನ್‌ಆರ್‌ಸಿ ವೇಂಡಂ' ರಂಗೋಲಿ... ಫೋಟೋ ವೈರಲ್ Anti-CAA-NRC kolams featured at doorsteps of DMK leaders](https://etvbharatimages.akamaized.net/etvbharat/prod-images/768-512-5537645-thumbnail-3x2-megha.jpg)
ಸಿಎಎ ಹಾಗೂ ಎನ್‌ಆರ್‌ಸಿ ವಿರೋಧಿ ರಂಗೋಲಿ ಬಿಡಿಸಿದ ಆರೋಪದಡಿ ಪ್ರತಿಭಟನಾಕಾರರನ್ನು ಬಂಧಿಸಿದ ಪೊಲೀಸರ ಕ್ರಮವನ್ನು ಡಿಎಮ್ಕೆ ಸೇರಿದಂತೆ ಇತರ ಪ್ರತಿಪಕ್ಷಗಳು ಖಂಡಿಸಿ ಪ್ರತಿಭಟನೆ ನಡೆಸಿದ್ದವು. ಅಲ್ಲದೇ ರಾಜ್ಯದ ಜನರು ಸಹ ಸಿಎಎ ಹಾಗೂ ಎನ್‌ಆರ್‌ಸಿ ವಿರೋಧಿ ರಂಗೋಲಿ ಬಿಡಿಸಿ ಪ್ರತಿಭಟನೆಗೆ ಬೆಂಬಲಿಸಿದ್ದವು. ಬಳಿಕ ಬಂಧಿತ ಪ್ರತಿಭಟನಾಕಾರರನ್ನು ಪೊಲೀಸರು ಬಿಡುಗಡೆ ಮಾಡಿದ್ದರು.
ಆದರೆ ಇಂದು ಮಾಜಿ ಮುಖ್ಯಮಂತ್ರಿ ಎಂ ಕರುಣಾನಿಧಿ, ಡಿಎಂಕೆ ಮುಖ್ಯಸ್ಥ ಎಂ.ಕೆ.ಸ್ಟಾಲಿನ್ ಹಾಗೂ ಸಂಸದೆ ಕನಿಮೊಳಿ ಕರುಣಾನಿಧಿ ಅವರ ನಿವಾಸಗಳ ಮುಂದೆ ಸಿಎಎ-ಎನ್‌ಆರ್‌ಸಿ ವಿರೋಧಿ ರಂಗೋಲಿಗಳು ಕಂಡುಬಂದಿದ್ದು, ಇದರ ಫೋಟೋಗಳನ್ನು ಸ್ವತಃ ಸ್ಟಾಲಿನ್ ಹಾಗೂ ಕನಿಮೊಳಿ ತಮ್ಮ ಟ್ವಿಟರ್ ಖಾತೆಯಲ್ಲಿ ಪೋಸ್ಟ್ ಮಾಡಿದ್ದಾರೆ. ಸದ್ಯ ಈ ಫೋಟೊಗಳು ವೈರಲ್ ಆಗಿವೆ.