ಜಮ್ಮು-ಕಾಶ್ಮೀರ:ಪುಲ್ವಾಮಾ ಸ್ಫೋಟ ಸಂಭವಿಸಿದ ಪ್ರದೇಶದಲ್ಲಿ ಜಂಟಿ ಕಾರ್ಯಾಚರಣೆ ನಡೆಸಿದ ಸೇನಾ ಸಿಬ್ಬಂದಿಗೆ ಸಿಂಟೆಕ್ಸ್ ಗಟ್ಟಲೇ ಸ್ಫೋಟಕಗಳು ಲಭ್ಯವಾಗಿದೆ. ಈ ಮೂಲಕ ಪುಲ್ವಾಮಾ ಮಾದರಿಯ ಮತ್ತೊಂದು ದಾಳಿಯನ್ನು ಸೇನಾ ಸಿಬ್ಬಂದಿ ಕಾರ್ಯಾಚರಣೆ ನಡೆಸಿ ತಪ್ಪಿಸಿದೆ.
ತಪ್ಪಿದ ಮತ್ತೊಂದು ಪುಲ್ವಾಮಾ ಮಾದರಿಯ ದಾಳಿ... ನೆಲದಲ್ಲಿ ಹುದುಗಿಸಿಟ್ಟಿದ್ದ ಸಿಂಟೆಕ್ಸ್ಗಟ್ಟಲೇ ಸ್ಫೋಟಕಗಳು ಲಭ್ಯ! - ತಪ್ಪಿದ ಪುಲ್ವಾಮಾ ಮಾದರಿ ದಾಳಿ
ಪುಲ್ವಾಮಾ ಘಟನೆ ಸಂಭವಿಸಿದ ಪ್ರದೇಶದಲ್ಲಿ ಜಂಟಿ ಕಾರ್ಯಾಚರಣೆ ನಡೆಸಿದ ಸೇನಾ ಸಿಬ್ಬಂದಿಗೆ ಸಿಂಟೆಕ್ಸ್ ಗಟ್ಟಲೇ ಸ್ಫೋಟಕಗಳು ಲಭ್ಯವಾಗಿದ್ದು, ಭಾರಿ ದಾಳಿ ತಪ್ಪಿದಂತಾಗಿದೆ.
![ತಪ್ಪಿದ ಮತ್ತೊಂದು ಪುಲ್ವಾಮಾ ಮಾದರಿಯ ದಾಳಿ... ನೆಲದಲ್ಲಿ ಹುದುಗಿಸಿಟ್ಟಿದ್ದ ಸಿಂಟೆಕ್ಸ್ಗಟ್ಟಲೇ ಸ್ಫೋಟಕಗಳು ಲಭ್ಯ! Another Pulwama type attack averted](https://etvbharatimages.akamaized.net/etvbharat/prod-images/768-512-8838744-thumbnail-3x2-sss.jpg)
ತಪ್ಪಿದ ಮತ್ತೊಂದು ಪುಲ್ವಾಮಾ ಮಾದರಿಯ ದಾಳಿ
ಗಡಿಕಲ್ನ ಕರೇವಾ ಪ್ರದೇಶದಲ್ಲಿ ಇಂದು ಬೆಳಿಗ್ಗೆ 8 ಗಂಟೆ ಸುಮಾರಿಗೆ ಪ್ರಾರಂಭಿಸಲಾದ ಜಂಟಿ ಕಾರ್ಯಾಚರಣೆ ವೇಳೆ ನೆಲದಲ್ಲಿ ಹುದುಗಿಸಿಟ್ಟಿದ್ದ ಸಿಂಟೆಕ್ಸ್ ಟ್ಯಾಂಕ್ ದೊರೆತಿದೆ. ಈ ವೇಳೆ ಇನ್ನೂ ಆಳವಾಗಿ ಶೋಧ ನಡೆಸಿದಾಗ 125 ಗ್ರಾಂನ 416 ಪ್ಯಾಕೆಟ್ ಸ್ಫೋಟಕಗಳು ದೊರೆತಿವೆ. ಅಂದರೆ ಒಟ್ಟು 52 ಕೆಜಿ ಸ್ಫೋಟಕ ದೊರೆತಿದ್ದು, ಅವನ್ನು ವಶಪಡಿಸಿಕೊಳ್ಳಲಾಗಿದೆ.
ಅದೇ ರೀತಿಯಾದ ಇನ್ನೊಂದು ಸಿಂಟೆಕ್ಸ್ನಲ್ಲಿ 50 ಡಿಟೋನೇಟರ್ಸ್ ದೊರೆತಿವೆ. ಕರೇವಾದಲ್ಲಿನ ಈ ಸ್ಥಳವು ರಾಷ್ಟ್ರೀಯ ಹೆದ್ದಾರಿ ಮತ್ತು ಲೆಟಾಪೋರಾದ 9 ಕೆಎಂಎಸ್ಇಗೆ ಬಹಳ ಹತ್ತಿರದಲ್ಲಿದೆ ಮತ್ತು ಪುಲ್ವಾಮಾ ಘಟನೆ ಸಂಭವಿಸಿದ ಪ್ರದೇಶದಲ್ಲಿದೆ.
Last Updated : Sep 17, 2020, 10:58 PM IST